ಟೀಂ ಇಂಡಿಯಾಗೆ ವಿಲನ್ ಆದ ಆ ಎರಡು ನೋಬಾಲ್ಸ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ, ಏಪ್ರಿಲ್ 01: ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬೃಹತ್ ಮೊತ್ತ ಪೇರಿಸಿತ್ತಾದರೂ ಭಾರತ ಗೆಲ್ಲಲು ಸಾಧ್ಯವಾಗಲಿಲ್ಲ, ಭಾರತದ ಪಾಲಿಗೆ ವಿಲನ್ ಆಗಿದ್ದು ಮಾತ್ರ ಆ ಎರಡು ಕೆಟ್ಟ ಎಸೆತಗಳು ಅವು ಯಾರು ಹಾಕಿದ್ದು ಎನ್ನುವುದನ್ನು ಮ್ಯಾಚ್ ನೋಡಿದವರಿಗೆ ತಿಳಿದೆ ಇರುತ್ತದೆ.

ಮಾರ್ಚ್ 31 ರಂದು ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡು ಭಾರತಕ್ಕೆ ಮೊದಲ ಬ್ಯಾಟ್ ನೀಡಿತು. [ಭಾರತದ ಸೋಲಿಗೆ ಧೋನಿ ಕೊಟ್ಟ 5 ಕಾರಣಗಳು]

ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ ಮತ್ತೆ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನಿಂದ ಬರೋಬ್ಬರಿ 193 ರನ್ ಗಳ ಬೃಹತ್ ಮೊತ್ತವನ್ನು ಟಾರ್ಗೆಟ್ ನೀಡಿತ್ತಾದರೂ ಕೊನೆಗಳಿಗೆಯಲ್ಲಿ ಭಾರತಕ್ಕೆ ಗೆಲವು ದಕ್ಕಲಿಲ್ಲ.[ಟೀಂ ಇಂಡಿಯಾ ಸೋಲಿಸಿ, ವಿಂಡೀಸ್ ಫೈನಲಿಗೆ ಲಗ್ಗೆ]

ಟೀಂ ಇಂಡಿಯಾಗೆ ವಿಲನ್ ಆದ ನೋಬಾಲ್ ಗಳು : 18 ರನ್ ಗಳಿಸಿದ್ದಾಗ ಸಿಮನ್ಸ್ 7 ನೇ ಓವರ್ ನಲ್ಲಿ ರವಿಚಂದ್ರನ್ ಅಶ್ವಿನ್ ಎಸೆದ ಚೆಂಡನ್ನು ಸಿಮಾನ್ಸ್ ಪಾಯಿಂಟ್ ನಲ್ಲಿ ಡ್ರೈವ್ ಮಾಡಿದ್ದ ಚೆಂಡನ್ನು ಬೂಮ್ರಾ ಅದ್ಭುತವಾಗಿ ಕ್ಯಾಚ್ ಪಡೆದು ಹರ್ಷದಲ್ಲಿದ್ದರು. ಅಂಪೈರ್ ನೋಬಾಲ್ ಎಂದು ಸಂಕೇತ ಮಾಡಿದ ಕ್ಷಣವೇ ಭಾರತದ ಆಟಗಾರರ ಮುಖದಲ್ಲಿ ನಿರಾಸೆ ಮೂಡಿತು. [ಭಾರತ ಸೋತಿದ್ದು ಸಂತೋಷವಾಗಿದೆ ಎಂದ ಬಾಂಗ್ಲಾ ಕ್ರಿಕೆಟಿಗ]

MS Dhoni blames 'bad toss', no-balls for India's World T20 exit

ಒಂದು ಜೀವದಾನ ಪಡೆದು ಅದ್ಭುತ ಬ್ಯಾಟಿಂಗ್ ಮಾಡಿ ಅರ್ಧಶತಕಗಳಿಸಿದ ಸಿಮನ್ಸ್ ಪುನಃ ಹಾರ್ದಿಕ್ ಪಾಂಡ್ಯಾ ಎಸೆದ 15 ನೇ ಓವರ್ ಕೊನೆ ಬಾಲ್ ಎಸೆದ ಫುಲ್ ಟಾಸ್ ಎಸೆತವನ್ನು ಕವರ್ಸ್ ನಲ್ಲಿದ್ದ ಅಶ್ವಿನ್ ಗೆ ಕ್ಯಾಚ್ ನೀಡಿದರು. ಆದರೆ, ಭಾರತದ ಪಾಲಿಗೆ ಅದೃಷ್ಟ ಇರಲಿಲ್ಲವೇನೋ ಅದು ಸಹ ಫ್ರಂಟ್ ಫುಟ್ ನೋಬಾಲ್ ಆಗಿದ್ದು ಭಾರತದ ಗೆಲುವಿಗೆ ಮುಳುವಾಗಿ ಪರಿಣಮಿಸಿತು.[ನಿವೃತ್ತಿ ಪ್ರಶ್ನೆಗೆ ಧೋನಿ ಸಿಕ್ಸರ್ ಬಾರಿಸಿದ್ದು ಹೀಗೆ]

ಎರಡು ಜೀವದಾನ ಪಡೆದ ಸಿಮಾನ್ಸ್ ಭರ್ಜರಿ 51 ಎಸೆತಗಳನ್ನು ಎದುರಿಸಿ ಬರೋಬ್ಬರಿ 82 ರನ್ ಗಳಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದು ವಿಂಡೀಸ್ ಗೆಲುವಿನ ಹೀರೋ ಆಗಿ ಮಿಂಚಿದರು. [ಶರ್ಟ್ ಕಳಚಿ ಡ್ಯಾನ್ಸ್ ಮಾಡಿದ ಗೇಲ್, ಬ್ರಾವೋ]

ಇದರಿಂದ ಭಾನುವಾರ ಏ. 3 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.[ಆಸ್ಟ್ರೇಲಿಯಾದಲ್ಲಿ ಮುಂದಿನ ವಿಶ್ವ ಟಿ20 ಟೂರ್ನಮೆಂಟ್]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A distraught India captain Mahendra Singh Dhoni blamed the two no-balls bowled to Lendl Simmons by Ravichandran Ashwin and Hardik Pandya for team's shock ouster from the World T20, here last night (March 31).
Please Wait while comments are loading...