ನಾಯಕತ್ವ ತೊರೆದಿದ್ದೇಕೆ? ಧೋನಿಯಿಂದ ಕಾರಣ ಬಹಿರಂಗ

Posted By:
Subscribe to Oneindia Kannada

ಪುಣೆ, ಜನವರಿ 13 : ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಅರಂಭಕ್ಕೂ ಮುನ್ನ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರು ಶುಕ್ರವಾರದಂದು ಸುದ್ದಿಗಾರರೊಂದಿಗೆ ಮಾತನಾಡಿ, ನಾಯಕತ್ವದ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡಿದ್ದಾರೆ. ತಾವು ಏಕದಿನ ಹಾಗೂ ಟಿ20 ತಂಡದ ನಾಯಕತ್ವದಿಂದ ಹಿಂದೆ ಸರಿದಿದ್ದೇಕೆ? ಎಂಬುದನ್ನು ವಿವರಿಸಿದರು.

ನಾಯಕತ್ವ ತೊರೆದ ಬಳಿಕ ಇದು ಧೋನಿ ಅವರ ಮೊದಲ ಸುದ್ದಿಗೋಷ್ಠಿಯಾಗಿದ್ದು, ನಾಯಕತ್ವ ತೊರೆದಿದ್ದರ ನೈಜ ಕಾರಣ ಈಗ ಬಹಿರಂಗವಾಗಿದೆ. ಆದರೆ, ಇದು ಆತುರದ ನಿರ್ಧಾರ ಎಂಬ ವರದಿಯನ್ನು ಧೋನಿ ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಬಿಸಿಸಿಐಗೆ ಮುಂಚಿತವಾಗಿ ತಿಳಿಸಿದ್ದೆ ಎಂದಿದ್ದಾರೆ.

ಐಸಿಸಿ ಆಯೋಜನೆಯ ಮೂರು ವಿಶ್ವ ಮಟ್ಟದ ಕಪ್ ಎತ್ತಿ ಹಿಡಿದ ತಂಡದ ಏಕೈಕ ನಾಯಕನಾಗಿ ದಾಖಲೆ ಹೊಂದಿರುವ ಧೋನಿ ಅವರು ನಾಯಕತ್ವ ತೊರೆದ ಬಳಿಕ ಆಟಗಾರನಾಗಿ ಯಾವ ರೀತಿ ಆಡಲಿದ್ದಾರೆ ಕಾದು ನೋಡಬೇಕಿದೆ.ಜನವರಿ 15 ರಿಂದ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಆರಂಭವಾಗಲಿದ್ದು, ನಂತರ ಮೂರು ಟಿ20 ಪಂದ್ಯಗಳು ನಡೆಯಲಿದೆ, ಫೆಬ್ರವರಿ 1ರಂದು ಸರಣಿ ಕೊನೆಗೊಳ್ಳಲಿದೆ. (ಒನ್ಇಂಡಿಯಾ ಸುದ್ದಿ)

ಆಸ್ಟ್ರೇಲಿಯಾ ಪ್ರವಾಸದ ನಂತರ

ಆಸ್ಟ್ರೇಲಿಯಾ ಪ್ರವಾಸದ ನಂತರ

2014ರ ಆಸ್ಟ್ರೇಲಿಯಾ ಪ್ರವಾಸದ ನಂತರ ಟೆಸ್ಟ್ ನಾಯಕತ್ವವನ್ನು ತೊರೆದೆ. ಏಕದಿನ ಹಾಗೂ ಟಿ20 ತಂಡದ ನಾಯಕತ್ವ ತೊರೆಯುವ ಬಗ್ಗೆ ಕೂಡಾ ಆಲೋಚಿಸಿದ್ದೆ. ಆದರೆ, ವಿರಾಟ್ ಕೊಹ್ಲಿ ಅವರು ಟೆಸ್ಟ್ ನಾಯಕತ್ವ ವಹಿಸಿಕೊಂಡು ಯಶಸ್ವಿಯಾಗಿ ತಂಡವನ್ನು ಮುನ್ನಡೆಸುವ ತನಕ ಕಾಯಬೇಕಾಯಿತು.

ಪ್ರತ್ಯೇಕ ನಾಯಕ ಹೊಂದುವುದು ಸರಿಯಲ್ಲ

ಪ್ರತ್ಯೇಕ ನಾಯಕ ಹೊಂದುವುದು ಸರಿಯಲ್ಲ

ಒಬ್ಬ ಆಟಗಾರ ಮುನ್ನಡೆಸಲು ಯೋಗ್ಯ ಎಂದ ಮೇಲೆ ಎಲ್ಲಾ ಮಾದರಿಗೂ ಅನ್ವಯವಾಗಬೇಕಾಗುತ್ತದೆ. ಹೀಗಾಗಿ ಟೆಸ್ಟ್ ನಾಯಕತ್ವವನ್ನು ಕೊಹ್ಲಿಗೆ ನೀಡಿದ ಸಮಯದಲ್ಲೇ ನನಗೆ ನಾಯಕತ್ವ ತೊರೆಯುವ ಮನಸ್ಸಾಗಿತ್ತು. ಆದರೆ, ಈಗ ಕೊನೆಗೂ ನಾಯಕತ್ವ ಕೊಹ್ಲಿ ಕೈ ಸೇರಿದೆ. ಕೊಹ್ಲಿ ಸಮರ್ಥವಾಗಿ ಟೆಸ್ಟ್ ತಂಡವನ್ನು ಮುನ್ನಡೆಸಿ ಸರಣಿ ವಿಜಯ ತಂದುಕೊಟ್ಟಿದ್ದಾರೆ. ಕೊಹ್ಲಿ ಮೇಲೆ ಇರುವ ವಿಶ್ವಾಸ ಇಮ್ಮಡಿಯಾಗಿದೆ ಎಂದರು.

ಪ್ರತ್ಯೇಕ ನಾಯಕತ್ವದಲ್ಲಿ ನಂಬಿಕೆ ಇಲ್ಲ

ಪ್ರತ್ಯೇಕ ನಾಯಕತ್ವದಲ್ಲಿ ನಂಬಿಕೆ ಇಲ್ಲ

ಕೊಹ್ಲಿ ಅವರು ಎಲ್ಲಾ ಮಾದರಿ ತಂಡವನ್ನು ಮುನ್ನಡೆಸಲು ಸಮರ್ಥರು ಎಂದು ಆತ್ಮವಿಶ್ವಾಸ ಮೂಡಿದ ಬಳಿಕ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಜಾರ್ಖಂಡ್ ಮೂಲದ 35 ವರ್ಷ ವಯಸ್ಸಿನ ಧೋನಿ ಹೇಳಿದರು. ಏಕದಿನ, ಟಿ20 ಹಾಗೂ ಟೆಸ್ಟ್ ತಂಡಗಳಿಗೆ ಪ್ರತ್ಯೇಕ ನಾಯಕತ್ವ ಇರುವುದು ನನಗೆ ಇಷ್ಟವಿಲ್ಲ. ಇದರ ಬಗ್ಗೆ ಬಿಸಿಸಿಐ ಜತೆ ಮಾತುಕತೆ ನಡೆಸಿದ್ದೆ. ಆದರೆ, ಕಾಲ ಕೂಡಿ ಬಂದಿರಲಿಲ್ಲ. ತಂಡದ ನಾಯಕನಾಗಿ ನಾನು ಒತ್ತಡ ಹೆಚ್ಚಾಗಿ ಹುದ್ದೆ ತೊರೆಯುತ್ತಿಲ. ಬದಲಿಗೆ ಸಮರ್ಥ ನಾಯಕ, ಕಾಲಕ್ಕಾಗಿ ಕಾದಿದ್ದೆ.

ವಿಕೆಟ್ ಕೀಪರ್ ಮಹತ್ವ

ವಿಕೆಟ್ ಕೀಪರ್ ಮಹತ್ವ

ಪ್ರತಿ ತಂಡದಲ್ಲೂ ವಿಕೆಟ್ ಕೀಪರ್ ಉಪ ನಾಯಕನ ಪಾತ್ರ ವಹಿಸಬೇಕಾಗುತ್ತದೆ. ಹೀಗಾಗಿ ಕೊಹ್ಲಿಗೆ ಸಲಹೆ ಸೂಚನೆ ನೀಡುವ ಕೆಲಸ ಮುಂದುವರೆಯಲಿದೆ. ಬ್ಯಾಟಿಂಗ್ ಕ್ರಮಾಂಕ, ಶೈಲಿಯಲ್ಲಿ ಬದಲಾವಣೆ ಅಗತ್ಯವಾದರೆ ನಾನು ಬದಲಾವಣೆಗೆ ಸಿದ್ಧ. ಈಗಾಗಲೇ ಈ ಬಗ್ಗೆ ಕೊಹ್ಲಿ ಜತೆ ಮಾತನಾಡಿದ್ದೇನೆ. ತಂಡ ಅಥವಾ ತಂಡದ ಆಟಗಾರರೇನು ನನಗೆ ಹೊಸದಲ್ಲ, ಹೊಸದಾಗಿ ಏನು ಮಾಡಬೇಕಿಲ್ಲ ಎಂದು ಧೋನಿ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Days after he stunned the cricket fraternity with his decision to quit captaincy ahead of the the ODI series against England, Mahendra Singh Dhoni has finally revealed the reason for his decision to step down.
Please Wait while comments are loading...