ಸಚಿನ್ ಸಾಲಿನಲ್ಲಿ ನಿಂತ ಶತಕ ವೀರ ಎಂಎಸ್ ಧೋನಿ

Posted By:
Subscribe to Oneindia Kannada

ಕಟಕ್, ಜನವರಿ 19: ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವುದಕ್ಕೂ ಮುನ್ನವೇ ಮಾಜಿ ನಾಯಕ ಎಂಎಸ್ ಧೋನಿ ಅವರು ದಾಖಲೆಯೊಂದನ್ನು ಮುರಿದು, ಸಚಿನ್ ತೆಂಡೂಲ್ಕರ್ ಅವರ ಸಾಲಿನಲ್ಲಿ ನಿಂತಿದ್ದಾರೆ.

ಎಂಎಸ್ ಧೋನಿ ಅವರು ಭಾರತದಲ್ಲಿ 4,000 ರನ್ ಗಳಿಸಿದ್ದು, ಸಚಿನ್ ತೆಂಡೂಲ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

MS Dhoni joins Sachin Tendulkar's elite club, completes 4000 ODI runs in India

ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಮೂರನೇ ಸ್ಥಾನದಲ್ಲಿದ್ದು, ಭಾರತದ ಪಿಚ್ ಗಳಲ್ಲಿ ಒಟ್ಟು 3406 ಏಕದಿನ ರನ್ ಗಳನ್ನು ಗಳಿಸಿದ್ದಾರೆ. ಧೋನಿ ಅವರು ನಾಯಕತ್ವ ತೊರೆದ ಬಳಿಕ ಶತಕ ಬಾರಿಸಿದರು. ಶತಕ ಗಳಿಕೆಗೂ ಮುನ್ನ ಲಿಯಾಮ್ ಪ್ಲಂಕೆಟ್ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ 4000 ರನ್ ಗಡಿ ದಾಟಿದರು.

284 ಏಕದಿನ ಪಂದ್ಯಗಳಿಂದ 9,216 ಪ್ಲಸ್ ರನ್ ಗಳಿಸಿರುವ ಧೋನಿ ಅವರಿಗಿಂತ ತೆಂಡೂಲ್ಕರ್ (18,426 ರನ್), ಸೌರವ್ ಗಂಗೂಲಿ(11,221), ದ್ರಾವಿಡ್ (10,768), ಮೊಹಮ್ಮದ್ ಅಜರುದ್ದೀನ್ (9378) ಮುಂದಿದ್ದಾರೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's star cricketer Mahendra Singh Dhoni claimed another record under his belt during during the second one-day international (ODI) match against England here on Thursday (Jan 15).
Please Wait while comments are loading...