ವಿಜಯ ಹಜಾರೆ ಟ್ರೋಫಿ 2017: ಜಾರ್ಖಂಡ್ ಪರ ಧೋನಿ ಕಣಕ್ಕೆ!

Written By: Ramesh
Subscribe to Oneindia Kannada

ಮೊಹಲಿ, ಅಕ್ಟೋಬರ್. 24 : ಕೋಲ್ಕತ್ತದಲ್ಲಿ 2017 ಫೆಬ್ರವರಿಯಿಂದ ಆರಂಭವಾಗುವ ವಿಜಯ ಹಜಾರೆ ಏಕದಿನ ಟ್ರೋಫಿಯಲ್ಲಿ ತವರು ರಾಜ್ಯ ಜಾರ್ಖಂಡ್ ಪರವಾಗಿ ಬ್ಯಾಟಿಂಗ್ ಮಾಡಲಿದ್ದಾರೆ.ಹೀಗೆಂದು ಸ್ವತಃ ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ಗಳ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಖಚಿತ ಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದಿದ್ದ 2015 ರ ವಿಜಯ ಹಜಾರೆ ಏಕದಿನ ಟ್ರೋಫಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಜಾರ್ಖಂಡ್ ಪರ ಕಣಕ್ಕಿಳಿದಿದ್ದರು. ಮುಂದಿನ 2017ನೇ ವಿಜಯ ಹಜಾರೆ ಟ್ರೋಫಿಯಲ್ಲಿ ಜಾರ್ಖಂಡ್ ಪರವಾಗಿ ಆಡುವುದಾಗಿ ಧೋನಿ ಮಾಧ್ಯಮಗಳಿಗೆ ಮುಂದೆ ತಿಳಿಸಿದ್ದಾರೆ.

Dhoni

ಧೋನಿ 80,ವಿರಾಟ್ ಕೋಹ್ಲಿ ಅಜೇಯ 154 ನೆರವಿನಿಂದ ಭಾನುವಾರ ಭಾರತ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ಗಳಿಂದ ಭರ್ಜರಿ ಗೆಲವು ಪಡೆದುಕೊಂಡಿದೆ.

ಗೆಲುವಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಧೋನಿ "ಮುಂಬರುವ ಇಂಗ್ಲೆಂಡ್ ಸರಣಿ ಅಷ್ಟೇ ಅಲ್ಲದೇ ರಣಜಿ(ವಿಜಯ ಹಜಾರೆ ಏಕದಿನ ಟ್ರೋಫಿಯಲ್ಲಿ ಆಡುವುದಾಗಿ" ಹೇಳಿದರು.

ಫೆಬ್ರವರಿ 25 2017 ರಂದು ಜಾರ್ಖಂಡ್ ತಂಡ ಕೋಲ್ಕತ್ತದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಎದುರಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Like last year, Mahendra Singh Dhoni has confirmed his participation in the Vijay Hazare Trophy one day tournament starting in February 2017.
Please Wait while comments are loading...