ಟಿ20 ಟಾಪ್ 10 : ಅತಿ ಹೆಚ್ಚು ಸಿಕ್ಸರ್ ಚೆಚ್ಚಿದ ಬ್ಯಾಟ್ಸ್ ಮನ್ಸ್

Posted By:
Subscribe to Oneindia Kannada

ಮುಂಬೈ, ಮಾರ್ಚ್ 17: ನ್ಯೂಜಿಲೆಂಡಿನ ಸ್ಫೋಟಕ ಬ್ಯಾಟ್ಸ್ ಮನ್ ಬ್ರೆಂಡನ್ ಮೆಕಲಮ್ ಅವರ ದಾಖಲೆ ಮುರಿದ ಕ್ರಿಸ್ ಗೇಲ್ ಅವರು ಈಗ ಟಿ20 ಕ್ಷೇತ್ರದ 'ಸಿಕ್ಸರ್ ಕಿಂಗ್' ಎನಿಸಿಕೊಂಡಿರುವುದು ಗೊತ್ತಿರಬಹುದು. ಟ್ವೆಂಟಿ20 ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿರುವ ಟಾಪ್ 10 ಬ್ಯಾಟ್ಸ್ ಮನ್ ಗಳ ಪಟ್ಟಿ ಇಲ್ಲಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ವಿಶ್ವ ಟಿ20 2016ರ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿದ ಗೇಲ್ ಅತ್ಯಧಿಕ ಸಿಕ್ಸರ್ ದಾಖಲೆ ಬರೆದಿದ್ದಾರೆ. ಜೊತೆಗೆ ವಿಶ್ವ ಟಿ20ಯ ಮೊದಲ ಪಂದ್ಯದಲ್ಲಿ(2007, 2016) ಶತಕ ಗಳಿಸಿದ ಸಾಧನೆ ಮಾಡಿದ್ದಾರೆ.[ಮೆಕಲಮ್ ದಾಖಲೆ ಮುರಿದ ಗೇಲ್ ಈಗ ಟಿ20 'ಸಿಕ್ಸರ್ ಕಿಂಗ್']

Most sixes in T20 Internationals Top 10 Batsmen

ಟಿ20 ಅಲ್ಲದೆ ಒಟ್ಟಾರೆ ಗರಿಷ್ಠ ಸಿಕ್ಸರ್‌ ಬಾರಿಸಿರುವವರ ಪಟ್ಟಿಯಲ್ಲಿ ಗೇಲ್ ಮೊದಲ ಸ್ಥಾನವನ್ನು ಮೂರು ತಿಂಗಳ ಹಿಂದೆಯೆ ಪಡೆದುಕೊಂಡಿದ್ದರು. ವಿಂಡೀಸ್ ಆಲ್‌ರೌಂಡರ್ ಕೀರನ್ ಪೊಲಾರ್ಡ್ ಒಟ್ಟು 388 ಸಿಕ್ಸರ್‌ಗಳನ್ನು ಸಿಡಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೆಕಲಮ್ ಅವರು 290 ಸಿಕ್ಸರ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಟಾಪ್ 10 ಆಟಗಾರರ ಪಟ್ಟಿ: (ಮಾರ್ಚ್ 17, 2016 ರಂತೆ)

ಬ್ಯಾಟ್ಸ್ ಮನ್ ಪಂದ್ಯ ಇನ್ನಿಂಗ್ಸ್ ರನ್ ಬೌಂಡರಿ ಸಿಕ್ಸರ್ ಸ್ಟ್ರೈಕ್ ರೇಟ್
ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) 46 44 1506 127 98 145.64
ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್) 71 70 2140 199 91 136.21
ಶೇನ್ ವಾಟ್ಸನ್ (ಆಸ್ಟ್ರೇಲಿಯಾ) 54 52 1366 106 79 145.01
ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) 57 57 1595 151 73 140.77
ಶಾಹೀದ್ ಅಫ್ರಿದಿ (ಪಾಕಿಸ್ತಾನ) 95 87 1364 99 70 151.2
ಯುವರಾಜ್ ಸಿಂಗ್ (ಭಾರತ) 52 45 1086 73 69 139.05
ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) 58 56 1672 154 69 129.91
ಇಯಾನ್ ಮಾರ್ಗನ್ (ಇಂಗ್ಲೆಂಡ್) 57 56 1360 110 59 133.99
ಉಮರ್ ಅಕ್ಮಲ್ (ಪಾಕಿಸ್ತಾನ) 76
73 1611 118 53 122.78
ಜೆಪಿ ಡುಮಿನಿ (ದಕ್ಷಿಣ ಆಫ್ರಿಕಾ) 68 62 1571 117 52 121.78

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Most sixes in T20 Internationals Top 10 Batsmen As on March 17. Chris Gayle of West Indies leads the table with 98 Sixes and JP Duminy is at 10th place with 52 sixes. Yuvraj Singh is placed at 6th position with 69 Sixes.
Please Wait while comments are loading...