ಸಚಿನ್ ಹೂಡಿಕೆ ಮಾಡಿರುವ ಕಂಪನಿಯಿಂದ ಧೋನಿಗೆ ದೋಖಾ

Posted By:
Subscribe to Oneindia Kannada

ಬೆಂಗಳೂರು, ಜುಲೈ 15: ಟೀಂ ಇಂಡಿಯಾದ ಏಕದಿನ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಅವರಿಗೆ ಆಸ್ಟ್ರೇಲಿಯಾ ಮೂಲದ ಕ್ರೀಡಾ ಸಂಸ್ಥೆಯೊಂದು ಪಂಗನಾಮ ಹಾಕಿದೆ. ಚಾಣಕ್ಷ ನಾಯಕ ಧೋನಿಗೆ ಸ್ರಿ ಸುಮಾರು 20 ಕೋಟಿ ರು ನಷ್ಟವಾಗಿದೆ.

ಧೋನಿ ಜತೆಗೆ ಸುಮಾರು ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದ ಸ್ಪಾರ್ಟನ್ ಸ್ಫೋರ್ಟ್ಸ್ ಸಂಸ್ಥೆ ಧೋನಿಗೆ ನೀಡಬೇಕಿದ್ದ ಮೊತ್ತವನ್ನು ನೀಡಿಲ್ಲ.

ಒಪ್ಪಂದದ ಮೊತ್ತ ಲೆಕ್ಕ ಹಾಕಿದರೆ 20 ಕೋಟಿ ರು ದಾಟುತ್ತದೆ ಎಂದು ಧೋನಿ ಅವರ ವ್ಯವಹಾರಗಳ ಉಸ್ತುವಾರಿ ನೋಡಿಕೊಳ್ಳುವ ರಿತಿ ಸ್ಫೋರ್ಟ್ಸ್ ನ ಅರುಣ್ ಪಾಂಡೆ ವಿವರಿಸಿದ್ದಾರೆ.

2013ರ ಡಿಸೆಂಬರ್‍ನಲ್ಲಿ ಮಹೇಂದ್ರ ಸಿಂಗ್ ಧೋನಿ ಬ್ಯಾಟ್‍ಗಳನ್ನು ಪೊರೈಸುತ್ತಿದ್ದ ಸ್ಪಾರ್ಟನ್ ಕಂಪನಿಯೊಂದಿಗೆ 3 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದರು. ಅಂದರಂತೆ ಕೂಲ್ ಕ್ಯಾಪ್ಟನ್‍ಗೆ 13 ಕೋಟಿ ರೂಪಾಯಿ ಕೊಡಬೇಕಾಗಿತ್ತು. ಜೊತೆಗೆ ಗೌರವಧನ ಸೇರಿ ಧೋನಿಗೆ 20 ಕೋಟಿ ರೂಪಾಯಿ ಪಾವತಿಸಬೇಕಿತ್ತು.

ಸಚಿನ್ ಜತೆ ಸ್ಪಾರ್ಟನ್ ಒಪ್ಪಂದ : ಎಂಎಸ್ ಧೋನಿಗೆ ನಾಮ ಹಾಕಿದ ಕಂಪನಿ ಜತೆ ಕ್ರಿಕೆಟ್ ದಿಗ್ಗಜ ಸಚಿನ್ ಹೂಡಿಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಸ್ಪಾರ್ಟನ್ ಬಾಸ್ ಶರ್ಮ ಇಲ್ಲಿ ತನಕ ಈ ಬಗ್ಗೆ ಉತ್ತರ ನೀಡಿಲ್ಲ.

ಧೋನಿ ಜತೆ ಏನಿದು ಒಪ್ಪಂದ

ಧೋನಿ ಜತೆ ಏನಿದು ಒಪ್ಪಂದ

ಎಂಎಸ್ ಧೋನಿಗೆ ಬ್ಯಾಟ್ ಗಳನ್ನು ಪೂರೈಸಲು 2013ರ ಡಿಸೆಂಬರ್ ನಲ್ಲಿ ಸ್ಪಾರ್ಟನ್ ಸಂಸ್ಥೆ ಜೊತೆ ಧೋನಿ ಒಪ್ಪಂದ ಮಾಡಿಕೊಂಡಿದ್ದರು. ಒಪ್ಪಂದದ ಮೊದಲ ಕಂತಿನಂತೆ 13 ಕೋಟಿ ರು ಈ ವೇಳೆಗೆ ಧೋನಿಗೆ ಸಿಗಬೇಕಿತ್ತು. ಜೊತೆಗೆ ಗೌರವಧನ ಸೇರಿ ಧೋನಿಗೆ 20 ಕೋಟಿ ರೂಪಾಯಿ ಲಭಿಸಬೇಕಿತ್ತು. ಆದರೆ, ಯಾವುದೇ ಮೊತ್ತ ಕೈಸೇರಿಲ್ಲ.

ಸ್ಪಾರ್ಟನ್ ಜೊತೆ ಯಾರು ಯಾರು ಒಪ್ಪಂದ

ಸ್ಪಾರ್ಟನ್ ಜೊತೆ ಯಾರು ಯಾರು ಒಪ್ಪಂದ

ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್, ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್, ಇಂಗ್ಲೆಂಡಿನ ಇಯಾನ್ ಮಾರ್ಗನ್, ಮಾಜಿ ಆಸೀಸ್ ವೇಗಿ ಮಿಚೆಲ್ ಜಾನ್ಸನ್, ಅಲ್ಲದೆ ಕ್ರಿಕೆಟ್ ದಿಗ್ಗಜ ಸರ್ ವಿವಿಯನ್ ರಿಚರ್ಡ್ಸ್ ಕೂಡಾ ಕಂಪನಿ ಜತೆ ಒಪ್ಪಂದ ಹೊಂದಿದ್ದಾರೆ.

ಧೋನಿ ಡೀಲ್ ಕ್ಯಾನ್ಸಲ್ ಆಗಿಲ್ಲ

ಧೋನಿ ಡೀಲ್ ಕ್ಯಾನ್ಸಲ್ ಆಗಿಲ್ಲ

ತಾಂತ್ರಿಕವಾಗಿ ಧೋನಿ ಹಾಗೂ ಸ್ಪಾರ್ಟನ್ ಸ್ಫೋರ್ಟ್ಸ್ ಕಂಪನಿ ಡೀಲ್ ಇನ್ನೂ ಕ್ಯಾನ್ಸಲ್ ಆಗಿಲ್ಲ. ಧೋನಿ ಅವರ ವಹಿವಾಟು ನೋಡಿಕೊಳ್ಳೂವ ರಿತಿ ಸ್ಫೋರ್ಟ್ಸ್ ಈಗ ಕಾನೂನು ಹೋರಾಟಕ್ಕೆ ಮುಂದಾಗಿದೆ. ಸಿಡ್ನಿ ಮೂಲದ ಕಂಪನಿಯ ಕಚೇರಿ ನವದೆಹಲಿಯಲ್ಲೂ ಇದೆ.

ಕೊಹ್ಲಿಯನ್ನು ಹಿಂದಿಕ್ಕಲು ಇಂಥ ಡೀಲ್ ಗಳು ಅಡ್ಡಿ

ಕೊಹ್ಲಿಯನ್ನು ಹಿಂದಿಕ್ಕಲು ಇಂಥ ಡೀಲ್ ಗಳು ಅಡ್ಡಿ

ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ್ಅನ್ನು ಜಾಹೀರಾತು ಕ್ಷೇತ್ರದಲ್ಲಿ ಹಿಂದಿಕ್ಕಲು ಧೋನಿಗೆ ಇಂಥ ಕೆಟ್ಟ ಡೀಲ್ ಗಳು ಅಡ್ಡಿಯಾಗಿದೆ. ಧೋನಿ ಅವರ ಬ್ರ್ಯಾಂಡ್ ಮೌಲ್ಯ 100 ಕೋಟಿ ರು ಗೂ ಅಧಿಕ ಇದೆ.

ಧೋನಿಗಿದೆ ಹಲವು ಕ್ಲಬ್, ತಂಡಗಳ ಒಡೆತನ

ಧೋನಿಗಿದೆ ಹಲವು ಕ್ಲಬ್, ತಂಡಗಳ ಒಡೆತನ

15ಕ್ಕೂ ಅಧಿಕ ಪ್ರಮುಖ ಬ್ಯ್ರಾಂಡ್ ಗಳ ರಾಯಭಾರಿ ಅಲ್ಲದೆ, ಐಎಸ್ ಎಲ್ ನಲ್ಲಿ ಫುಟ್ಬಾಲ್ ಫ್ರಾಂಚೈಸಿ ಚೆನ್ನೈಯನ್ ಎಫ್ ಸಿ, ಹಾಕಿ ಇಂಡಿಯಾ ಲೀಗ್ ರಾಂಚಿ ರೇಸ್ ಮಾಲೀಕರಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's limited overs captain Mahendra Singh Dhoni, who remains a sought after personality in the endorsement world despite his retirement from Tests, has been duped by one of the many brands he endorses -- Spartan Sports -- of over Rs 20 crore.
Please Wait while comments are loading...