324 ಪಂದ್ಯ: ರಿಕಿ ಪಾಂಟಿಂಗ್ ದಾಖಲೆ ಸಮಕ್ಕೆ ಎಂಎಸ್ ಧೋನಿ

Posted By:
Subscribe to Oneindia Kannada

ಹರಾರೆ, ಜೂನ್ 23: ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದ ಧೋನಿ ಅವರು ಸಂಭ್ರಮದಲ್ಲಿದ್ದಾರೆ. ಅವರ ಸಂಭ್ರಮಕ್ಕೆ ಮತ್ತೊಂದು ಸಾಧನೆ ಗರಿ ಸೇರಿದೆ. ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಸಾಧನೆ ಮಾಡಿರುವ ರಿಕಿ ಪಾಂಟಿಂಗ್ ದಾಖಲೆ ಸಮಕ್ಕೆ ಧೋನಿ ನಿಂತಿದ್ದಾರೆ.

ಧೋನಿ ಅವರು ನಾಯಕನಾಗಿ 324ನೇ ಪಂದ್ಯ ಆಡುವ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆಯನ್ನು ಸಮಗಟ್ಟಿರುವುದು ಇನ್ನೊಂದು ಖುಷಿ.

MS Dhoni equals Ricky Ponting's record by leading India in 324th game

ಹರಾರೆ ಸ್ಪೋಟ್ಸ್ ಕ್ಲಬ್​ನಲ್ಲಿ ಬುಧವಾರ ನಡೆದ ಟಿ20 ಪಂದ್ಯದಲ್ಲಿ ಧೋನಿ ಹೊಸ ಸಾಧನೆ ಮಾಡಿದರು. ಪಾಟಿಂಗ್ ದಾಖಲೆಯನ್ನು ಮುರಿಯಲು ಇನ್ನು ಕೇವಲ ಒಂದು ಪಂದ್ಯ ಮಾತ್ರ ಅಗತ್ಯವಿದೆ.

ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಯಶಸ್ವಿಯಾಗಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದ ಪಾಂಟಿಂಗ್ ನಾಯಕನಾಗಿ 324 ಪಂದ್ಯಗಳನ್ನು ಆಡಿದ್ದಾರೆ. 2012ರಲ್ಲಿ ಪಾಂಟಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ. ಇದರಿಂದಾಗಿ ಧೋನಿಗೆ ಈಗ ಯಾರೂ ಪ್ರತಿಸ್ಪರ್ಧಿ ಇಲ್ಲ ಎನ್ನಬಹುದು.

MS Dhoni equals Ricky Ponting's record by leading India in 324th game

2007ರಲ್ಲಿ ಮೊದಲನೇ ಬಾರಿ ನಾಯಕ ಪಟ್ಟ ಅಲಂಕರಿಸಿದ್ದ ಧೋನಿ, ನಾಯಕನಾಗಿ ಧೋನಿ 60 ಟೆಸ್ಟ್ ಪಂದ್ಯ, 194 ಏಕದಿನ ಹಾಗೂ 70 ಟಿ20 ಪಂದ್ಯದಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ.
MS Dhoni equals Ricky Ponting's record by leading India in 324th game

ಪಾಕಿಸ್ತಾನದ ವಿರುದ್ಧ ಟಿ20 ವಿಶ್ವಕಪ್ ಗೆದ್ದ ಸಾಧನೆಯೊಂದಿಗೆ ನಾಯಕನಾಗಿ ವೃತ್ತಿ ಬದುಕು ಆರಂಭಿಸಿದ ಧೋನಿ ಅವರು 27 ಟೆಸ್ಟ್ ಜಯಸಿದ್ದು, 107 ಏಕದಿನ ಹಾಗೂ 40 ಟಿ20 ಪಂದ್ಯದಲ್ಲಿ ಗೆಲುವು ತಂದು ಕೊಟ್ಟಿದ್ದಾರೆ.
34ವರ್ಷ ವಯಸ್ಸಿನ ಧೋನಿ ಅವರ ನಾಯಕತವದಲ್ಲಿ ಭಾರತ ತಂಡ 2007ರಲ್ಲಿ ವಿಶ್ವ ಟಿ20, 2011ರ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. 2014ರಲ್ಲಿ ಟೆಸ್ಟ್ ಕ್ರಿಕೆಟಿಗೆ ನಿವೃತಿ ಘೊಷಿಸಿದ್ದಾರೆ. ಏಕದಿನ ಹಾಗೂ ಟಿ20 ಕ್ರಿಕೆಟ್ ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಹಾಗೂ ನಾಯಕರಾಗಿ ಮುಂದುವರೆದಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian cricket captain Mahendra Singh Dhoni today (June 22) equalled Australian great Ricky Ponting's record of leading the side in 324 international matches across all formats.
Please Wait while comments are loading...