ಎಂಎಸ್ ಧೋನಿಯ ನಂ.1 ಗೆಳೆಯ Ad ಚಿತ್ರ ಸೂಪರ್ ಗುರೂ!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 26: ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಜೀವನ ಆಧಾರಿತ ಚಿತ್ರಕ್ಕಾಗಿ ಎಲ್ಲರೂ ಕಾಯುತ್ತಿರುವಾಗ, ಜಾಹೀರಾತೊಂದರ ಮೂಲಕ ಧೋನಿ ಮನೆ ಮಾತಾಗುತ್ತಿದ್ದಾರೆ. ಮೆಕ್ ಡೋವೆಲ್ ಸೋಡಾಗಾಗಿ ನಿರ್ಮಿಸಲಾದ ಈ ಕಿರುಚಿತ್ರವನ್ನು ಲಕ್ಷಾಂತರ ಮಂದಿ ನೋಡಿ ಮೆಚ್ಚಿದ್ದಾರೆ.

ಎಂಎಸ್ ಧೋನಿ ನಟನೆಯ ಈ ಕಿರುಚಿತ್ರದಂತಿರುವ ಜಾಹೀರಾತಿನಲ್ಲಿ ಧೋನಿ ಅವರು ತಮ್ಮ 'ಅಸಲಿ ಗೆಳೆಯ' ನ ಬಗ್ಗೆ ಹೇಳುತ್ತಾರೆ. ತಮ್ಮ ಊರಾದ ರಾಂಚಿಗೆ ತೆರಳಿ ತಮ್ಮ ಆಪ್ತ ಗೆಳೆಯರನ್ನು ಭೇಟಿ ಮಾಡುತ್ತಾರೆ. [ಧೋನಿ ಬದುಕಿನ 'ಅನ್ ಟೋಲ್ಡ್ ಸ್ಟೋರಿ' ಟ್ರೇಲರ್ ವೈರಲ್]

Watch video: 'Dhoni Ki No.1 Yaari' ad is winning hearts

ಬಾಲ್ಯದ ಇಬ್ಬರು ಆಪ್ತ ಗೆಳೆಯರೊಡನೆ ಧೋನಿ ಅವರು ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಹತ್ತು ಹಲವು ಬ್ರ್ಯಾಂಡ್ ಗಳಿಗೆ ರಾಯಭಾರಿಯಾದರೂ ಗೆಳೆಯರೊಡನೆ ನಟಿಸಿದ ಈ ಜಾಹೀರಾತು ಧೋನಿಗೂ ಸಕತ್ ಖುಷಿ ಕೊಟ್ಟಿದೆಯಂತೆ.[ಟೀಂ ಇಂಡಿಯಾಕ್ಕೆ ಮಿಯಾಮಿ ಹೀಟ್ಸ್ ಚಾಲೆಂಜ್]

ಸುಶಾಂತ್ ಸಿಂಗ್ ಅಭಿನಯದ ಧೋನಿ ಜೀವನ ಆಧಾರಿತ ಚಿತ್ರ 'ಧೋನಿ: ದಿ ಅನ್ ಟೋಲ್ಡ್ ಸ್ಟೋರಿ' ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ನೀರಜ್ ಪಾಂಡೆ ನಿರ್ದೇಶನದ ಈ ಚಿತ್ರ ಸೆಪ್ಟೆಂಬರ್ 30 ರಂದು ತೆರೆ ಕಾಣಲಿದೆ.

ಬಹುನಿರೀಕ್ಷಿತ ಧೋನಿ ಚಿತ್ರದ ಟ್ರೈಲರ್ ಆಗಸ್ಟ್ 11 ರಂದು ಬಿಡುಗಡೆಯಾಗಿ ಹಿಟ್ ಆಗಿದೆ. ಹಳ್ಳಿ ಹುಡುಗನೊಬ್ಬ ರೈಲ್ವೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದು, ಕ್ರಿಕೆಟ್ ಆಡುತ್ತಾ ಮುಂದೊಂದು ದಿನ ಟೀಂ ಇಂಡಿಯಾದ ನಾಯಕನಾಗಿ ಯಶಸ್ವಿಯಾಗಿ ಮೂರು ಕಪ್ ಗಳನ್ನು ಗೆದ್ದುಕೊಂಡ ಕಥೆ ಕಾಣಲು ಎಲ್ಲರೂ ಕಾದಿದ್ದಾರೆ. ಸದ್ಯಕ್ಕೆ ಮೆಕ್ ಡೊವೆಲ್ ಜಾಹೀರಾತಿನಲ್ಲಿ ಅಸಲಿ ಧೋನಿಯ ನಟನೆ ನೋಡಿ ಆನಂದಿಸಿ (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
At a time when fans are anxiously waiting for the biopic on India's most successful captain MS Dhoni, a short film featuring the legendary Indian cricketer himself is winning hearts.
Please Wait while comments are loading...