ಬಾರ್ಡರ್ 'ರೆಕಾರ್ಡ್ ಗೆರೆ' ಸಮಕ್ಕೆ ನಿಂತ ಧೋನಿ

Posted By:
Subscribe to Oneindia Kannada

ಹರಾರೆ, ಜೂನ್ 15: ಏಕದಿನ ಕ್ರಿಕೆಟ್ ನ ಅತ್ಯಂತ ಯಶಸ್ವಿ ನಾಯಕರ ಪಟ್ಟಿಯಲ್ಲಿ ಭಾರತದ ಎಂಎಸ್ ಧೋನಿ ಎರಡನೇ ಸ್ಥಾನಕ್ಕೇರಿದ್ದಾರೆ. ಜಿಂಬಾಬ್ವೆ ವಿರುದ್ಧದ 3-0 ಸರಣಿ ಜಯದೊಂದಿಗೆ ಆಸ್ಟ್ರೇಲಿಯಾದ ಅಲಾನ್ ಬಾರ್ಡರ್ ಅವರ ದಾಖಲೆಯನ್ನು ಸಮಗೊಳಿಸಿದರು.

ಕ್ಯಾಪ್ಟನ್ ಕೂಲ್ ಧೋನಿ ಅವರು ನಾಯಕನಾಗಿ 107ನೇ ಏಕದಿನ ಪಂದ್ಯ ಗೆಲುವು ಸಾಧಿಸಿ(ಜೂನ್ 15) ಬಾರ್ಡರ್ ಅವರ ದಾಖಲೆ ಸಮಗೊಳಿಸಿದ್ದಲ್ಲದೆ, ಸರ್ವಕಾಲಿಕ ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಎರಡು ಬಾರಿ ಆಸ್ಟ್ರೇಲಿಯಾಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರು ಸರ್ವಶ್ರೇಷ್ಠ ನಾಯಕ ಎನಿಸಿದ್ದಾರೆ.[ಏಕದಿನ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದ ಧೋನಿ]

MS Dhoni equals Allan Border's record, becomes 2nd most successful ODI captain

ಬಾರ್ಡರ್ ಅವರು 178 ಏಕದಿನ ಪಂದ್ಯಗಳಲ್ಲಿ 1985 ರಿಂದ 1994 ರ ತನಕ ಆಸ್ಟ್ರೇಲಿಯಾದ ನಾಯಕರಾಗಿ ಕಾರ್ಯನಿರ್ವಹಿಸಿ 107 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ 67 ಪಂದ್ಯಗಳನ್ನು ಮಾತ್ರ ಕಳೆದುಕೊಂಡಿದೆ.[ವಿದೇಶಿ ನೆಲದಲ್ಲಿ ಸರಣಿ ಜಯ: ಧೋನಿಗೆ ಸರಿಸಾಟಿ ಯಾರಿಲ್ಲ!]

ಧೋನಿ ಅವರು 2007-2016 ಅವಧಿಯಲ್ಲಿ 194 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿ 107 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. 72 ಪಂದ್ಯಗಳಲ್ಲಿ ಭಾರತ ಸೋಲು ಕಂಡಿದೆ. [ಪೊಲೀಸರ ಬೈಕ್ ಏರಿದ ನಾಯಕ ಧೋನಿ]

ಈ ಮೂಲಕ ಧೋನಿ ಅವರು ಹೆಚ್ಚು ಪಂದ್ಯದಲ್ಲಿ ನಾಯಕತ್ವ ವಹಿಸಿದವರ ಪಟ್ಟಿಯಲ್ಲಿ ಶ್ರೀಲಂಕಾದ ಅರ್ಜುನ್ ರಣತುಂಗ ಅವರನ್ನು ಹಿಂದಕ್ಕೆ ಹಾಕಿದ್ದಾರೆ. ರಣತುಂಗ ಅವರು 193 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರು.

ರಿಕಿ ಪಾಂಟಿಂಗ್ ಅವರು ಅಗ್ರಸ್ಥಾನದಲ್ಲಿದ್ದು, 230 ಪಂದ್ಯಗಳಲ್ಲಿ 165 ಗೆಲುವು, 51 ಸೋಲು ಕಂಡಿದ್ದರು. ಗೆಲುವಿನ ಶೇಕಡಾವಾರು 76.14ರಷ್ಟಿದೆ.ಭಾರತದ ಪಾಲಿಗೆ ಧೋನಿ ಅವರು ಅತ್ಯಂತ ಯಶಸ್ವಿ ನಾಯಕರಾಗಿದ್ದು, ಐಸಿಸಿ ಆಯೋಜನೆಯ ಎಲ್ಲಾ ಮೂರು ವಿಶ್ವಕಪ್ ಗಳನ್ನು ಗೆದ್ದಿದಾರೆ. 2007ರಲ್ಲಿ ಟಿ20, 2011ರಲ್ಲಿ ಐಸಿಸಿ ವಿಶ್ವಕಪ್, ಗೆಲ್ಲಿಸಿದ್ದಲ್ಲದೆ 18 ತಿಂಗಳುಗಳ ಕಾಲ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ನಂ. 1 ಸ್ಥಾನದಲ್ಲಿತ್ತು. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
MS Dhoni equals Allan Border's record, becomes 2nd most successful ODI captain As a young Indian cricket team finished a 3-0 whitewash against Zimbabwe in the three match One-Day International series here at Harare, skipper MS Dhoni registered his first ever clean sweep on a foreign soil.
Please Wait while comments are loading...