ಆಸ್ಟ್ರೇಲಿಯಾಕ್ಕೆ ಬಂದಿಳಿದ ಎಂಎಸ್ ಧೋನಿ ಪಡೆ

Posted By:
Subscribe to Oneindia Kannada

ಮೆಲ್ಬೋರ್ನ್, ಜ. 07: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾ ನೆಲಕ್ಕೆ ಕಾಲಿಟ್ಟಿದೆ. ಜನವರಿ 12 ರಿಂದ ಏಕದಿನ ಸರಣಿಗಾಗಿ ಧೋನಿ ಪಡೆ ಕಾತುರದಿಂದ ಕಾದಿದೆ. ಆಸೀಸ್ ನೆಲಕ್ಕೆ ಬಂದ ಮೇಲೆ ಭಾರತ ತಂಡದ ಕ್ರಿಕೆಟರ್ ಗಳು ಸಂತಸದಿಂದ ಟ್ವೀಟ್ ಮಾಡಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡುವ ಉತ್ತಮ ವಾರ್ಷಿಕ ಕ್ರಿಕೆಟರ್ ಪಾಲಿ ಉಮ್ರಿಗರ್ ಪ್ರಶಸ್ತಿ ಪಡೆದ ಖುಷಿಯಲ್ಲಿರುವ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರು ಆಸೀಸ್ ನಲ್ಲಿ ಆಡುವುದು ಸಂತೋಷ ನೀಡುತ್ತದೆ ಎಂದಿದ್ದಾರೆ.[2016ರ ಆಸ್ಟ್ರೇಲಿಯಾ vs ಟೀಂ ಇಂಡಿಯಾ ಸರಣಿ ವೇಳಾಪಟ್ಟಿ]

ಮುಂಬರುವ ಟಿ20 ವಿಶ್ವಕಪ್ ಗೆ ತಯಾರಿ ನಡೆಸಲು ಆಸ್ಟ್ರೇಲಿಯಾ ಸರಣಿ ಪ್ರಮುಖ ಪಾತ್ರ ವಹಿಸಲಿದೆ. ಮಾರ್ಚ್- ಏಪ್ರಿಲ್ ತಿಂಗಳಿನಲ್ಲಿ ಭಾರತದಲ್ಲಿ ವಿಶ್ವ ಟಿ20 ನಡೆಯಲಿದೆ. ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ.

2014ರ ನವೆಂಬರ್ ನಲ್ಲಿ ಅಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ 4 ಟೆಸ್ಟ್ ಹಾಗೂ ತ್ರಿಕೋನ ಏಕದಿನ ಸರಣಿ ಪಂದ್ಯವನ್ನಾಡಿತ್ತು. ಟೆಸ್ಟ್ ಸರಣಿ ಸಂಪೂರ್ಣವಾಗಿ ಸೋತರೆ, ತ್ರಿಕೋನ ಸರಣಿಯಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಫೈನಲ್ ತಲುಪಿದ್ದವು. 47 ವರ್ಷಗಳ ಇತಿಹಾಸದಲ್ಲೇ ಖಾಲಿ ಕೈ ಹೊತ್ತು ಟೀಂ ಇಂಡಿಯಾ ಮರಳಬೇಕಾಯಿತು.

ಎರಡು ಅಭ್ಯಾಸ ಪಂದ್ಯಗಳು

ಎರಡು ಅಭ್ಯಾಸ ಪಂದ್ಯಗಳು

ಭಾರತದ ತಂಡ ಪರ್ತ್ ನ ವಾಕಾ ಮೈದಾನದಲ್ಲಿ ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ ಟಿ20 ಪಂದ್ಯವನ್ನಾಡಲಿವೆ. ನಂತರ ಇದೇ ತಂಡದ ವಿರುದ್ಧ 50 ಓವರ್ ಗಳ ಪಂದ್ಯವನ್ನಾಡಲಿದೆ. ಜ.12ರಿಂದ ಏಕದಿನ ಸರಣಿ ಆರಂಭವಾಗಲಿದೆ. ಟಿ20 ಟೂರ್ನಿಗೂ ಮುನ್ನ ಭಾರತ ತಂಡವನ್ನು ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಆಶೀಶ್ ನೆಹ್ರಾ ಸೇರಲಿದ್ದಾರೆ.

ಎಂಎಸ್ ಧೋನಿ ಸರಣಿಗೂ ಮುನ್ನ ತಯಾರಿ

ಎಂಎಸ್ ಧೋನಿ ಸರಣಿಗೂ ಮುನ್ನ ತಯಾರಿ ಬಗ್ಗೆ ಮಾತನಾಡಿದ್ದಾರೆ. ಹೊಸ ಕೇಶ ವಿನ್ಯಾಸದ ಬಗ್ಗೆ ಹೇರ್ ಸ್ಟೈಲಿಷ್ ಜೊತೆ ಧೋನಿ ಮಾತುಕತೆ ನಡೆಸುವ ವಿಡಿಯೋ ಕ್ಲಿಪ್ಪಿಂಗ್.

ಪರ್ತ್ ಸಕತ್ ಬಿಸಿಲು, ಒಳ್ಳೆ ನೆಟ್ ಅಭ್ಯಾಸ

ಪರ್ತ್ ಸಕತ್ ಬಿಸಿಲು, ಒಳ್ಳೆ ನೆಟ್ ಅಭ್ಯಾಸವಾಗಿದೆ ಎಂದು ಟ್ವೀಟ್ ಮಾಡಿದ ವಿರಾಟ್ ಕೊಹ್ಲಿ.

ಮೊಟ್ಟ ಮೊದಲ ಅಭ್ಯಾಸ ಆರಂಭ

2016ರ ಮೊಟ್ಟ ಮೊದಲ ಅಭ್ಯಾಸ ಆರಂಭ ಎಂದು ರೋಹಿತ್ ಶರ್ಮ ಟ್ವೀಟ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Mahendra Singh Dhoni-led Indian cricket team reached Australia for the limited-overs series starting January 12.
Please Wait while comments are loading...