ಧೋನಿ ಅವರ 3 ಮೊಬೈಲ್ ಗಳನ್ನು ಲಪಟಾಯಿಸಿದ ಖದೀಮರು

Posted By:
Subscribe to Oneindia Kannada

ನವದೆಹಲಿ, ಮಾರ್ಚ್. ಮಾ.19 : ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹೋಟೆಲ್ ನಲ್ಲಿ ತಂಗಿದ್ದ ಅಗ್ನಿ ಅವಘಡದ ವೇಳೆ ಧೋನಿ ಅವರಿಗೆ ಸೇರಿದ ಮೂರು ಮೊಬೈಲ್ ಫೋನ್ ಗಳನ್ನು ಖದೀಮರು ಲಪಟಾಯಿಸಿದ್ದಾರೆ.

ಈ ಕುರಿತು ಧೋನಿ ಅವರು ಶನಿವಾರ ದ್ವಾರಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯವನ್ನಾಡಲು ಧೋನಿ ಮತ್ತು ಜಾರ್ಖಂಡ್ ಸಹ ಆಟಗಾರರು ದ್ವಾರಕಾದ ವೆಲ್ ಮ್ ಹೋಟೆಲ್ ನಲ್ಲಿ ತಂಗಿದ್ದರು.[ಧೋನಿ ತಂಗಿದ್ದ ದೆಹಲಿ ಹೊಟೇಲ್ ನಲ್ಲಿ ಬೆಂಕಿ ಅನಾಹುತ]

MS Dhoni's mobile phones stolen after fire at hotel, registers FIR with Delhi Police

ಈ ಸಂಧರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಕೂಡಲೇ ಧೋನಿ ಮತ್ತು ಉಳಿದ ಆಟಗಾರರು ತಂಗಿದ್ದ ಹೋಟೆಲ್ ನಿಂದ ಮತ್ತೊಂದು ಹೋಟೆಲ್ ಸ್ಥಳಾಂತರ ಮಾಡುವ ವೇಳೆ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ.

ಕಳುವಾದ ಮೂರು ಮೊಬೈಲ್ ಗಳ ಪೈಕಿ ಒಂದು ಐಫೋನ್ ಒಳಗೊಂಡಿದೆ. ಅದರಲ್ಲಿ ಟೀಂ ಇಂಡಿಯಾಗೆ ಮತ್ತು ಬಿಸಿಸಿಐಗೆ ಸಂಬಂಧಿಸಿದ ಕೆಲ ಪ್ರಮುಖ ಅಂಶಗಳು ಅದರಲ್ಲಿವೆಯಂತೆ.

ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ದ್ವಾರಕಾ ಡೆಪ್ಯೂಟಿ ಪೊಲೀಸ್ ಕಮಿಷಿನರ್ ಸರೇಂದ್ರ ಕುಮಾರ್ ಅವರು, ಹೋಟೆಲ್ ಸಿಬ್ಬಂದಿಗಳನ್ನು ವಿಚಾರಣೆ ನಡೆಸಲಾಗುವುದು ಹಾಗೂ ನ ಸಿಸಿ ಟಿವಿ ದೃಶ್ಯವಳಿಗಳನ್ನು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former India skipper Mahendra Singh Dhoni has registered an FIR at a police station in New Delhi after his mobile phone was lost in the fire at the hotel where he and Jharkhand team were staying.
Please Wait while comments are loading...