ಟೀಂ ಇಂಡಿಯಾ ನಾಯಕ ಧೋನಿಗೆ 3 ದಾಖಲೆ ಮುರಿಯುವ ಚಾನ್ಸ್

Posted By:
Subscribe to Oneindia Kannada

ಬೆಂಗಳೂರು, ಜುಲೈ 10: ಟೀಂ ಇಂಡಿಯಾದ ಸೀಮಿತ ಓವರ್ ಗಳ ಪಂದ್ಯ ಹಾಗೂ ಟಿ20 ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ, ಮುಂಬರುವ ನ್ಯೂಜಿಲೆಂಡ್ ಸರಣಿಯಲ್ಲಿ ಸತತವಾಗಿ ದಾಖಲೆ ಮುರಿಯುವ ಸನ್ನಾಹದಲ್ಲಿದ್ದಾರೆ.

ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಧೋನಿ ನಾಯಕತ್ವದ ಟೀಂ ಇಂಡಿಯಾ ಐದು ಏಕದಿನ ಪಂದ್ಯಗಳ ಸರಣಿ ಆಡಲಿದ್ದು, ಈ ಸರಣಿಯಲ್ಲಿ ಮೂರು ದಾಖಲೆಗಳನ್ನು ನಿರ್ವಿುಸುವ ಅವಕಾಶ ಧೋನಿಗೆ ಲಭಿಸಿದೆ.[ನ್ಯೂಜಿಲೆಂಡ್- ಭಾರತ ಟೆಸ್ಟ್, ಏಕದಿನ ಸರಣಿ ವೇಳಾಪಟ್ಟಿ]

* ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹಾಗೂ ಧೋನಿ ನಾಯಕರಾಗಿ ತಲಾ 324 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಪಾಂಟಿಂಗ್ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ. ಹೀಗಾಗಿ ಧೋನಿ ಅವರು ನಾಯಕನಾಗಿ ಅಧಿಕ ಪಂದ್ಯವಾಡಿದ ದಾಖಲೆ ನಿರ್ಮಿಸಬಹುದು.[ವಿದೇಶಿ ನೆಲದಲ್ಲಿ ಸರಣಿ ಜಯ: ಧೋನಿಗೆ ಸರಿಸಾಟಿ ಯಾರಿಲ್ಲ!]

MS Dhoni can break three more records against New Zealand in IndiaMS Dhoni can break three more records against New Zealand in India

* ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಸಾಧಕರ ಪಟ್ಟಿಯಲ್ಲಿ ಸದ್ಯಕ್ಕೆ ರಿಕಿ ಪಾಟಿಂಗ್ (165) ಮುಂದಿದ್ದಾರೆ. ಅಕ್ಟೋಬರ್​ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಒಂದು ಪಂದ್ಯ ಗೆದ್ದರೆ ಧೋನಿ ಅವರು ಎರಡನೇ ಸ್ಥಾನಕ್ಕೇರಲಿದ್ದಾರೆ. ಸದ್ಯ ಆಸ್ಟ್ರೇಲಿಯದ ಅಲನ್ ಬಾರ್ಡರ್ ಹಾಗೂ ಧೋನಿ ತಲಾ 107 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ.[ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ಕೇನ್ ವಿಲಿಯಮ್ಸನ್ ನಾಯಕ]

* ಮೂರನೇ ದಾಖಲೆ ಸಿಕ್ಸರ್ ಗೆ ಸಂಬಂಧಿಸಿದ್ದು, ನಾಯಕನಾಗಿ ರಿಕಿ ಪಾಂಟಿಂಗ್ 123 ಸಿಕ್ಸ್ ಸಿಡಿಸಿದ್ದಾರೆ. ಧೋನಿ ಈಗಾಗಲೇ 121 ಸಿಕ್ಸ್ ಸಿಡಿಸಿದ್ದು, ದಾಖಲೆ ಮೂರಿಯಲು ಇನ್ನು ಕೇವಲ ಮೂರು ಸಿಕ್ಸರ್​ಗಳ ಅಗತ್ಯವಿದೆ.[324 ಪಂದ್ಯ: ರಿಕಿ ಪಾಂಟಿಂಗ್ ದಾಖಲೆ ಸಮಕ್ಕೆ ಎಂಎಸ್ ಧೋನಿ]

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಈಗ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ. ಧೋನಿ ಅವರು ಇತ್ತೀಚೆಗೆ ಜಿಂಬಾಬ್ವೆ ಪ್ರವಾಸದಲ್ಲಿ ಸರಣಿ ಜಯ ಗಳಿಸಿದ ಮೇಲೆ ವಿಶಾಂತ್ರಿ ಪಡೆಯುತ್ತಿದ್ದು, ಅಕ್ಟೋಬರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಕಣಕ್ಕಿಳೀಯಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Team India ODI captain Dhoni will take on New Zealand in October, he will have a chance to break three more records. Here are the three records
Please Wait while comments are loading...