ಸಚಿನ್ ಗಿಂತ ಪಾಕಿಸ್ತಾನಿ ಕ್ರಿಕೆಟರ್ ಶ್ರೇಷ್ಠ ಎಂದ ವೇಗಿ ಯಾರು?

Posted By:
Subscribe to Oneindia Kannada

ಲಾಹೋರ್, ಆಗಸ್ಟ್ 30: ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಅವರು ತಮ್ಮ ಕಾಲದ ನಾಯಕ ಇನ್ಜಮಾಮ್ ಉಲ್ ಹಕ್ ಅವರನ್ನು ಸರ್ವಶ್ರೇಷ್ಠ ಆಟಗಾರ, ಅವರಿಗೆ ಬೌಲಿಂಗ್ ಮಾಡಲು ಹೆದರುತ್ತಿದ್ದೆ ಎಂದಿದ್ದಾರೆ. ಈ ಮೂಲಕ ಸಚಿನ್ ಅವರಿಗಿಂತ ಇನ್ಜಮಾನ್ ಶ್ರೇಷ್ಠ ಎಂದು ಸಾರಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ 444 ವಿಕೆಟ್ ಪಡೆದಿರುವ ವೇಗಿ ಶೋಯಿಬ್ ಅವರು ತಮ್ಮ ವೃತ್ತಿ ಬದುಕಿನಲ್ಲಿ ತಾವು ಎದುರಿಸಿದ ಅತ್ಯಂತ ಶ್ರೇಷ್ಠ ಬ್ಯಾಟ್ಸ್ ಮನ್ ಬಗ್ಗೆ ತಿಳಿಸಿದ್ದಾರೆ.

'Most difficult' batsman to bowl to: Shoaib Akhtar rates Inzamam-ul-Haq above Sachin Tendulkar

41 ವರ್ಷ ವಯಸ್ಸಿನ ಶೋಯಿಬ್ ಅವರು ಟಾಪ್ ರೇಟೆಡ್ ಬ್ಯಾಟ್ಸ್ ಮನ್ ಗಳನ್ನು ಹೆಸರಿಸಿದ್ದಾರೆ. ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ರಿಕಿ ಪಾಂಟಿಂಗ್ ಗೆ ಬೌಲ್ ಮಾಡಿದ್ದೇನೆ. ಆದರೆ, ನನ್ನ ಎಸೆತಗಳನ್ನು ಸಮರ್ಥವಾಗಿ ಎದುರಿಸಿದ್ದು ಇನ್ಜಮಾಮ್ ಅವರು ಮಾತ್ರ ಎಂದಿದ್ದಾರೆ.

ಆಸ್ಟ್ರೇಲಿಯಾ ವೆಬ್ ತಾಣಕ್ಕಾಗಿ ವಾಸಿಂ ಅಕ್ರಮ್ ನಡೆಸಿದ ಟಾಕ್ ಶೋನಲ್ಲಿ ಶೋಯಿಬ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೋಯಿಬ್ ಜತೆ 34 ಟೆಸ್ಟ್ ಪಂದ್ಯಗಳನ್ನಾಡಿದ ಇನ್ಜಮಾನ್ ಅವರು ತಮ್ಮ 16 ವರ್ಷಗಳ ವೃತ್ತಿ ಬದುಕಿನಲ್ಲಿ 35 ಸೆಂಚುರಿ ಬಾರಿಸಿದ್ದಾರೆ.

ನಂತರ ಅಫ್ಘಾನಿಸ್ತಾನದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಪಾಕಿಸ್ತಾನದ ಮುಖ್ಯ ಅಯ್ಕೆದಾರರಾಗಿದ್ದಾರೆ. ಈಗ ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1 ತಂಡವಾಗಿ ರೂಪುಗೊಂಡಿದೆ.

1992ರಲ್ಲಿ ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡದಲ್ಲಿ 22 ವರ್ಷ ವಯಸ್ಸಿನ ಇನ್ಜಮಾಮ್ ಕೂಡಾ ಇದ್ದರು. ಇಮ್ರಾನ್ ಖಾನ್ ನಾಯಕತ್ವದಲ್ಲಿ ಬೆಳೆದ ಇನ್ಜಮಾಮ್ ಅವರು ಪಾಕಿಸ್ತಾನದ ಬ್ಯಾಟಿಂಗ್ ಆಧಾರಶಕ್ತಿ ಎನಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Pakistan speedster Shoaib Akhtar said his former team-mate and skipper Inzamam-ul-Haq played him better than any other batsman in the world.
Please Wait while comments are loading...