ದುಬಾರಿ ಬೌಲಿಂಗ್ ನಲ್ಲಿ ಆಸೀಸ್ ಫಸ್ಟ್, ಇಂಡಿಯನ್ಸ್ ಇಬ್ರು

By: ರಮೇಶ್ ಬಿ
Subscribe to Oneindia Kannada

ಕ್ರಿಕೆಟ್ ನಲ್ಲಿ ಅತಿ ಕಡಿಮೆ ರನ್ ನೀಡಿದರೂ ದಾಖಲೆ, ಅತಿ ಹೆಚ್ಚು ರನ್ ನೀಡಿದರೂ ಒಂದು ದಾಖಲೆಯಾಗುತ್ತದೆ. ಕ್ರಿಕೆಟ್ ಅಂದ್ರೆನೇ ಒಂದಲ್ಲ ಒಂದು ದಾಖಲೆ ಸೃಷ್ಟಿಯಾಗುವ ಕ್ರೀಡೆ. ಹಾಗಿದ್ದರೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟವರ ಬೌಲರ್ ಗಳ ಪಟ್ಟಿಯನ್ನು ನೋಡುವುದಾದರೇ. ಆಸ್ಟ್ರೇಲಿಯಾದ ವೇಗಿ ಮಿಕ್ ಲೂಯಿಸ್ ಅವರು ಸದ್ಯಕ್ಕೆ ಅಗ್ರಸ್ಥಾನದಲ್ಲಿದ್ದಾರೆ

ಮೊನ್ನೆ ನಡೆದ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಏಕದಿನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು. ಟ್ರೆಂಟ್ ಬ್ರಿಜ್ ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಹಾಬ್ ರಿಯಾಜ್ ಕೂಡಾ ಹೊಸ ದಾಖಲೆಯೊಂದು ಬರೆದರು. 10 ಓವರ್‍ ಗಳಲ್ಲಿ 110 ರನ್ ನೀಡಿ ವಿಶ್ವದ 2ನೇ ಅತಿ ದುಬಾರಿ ಬೌಲರ್ ಎಂಬ ಕೀರ್ತಿಗೆ ಭಾಜನರಾದರು.[ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಧೂಳಿಪಟ ಮಾಡಿದ ರೆಕಾರ್ಡ್ಸ್]

ಏಕದಿನ ಕ್ರಿಕೆಟ್ ನಲ್ಲಿ ತಮ್ಮ ಬೌಲಿಂಗ್ ಸ್ಪೆಲ್ 10 ಓವರ್ ಗಳಲ್ಲಿ ಹೆಚ್ಚು ರನ್ ಗಳನ್ನು ನೀಡಿ ದುಬಾರಿಯಾದ ವಿಶ್ವದ ಅತಿ ದುಬಾರಿ ಬೌಲರ್‍ ಗಳ ಪಟ್ಟಿಯನ್ನು ನೋಡಿದರೆ, ವಿಶ್ವದ ಟಾಪ್ 10 ಅತಿ ದುಬಾರಿ ಬೌಲರ್‍ ಗಳಲ್ಲಿ ಭಾರತದ ಇಬ್ಬರು ಬೌಲರ್ ಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. [400 ರನ್ ಗಳಿಕೆ ಕ್ಲಬ್ ಭಾರತ ನಂ. 2ನಲ್ಲಿ, ನಂ. 1 ಯಾರು?]

ಏಕದಿನ ಕ್ರಿಕೆಟ್‍ ನಲ್ಲಿ ಟಾಪ್ 10 ದುಬಾರಿ ಬೌಲರ್‍ ಗಳ ಪಟ್ಟಿಯಲ್ಲಿ ಯಾರಿದ್ದಾರೆ ಎಂಬುದನ್ನು ನೋಡಿ

Bhuvaneshwar Kumar

1. ಮಿಕ್ ಲೂಯಿಸ್: 2006 ಮಾರ್ಚ್ 12ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಿಕ್ ಲೂಯಿಸ್ 10 ಓವರ್‍ ಗಳಲ್ಲಿ 113 ರನ್ ನೀಡಿ ವಿಶ್ವದ ಅತಿ ದುಬಾರಿ ಬೌಲರ್‍ ಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದರು.

2. ವಹಾಬ್ ರಿಯಾಜ್: 2016 ಆಗಸ್ಟ್ 30ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ವಹಾಬ್ ರಿಯಾಜ್ 10 ಓವರ್‍ ಗಳಲ್ಲಿ 110 ರನ್ ನೀಡಿದ್ದರು.

3. ಭುವನೇಶ್ವರ್ ಕುಮಾರ್: 2015 ಅಕ್ಟೋಬರ್ 25ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತದ ಭುವನೇಶ್ವರ್ ಕುಮಾರ್ 10 ಓವರ್‍ ಗಳಲ್ಲಿ 106 ರನ್ ನೀಡಿದ್ದರು.

4. ಮಾರ್ಟಿನ್ ಸ್ನೀಡನ್: 1983 ಜೂನ್ 9ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್‍ನ ಮಾರ್ಟಿನ್ ಸ್ನೀಡನ್ 12 ಓವರ್ ಗಳಲ್ಲಿ 105 ರನ್ ನೀಡಿದ್ದರು.

5. ಟಿಮ್ ಸೌಥಿ: 2009 ಮಾರ್ಚ್ 8ರಂದು ಭಾರತ ವಿರುದ್ಧ ನ್ಯೂಜಿಲೆಂಡ್‍ನ ಟಿಮ್ ಸೌಥಿ 10 ಓವರ್‍ ಗಳಲ್ಲಿ 105 ರನ್ ನೀಡಿದ್ದರು.

6. ಬ್ರ್ಯಾನ್ ವಿಟೋರಿ: 2012 ಫೆಬ್ರವರಿ 9ರಂದು ನ್ಯೂಜಿಲೆಂಡ್ ವಿರುದ್ಧ ಜಿಂಬಾಬ್ವೆಯ ಬ್ರ್ಯಾನ್ ವಿಟೋರಿ 9 ಓವರ್‍ ಗಳಲ್ಲಿ 105 ರನ್ ನೀಡಿ ದುಬಾರಿ ಬೌಲರ್ ಎನಿಸಿದರು.

7. ಜಾಸನ್ ಹೋಲ್ಡರ್: 2015 ಫೆಬ್ರವರಿ 27ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಜಾಸನ್ ಹೋಲ್ಡರ್ 10 ಓವರ್‍ ಗಳಲ್ಲಿ 104 ರನ್ ನೀಡಿದ್ದರು.

8. ವಿನಯ್ ಕುಮಾರ್: 2013 ನವೆಂಬರ್ 2ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ವಿನಯ್ ಕುಮಾರ್ 9 ಓವರ್‍ ಗಳಲ್ಲಿ 102 ರನ್ ನೀಡಿ ದುಬಾರಿ ಬೌಲರ್ ಎನಿಸಿದ್ದರು.

9. ದೌಲತ್ ಜರ್ದಾನ್: 2015 ಮಾರ್ಚ್ 4ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಆಪ್ಘಾನಿಸ್ತಾನದ ದೌಲತ್ ಜರ್ದಾನ್ 10 ಓವರ್‍ ಗಳಲ್ಲಿ 101 ರನ್ ನೀಡಿದ್ದರು.

10. ಮುತ್ತಯ್ಯ ಮುರಳೀಧರನ್: ಆಸ್ಟ್ರೇಲಿಯಾ ವಿರುದ್ಧ 2006 ಫೆಬ್ರವರಿ 12ರಂದು ನಡೆದ ಪಂದ್ಯದಲ್ಲಿ ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ 10 ಓವರ್‍ನಲ್ಲಿ 99 ರನ್ ನೀಡಿದ್ದರು.

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mick Lewis tops this list of most expensive over in the history of One day cricket. Here is a list of bowlers with worst spells in which they conceded most runs in ODI.
Please Wait while comments are loading...