ತಮ್ಮ ಜೀವನ ಆಧಾರಿತ ಚಿತ್ರಕ್ಕೆ ಧೋನಿ ಪಡೆದ ಹಣವೆಷ್ಟು ಗೊತ್ತೆ?

By: ಕ್ರೀಡಾ ಡೆಸ್ಕ್
Subscribe to Oneindia Kannada

ನವದೆಹಲಿ ಆಗಸ್ಟ್, 29 : ಸುಶಾಂತ್ ಸಿಂಗ್ ಅಭಿನಯದ ಧೋನಿ ಜೀವನ ಆಧಾರಿತ ಸಿನಿಮಾ 'ಧೋನಿ: ದಿ ಅನ್ ಟೋಲ್ಡ್ ಸ್ಟೋರಿ' ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಬಹುನಿರೀಕ್ಷಿತ ಧೋನಿ ಚಿತ್ರದ ಟ್ರೈಲರ್ ಆಗಸ್ಟ್ 11 ರಂದು ಬಿಡುಗಡೆಯಾಗಿ ಹಿಟ್ ಆಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವ ಮುನ್ನ ಕ್ರಿಕೆಟಿಗನೊಬ್ಬನ ಎಂ ಎಸ್ ಧೋನಿ ಜೀವನ ಚರಿತ್ರೆ ಆಧಾರಿತ ಸಿನಿಮಾ ಬರುತ್ತಿರುವುದು ಇದೇ ಮೊದಲು. ತಮ್ಮ ಜೀವನಾಧರಿತ ಚಿತ್ರ ನಿರ್ಮಾಣಕ್ಕೆ, ಚಿತ್ರ ನಿರ್ಮಾಪಕರಿಂದ ಧೋನಿ ಬರೋಬ್ಬರಿ 60 ಕೋಟಿ ಹಣ ಪಡೆದಿದ್ದಾರೆ ಎಂದು ವರದಿಯಾಗಿದೆ. [ಮಹೇಂದ್ರ ಸಿಂಗ್ ಧೋನಿಯ ಬೆಸ್ಟ್ ಫಿನಿಷಿಂಗ್ ಮ್ಯಾಚ್ ಗಳು]

MS Dhoni charged Rs 60 crore for his biopic MS Dhoni - The Untold Story?

ಈ ಮೊದಲು ಧೋನಿ 80 ಕೋಟಿಗೆ ರೂಗಳಿಗೆ ಬೇಡಿಕೆ ಇಟ್ಟಿದ್ದರಂತೆ. ಇದಕ್ಕೆ ಚಿತ್ರ ತಂಡ 80 ಕೋಟಿ ನೀಡಲು ನಿರಾಕರಿಸಿದೆ. 60 ಕೋಟಿ ನೀಡುವುದಾಗಿ ಚಿತ್ರ ತಂಡ ಹೇಳಿದೆ ಇದಕ್ಕೆ ಕೂಲ್ ಕ್ಯಾಪ್ಟನ್ ಧೋನಿ ಸಹ ಒಪ್ಪಿಕೊಂಡಿದ್ದಾರೆ. ಈಗಾಗಲೇ ಮುಂಚಿತವಾಗಿ 20 ಕೋಟಿ ರುವನ್ನು ಪಡೆದುಕೊಂಡಿದ್ದಾರೆ.

ಇನ್ನುಳಿದ ಬಾಕಿ ಹಣವನ್ನು ಚಿತ್ರ ಬಿಡುಗಡೆಯಾದ ನಂತರ ಪಡೆಯಲಿದ್ದಾರೆ ಎಂಬ ವರದಿಯಾಗಿದೆ. ನೀರಜ್ ಪಾಂಡೆ ನಿರ್ದೇಶನದ ಧೋನಿ ಜೀವನ ಆಧಾರಿ ಈ ಚಿತ್ರ ಸೆಪ್ಟೆಂಬರ್ 30 ರಂದು ತೆರೆ ಕಾಣಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The upcoming biopic on Team India's limited overs skipper Mahendra Singh Dhoni, MS Dhoni: The Untold Story, is being anxiously awaited after the film's trailer was released earlier this month
Please Wait while comments are loading...