ಏಕದಿನ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದ ಎಂಎಸ್ ಧೋನಿ

Posted By:
Subscribe to Oneindia Kannada

ಹರಾರೆ, ಜೂನ್ 15: ಭಾರತದ ಏಕದಿನ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಅವರು ಬುಧವಾರ ಹೊಸ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 350 ವಿಕೆಟ್ ಗಳನ್ನು ಕಬಳಿಸಿದ ಭಾರತದ ಪ್ರಥಮ ವಿಕೆಟ್ ಕೀಪರ್ ಎನಿಸಿಕೊಂಡಿದ್ದು, ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಆಟಗಾರರಾಗಿದ್ದಾರೆ.

ಪಂದ್ಯದ ಸ್ಕೋರ್ ಕಾರ್ಡ್

ರಾಂಚಿ ಮೂಲಕದ ಧೋನಿ ಅವರು ಈ ಸಾಧನೆಯನ್ನು ಜಿಂಬಾಬ್ವೆ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಸಾಧಿಸಿದರು. ಜಸ್ಪ್ರೀತ್ ಬೂಮ್ರಾ ಅವರ ಎಸೆತದಲ್ಲಿ ಪಂದ್ಯದ 33ನೇ ಓವರ್ ನಲ್ಲಿ ಎಲ್ಟಾನ್ ಚಿಂಗುಂಬುರಾ ಅವರಿತ್ತ ಕ್ಯಾಚನ್ನು ಹಿಡಿಯುವ ಮೂಲಕ ಧೋನಿ ಅವರು ಈ ಸಾಧನೆ ಮಾಡಿದರು. [ಪೊಲೀಸರ ಬೈಕ್ ಏರಿದ ನಾಯಕ ಧೋನಿ]

3rd ODI: MS Dhoni becomes 1st Indian keeper to complete 350 ODI dismissals

ಮೂರನೇ ಪಂದ್ಯದಲ್ಲಿ 42.2 ಓವರ್ ಗಳಲ್ಲಿ ಜಿಂಬಾಬ್ವೆ 123 ಸ್ಕೋರಿಗೆ ಆಲೌಟ್ ಆಯಿತು. ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೆ 21.2 ಓವರ್ ಗಳಲ್ಲಿ 126ರನ್ ಗಳಿಸಿ ಸರಣಿ ವೈಟ್ ವಾಶ್ ಮಾಡಿದೆ. ಕೆಎಲ್ ರಾಹುಲ್ ಅಜೇಯ 63 ಹಾಗೂ ಫೈಜ್ ಫಜಲ್ ಅಜೇಯ 55ರನ್ ಗಳಿಸಿದರು. ಬೌಲಿಂಗ್ ನಲ್ಲಿ ಬೂಮ್ರಾ 4 ವಿಕೆಟ್ ಪಡೆದು ಮಿಂಚಿದರು.[ಜಿಂಬಾಬ್ವೆ ವಿರುದ್ಧ 8 ವಿಕೆಟ್ ಜಯ, ಭಾರತದ ಕೈವಶವಾದ ಸರಣಿ]

278ನೇ ಏಕದಿನ ಕ್ರಿಕೆಟ್ ಪಂದ್ಯವನ್ನಾಡುತ್ತಿರುವ ಧೋನಿ ಅವರು 261 ಕ್ಯಾಚ್ ಹಾಗೂ 89 ಸ್ಟಂಪಿಂಗ್ ಪಡೆದಿದ್ದಾರೆ. ಒಟ್ಟಾರೆ 350 ವಿಕೆಟ್ ಗಳಿಸಿರುವ ಧೋನಿ ಅವರು ಸಾಧಕರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಕುಮಾರ್ ಸಂಗಕ್ಕಾರ ಅವರು ಅಗ್ರಸ್ಥಾನದಲ್ಲಿದ್ದು, 482 ವಿಕೆಟ್ ಕಬಳಿಸಿದ್ದಾರೆ.

ಆಸ್ಟ್ರೇಲಿಯಾದ ಆಡಂ ಗಿಲ್ ಕ್ರಿಸ್ಟ್ ಅವರು 472 ವಿಕೆಟ್ ಪಡೆದು ಮೂರನೇ ಸ್ಥಾನ ಹಾಗೂ ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ ಅವರು 424 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Limited overs skipper Mahendra Singh Dhoni on Wednesday became the first Indian wicketkeeper and fourth in the world to complete 350 dismissals in One-Day International (ODI) cricket.
Please Wait while comments are loading...