ಗಂಗೂಲಿ ಏಕೆ ಧೋನಿಯನ್ನು ಟಾರ್ಗೆಟ್ ಮಾಡ್ತಿದ್ದಾರೆ?

Posted By:
Subscribe to Oneindia Kannada

ಕೋಲ್ಕತ್ತಾ, ಮೇ 11: ಟೀಂ ಇಂಡಿಯಾದ ಮುಂದಿನ ಕೋಚ್ ಆಯ್ಕೆಯಲ್ಲಿ ಮಹತ್ವದ ಪಾತ್ರ ವಹಿಸಲಿರುವ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಇದ್ದಕ್ಕಿದ್ದಂತೆ ತಂಡ ನಾಯಕನ ಬಗ್ಗೆ ಮಾತನಾಡಿದ್ದಾರೆ. ಮುಂದಿನ ವಿಶ್ವಕಪ್ ಗೆ ಧೋನಿಯನ್ನು ನಾಯಕನನ್ನಾಗಿ ನೋಡಲು ಇಷ್ಟಪಡುವುದಿಲ್ಲ ಎಂದಿದ್ದಾರೆ.

2019ರ ಏಕದಿನ ವಿಶ್ವಕಪ್​ವರೆಗೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಸಾಮರ್ಥ್ಯ ಧೋನಿ ಬಳಿಯಿದೆಯೇ? ಎಂಬ ಪ್ರಶ್ನೆ ಕೇಳಿಕೊಳ್ಳಬೇಕಿದೆ. ಭಾರತ ಕ್ರಿಕೆಟ್​ನ ಭವಿಷ್ಯದ ದೃಷ್ಟಿಯಿಂದ ಚಿಂತಿಸಿ ಆಯ್ಕೆ ಮಾಡಬೇಕಿದೆ. [ಕೊಹ್ಲಿ ನಾಯಕನಾಗಲು ಇದು ಸಕಾಲವಲ್ಲ: ಗವಾಸ್ಕರ್]

ಯುವ ಪ್ರತಿಭೆಗಳಿಗೆ ಅವಕಾಶ ನೀಡಬೇಕಿದೆ ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.[ನೆಹ್ರಾ-ಟೀಂ ಇಂಡಿಯಾದ ಬೌಲಿಂಗ್ ಕೋಚ್?]

MS Dhoni leading India in World Cup 2019 would be 'very surprising': Sourav Ganguly

ಭಾರತ ಕ್ರಿಕೆಟ್​ಗೆ ಧೋನಿ ನೀಡಿರುವ ಕೊಡುಗೆ ಅಪಾರ. ಆದರೆ, ಇದೀಗ ಭವಿಷ್ಯದ ತಂಡ ನಿರ್ಮಿಸಬೇಕಾಗಿದೆ. ಧೋನಿ ಸ್ಥಾನವನ್ನು ತುಂಬಬಲ್ಲ ಮತ್ತೊಬ್ಬ ಆಟಗಾರರಿಗೆ ಅವಕಾಶ ನೀಡಬೇಕು. [ಟೀಂ ಇಂಡಿಯಾದಿಂದ ಜಿಂಬಾಬ್ವೆ ಪ್ರವಾಸ]

ಸದ್ಯದ ಪರಿಸ್ಥಿತಿಯಲ್ಲಿ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಸ್ಥಿರ ಪ್ರದರ್ಶನ ನೀಡುತ್ತಿದ್ದು, ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At a time when his critics are talking about Team India's limited overs skipper MS Dhoni's retirement, former India captain Sourav Ganguly feels there is no reason for Captain Cool to quit though he doubts if MSD will be able to lead India in World Cup 2019.
Please Wait while comments are loading...