ಧೋನಿ ಈಗ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸರದಾರ

Posted By:
Subscribe to Oneindia Kannada

ಕಟಕ್, ಜನವರಿ 20: ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು 200ನೇ ಸಿಕ್ಸರ್ ದಾಖಲಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು.

10ನೆ ಶತಕ ಸಿಡಿಸಿದ ಧೋನಿ ಅವರು ಒಟ್ಟು 6 ಸಿಕ್ಸರ್ ಸಿಡಿಸಿದರು. ಒಂದು ಸಿಕ್ಸರ್ ಡೆಡ್ ಬಾಲ್ ಅದ ಕಥೆ ಓದಿರುತ್ತೀರಿ. ಕ್ರಿಸ್ ವೋಕ್ಸ್ ಅವರ 42.2ನೆ ಓವರ್‌ನಲ್ಲಿ ಸಿಕ್ಸರ್ ಎತ್ತುವ ಮೂಲಕ 200ನೇ ಸಿಕ್ಸರ್ ಪೂರ್ಣಗೊಳಿಸಿದರು. ಬಳಿಕ ಅದೇ ಓವರ್‌ನ ಐದನೆ ಎಸೆತದಲ್ಲಿ 1 ರನ್ ಗಳಿಸಿ ಶತಕ ಪೂರೈಸಿದರು.[ವಿಡಿಯೋ: ಧೋನಿ ಹೊಡೆದ ಸಿಕ್ಸರ್ ವ್ಯರ್ಥವಾದ ಆ ಕ್ಷಣ!]

Dhoni became the fifth player to hit 200 sixes in ODIs

ಧೋನಿ ಅವರು 122 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್ ಇದ್ದ 134 ರನ್ ಗಳಿಸಿ ಔಟಾದರು. ಧೋನಿ ಅವರು ಒಟ್ಟಾರೆ 203 ಸಿಕ್ಸ್ ಸಿಡಿಸಿದ್ದಾರೆ.

ಧೋನಿ ಏಕದಿನ ಕ್ರಿಕೆಟ್‌ನಲ್ಲಿ 200ಕ್ಕಿಂತ ಹೆಚ್ಚು ಸಿಕ್ಸರ್ ದಾಖಲಿಸಿದ ವಿಶ್ವದ 4ನೇ ಬ್ಯಾಟ್ಸ್ ಮನ್ ಆಗಿದ್ದಾರೆ. ಇದಕ್ಕೂ ಮುನ್ನ ಪಾಕಿಸ್ತಾನದ ಶಾಹಿದ್ ಅಫ್ರಿದಿ(351), ಶ್ರೀಲಂಕಾದ ಸನತ್ ಜಯಸೂರ್ಯ (270), ವೆಸ್ಟ್‌ಇಂಡೀಸ್‌ನ ಕ್ರಿಸ್ ಗೈಲ್(238) ಗರಿಷ್ಠ ಸಿಕ್ಸರ್ ಬಾರಿಸಿದ್ದಾರೆ.

ಭಾರತದ ಪರ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ 195 ಸಿಕ್ಸರ್ ಮತ್ತು ನಾಯಕ ಸೌರವ್ ಗಂಗುಲಿ 190 ಸಿಕ್ಸರ್ ಸಿಡಿಸಿದ್ದರು. ಇವರಿಬ್ಬರನ್ನು ಧೋನಿ ಹಿಂದಿಕ್ಕಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dhoni became the fifth player to hit 200 sixes in ODIs after Shahid Afridi (356), Sanath Jayasuriya (270), Chris Gayle (270) and Brendon McCullum (200). 196 of his 203 sixes came for India which makes it the most for India eclipsing 195 by Sachin Tendulkar.
Please Wait while comments are loading...