ಫೇಸ್ ಬುಕ್, ಇನ್ಸ್ಟಾಗ್ರಾಂನಲ್ಲಿ ಕೊಹ್ಲಿಗೆ ಅಗ್ರಸ್ಥಾನ!

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 13: ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಗಳಲ್ಲಿ ಅತೀ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಐಪಿಎಲ್ ಆಟಗಾರ ಯಾರು ಗೊತ್ತೆ? ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೋಹ್ಲಿ!

ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹೊರಗುಳಿದಿದ್ದ ಕೋಹ್ಲಿ ಐಪಿಎಲ್ 10 ನೇ ಆವೃತ್ತಿಯಲ್ಲಿ ಇದುವರೆಗೂ ಒಂದು ಪಂದ್ಯವನ್ನೂ ಆಡದಿದ್ದರೂ, ಅವರ ಅಭಿಮಾನಿಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ. ಇನ್ಸ್ಟಾಗ್ರಾಂ ಮತ್ತು ಫೇಸ್ ಬುಕ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ ಅತೀ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ ಮತ್ತು ಅತೀ ಹೆಚ್ಚು ಲೈಕ್ ಗಳನ್ನು ಪಡೆದ ಐಪಿಎಲ್ ಆಟಗಾರ ಕೋಹ್ಲಿ![ಮುಂಬೈ ವಿರುದ್ಧ ಪಂದ್ಯಕ್ಕೆ ವಿರಾಟ್ ಕೊಹ್ಲಿ ಲಭ್ಯ: ಬಿಸಿಸಿಐ]

Most followed cricketer in facebook and Instagram is Virat Kohli

ಸಾಮಾಜಿಕ ಜಾಲತಾಣಗಳಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿರುವ ಕೋಹ್ಲಿ ಅವರೊಂದಿಗಿರುವ ಟಾಪ್ ಹತ್ತು ಆಟಗಾರರೆಂದರೆ, ಎಂ.ಎಸ್.ಧೋನಿ(ಪುಣೆ), ಎಬಿ ಡಿವಿಲಿಯರ್ಸ್(ಬೆಂಗಳೂರು), ಯುವರಾಜ್ ಸಿಂಗ್(ಹೈದರಾಬಾದ್), ರೋಹಿತ್ ಶರ್ಮಾ(ಮುಂಬೈ), ಸುರೇಶ್ ರೇನಾ(ಗುಜರಾತ್), ಕ್ರಿಸ್ ಗೇಯ್ಲ್(ಬೆಂಗಳೂರು), ಹರ್ಭಜನ್ ಸಿಂಗ್(ಮುಂಬೈ), ರವೀಂದ್ರ ಜಡೇಜಾ (ಗುಜರಾತ್) ಮತ್ತು ಅಜಿಂಕ್ಯಾ ರಹಾನೆ (ಪುಣೆ).

ಐಪಿಎಲ್ 10 ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಇದುವರೆಗೂ ಆಡಿದ 3 ಪಂದ್ಯಕ್ಕೂ ಅಲಭ್ಯರಾಗಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೋಹ್ಲಿ, ಇದೀಗ ಸಂಪೂರ್ಣ ಫಿಟ್ ಎಂದು ಬಿಸಿಸಿಐ ಘೋಷಿಸಿದೆ. ನಾಳೆ (ಏಪ್ರಿಲ್ 14), ಅಪರಾಹ್ನ 4 ಗಂಟೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಎದುರಿಸಲಿರುವ ಆರ್ ಸಿಬಿ ತಂಡಕ್ಕೆ ನಾಯಕ ವಿರಾಟ್ ಕೋಹ್ಲಿ ಲಭ್ಯರಾಗಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Most followed IPL 10th edition cricketer in facebook and Instagram is Virat Kohli. Even though he has not played any match in the 10 edition yet, he is still in the top place.
Please Wait while comments are loading...