ಏಕದಿನ ಕ್ರಿಕೆಟ್ ನಲ್ಲಿ ಧೋನಿಯೇ 'ಕ್ಯಾಪ್ಟನ್ ಕಿಂಗ್'

Posted By:
Subscribe to Oneindia Kannada

ಧರ್ಮಶಾಲ, ಅಕ್ಟೋಬರ್ 17: ಏಕದಿನ ಕ್ರಿಕೆಟ್ ನಲ್ಲಿ ಅತ್ಯಂತ ಯಶಸ್ವಿ ನಾಯಕರ ಪೈಕಿ ಧೋನಿಯೇ ಕಿಂಗ್ ಎನಿಸಿಕೊಂಡಿದ್ದಾರೆ. ಹಾಲಿ ನಾಯಕರ ಪೈಕಿ ಧೋನಿ ಸಮಕ್ಕೆ ಯಾರೂ ಇಲ್ಲ. ನ್ಯೂಜಿಲೆಂಡ್ ವಿರುದ್ಧದ ಧರ್ಮಶಾಲ ಏಕದಿನ ಪಂದ್ಯವನ್ನು ಭಾರತ 6 ವಿಕೆಟ್ ಗಳಿಂದ ಗೆಲ್ಲುತ್ತಿದ್ದಂತೆ ಧೋನಿ ಈ ದಾಖಲೆ ಸಾಧಿಸಿದ್ದಾರೆ. ಆದರೆ, ಸರ್ವಕಾಲಿಕ ಯಶಸ್ವಿ ನಾಯಕರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಅಗ್ರಸ್ಥಾನದಲ್ಲಿದ್ದಾರೆ.

ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಸಾಧಕರ ಪಟ್ಟಿಯಲ್ಲಿ ಸದ್ಯಕ್ಕೆ ರಿಕಿ ಪಾಟಿಂಗ್ (165) ಮುಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯ(ಅಕ್ಟೋಬರ್ 16)ವನ್ನು ಗೆಲ್ಲುವ ಮೂಲಕ ಧೋನಿ ಅವರು ಈಗ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯದ ಅಲನ್ ಬಾರ್ಡರ್ ಹಾಗೂ ಧೋನಿ ತಲಾ 107 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದರು.[ಧೋನಿಗೆ 3 ದಾಖಲೆ ಮುರಿಯುವ ಚಾನ್ಸ್]

MS Dhoni sets another record, becomes 2nd most successful ODI captain

ಧೋನಿ ಅವರು ಇತ್ತೀಚೆಗೆ ಜಿಂಬಾಬ್ವೆ ಪ್ರವಾಸದಲ್ಲಿ ಸರಣಿ ಜಯ ಗಳಿಸಿದ ಮೇಲೆ ವಿಶಾಂತ್ರಿ ಪಡೆದಿದ್ದರು. ಈಗ ಕಿವೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ನಾಯಕರಾಗಿ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ. ಅಲಾನ್ ಬಾರ್ಡರ್ ಅವರು ಆಸ್ಟ್ರೇಲಿಯಾ ತಂಡವನ್ನು 1985 ರಿಂದ 1994ರ ತನಕ 178 ಏಕದಿನ ಪಂದ್ಯಗಳಲ್ಲಿ ಮುನ್ನಡೆಸಿ 107 ಪಂದ್ಯಗಳಲ್ಲಿ ವಿಜಯ ಪತಾಕೆ ಹಾರಿಸಿದ್ದರು. ಇವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಕೇವಲ 67 ಪಂದ್ಯಗಳನ್ನು ಕಳೆದುಕೊಂಡಿತ್ತು.[ಏಕದಿನ ಸರಣಿ ವೇಳಾಪಟ್ಟಿ]

ಧೋನಿ ಅವರು 196 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿ 107 ಬಾರಿ ಜಯಶೀಲರಾಗಿದ್ದು, 72 ಪಂದ್ಯಗಳನ್ನು ಕಳೆದುಕೊಂಡಿದ್ದಾರೆ. 2007ರಿಂದ ಇಲ್ಲಿ ತನಕ ಧೋನಿ ಅವರು ಭಾರತದ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ.[ವಿದೇಶಿ ನೆಲದಲ್ಲಿ ಸರಣಿ ಜಯ: ಧೋನಿಗೆ ಸರಿಸಾಟಿ ಯಾರಿಲ್ಲ!]

ಯಶಸ್ವಿ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಿಕಿ ಪಾಂಟಿಂಗ್ ಅವರು 230 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 165 ಗೆಲುವು ಹಾಗೂ 51 ಸೋಲು ಕಂಡಿದ್ದು, ಗೆಲುವಿನ ಸರಾಸರಿ ಶೇ76.14ರಷ್ಟಿದೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India skipper Mahendra Singh Dhoni added another feather in his illustrious cap as India won the first ODI against New Zealand by six wickets here at Himachal Pradesh Cricket Association (HPCA) Stadium here on Sunday (Oct 16).
Please Wait while comments are loading...