ಕ್ರಿಸ್ ಗೇಲ್ ರಿಂದ ಬಲ್ಮಠದ ಬಾರಿನಲ್ಲಿ ಹೊಸ ಉತ್ಪನ್ನ ಬಿಡುಗಡೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಫೆಬ್ರವರಿ 05: ಮಂಗಳೂರಿನ ಜನತೆಗೆ ಇಂದು ಬೆಳಗ್ಗೆ ಅಚ್ಚರಿಯೊಂದು ಕಾದಿತ್ತು. ಅದು ನಗರದ ಬಲ್ಮಠದಲ್ಲಿ ವೆಸ್ಟ್ ಇಂಡಿಸ್‌ನ ಸ್ಟಾರ್ ಕ್ರಿಕೆಟರ್, ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕಾಣಿಸಿಕೊಂಡರು. ಈ ವೇಳೆ ಮಾತನಾಡಿದ ಗೇಲ್, ' ಮಂಗಳೂರು ನೋಡಿ ತುಂಬಾ ಖುಷಿಯಾಯಿತು. ಮಂಗಳೂರು ಹಾಟ್ ಹಾಟ್ ಇದೆ' ಅಂದರು.

ಜ್ಯೋತಿ ಬಳಿಯ ಬಲ್ಮಠದಲ್ಲಿರುವ ವೈನ್ ಗೇಟ್ ನಲ್ಲಿ ನಡೆದ ಸ್ಮ್ರಿನ್ ಆಫ್(smrin off) ಸಂಸ್ಥೆಯ ಹೊಸ ಉತ್ಪನ್ನದ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕ್ರಿಕೆಟಿಗ ಕ್ರಿಸ್ ಗೇಲ್ ಗೆ ಆರತಿ ಮಾಡುವ ಮೂಲಕ ಸ್ವಾಗತಿಸಲಾಯಿತು. ಇದೇ ವೇಳೆ ಗೇಲ್ ಗೆ ಎಳನೀರು ಕೊಡಲಾಯಿತು.

ಈ ವೇಳೆ ಮಾತನಾಡಿದ ಗೇಲ್, ' ಮಂಗಳೂರು ನೋಡಿ ತುಂಬಾ ಖುಷಿಯಾಯಿತು. ಮಂಗಳೂರು ಹಾಟ್ ಹಾಟ್ ಇದೆ ಅಂದರು. ಗೇಲ್ ನೋಡಲು ನೂರಾರು ಮಂದಿ ಸೇರಿದ್ದರಿಂದ ಜ್ಯೋತಿ ಸಮೀಪ ಟ್ರಾಫಿಕ್ ಜಾಮ್ ಉಂಟಾಯಿತು.

ಸ್ಮ್ರಿನ್ ಆಫ್ ಸಂಸ್ಥೆ ಕಾರ್ಯಕ್ರಮ

ಸ್ಮ್ರಿನ್ ಆಫ್ ಸಂಸ್ಥೆ ಕಾರ್ಯಕ್ರಮ

ಜ್ಯೋತಿ ಬಳಿಯ ಬಲ್ಮಠದಲ್ಲಿರುವ ವೈನ್ ಗೇಟ್ ನಲ್ಲಿ ನಡೆದ ಸ್ಮ್ರಿನ್ ಆಫ್ ಸಂಸ್ಥೆಯ ಹೊಸ ಉತ್ಪನ್ನದ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕ್ರಿಕೆಟಿಗ ಕ್ರಿಸ್ ಗೇಲ್.

ಗೇಲ್ ಬಂದಿದ್ದರಿಂದ ಟ್ರಾಫಿಕ್ ಜಾಮ್

ಗೇಲ್ ಬಂದಿದ್ದರಿಂದ ಟ್ರಾಫಿಕ್ ಜಾಮ್

ದೈತ್ಯ ಕ್ರಿಕೆಟರ್ ಬಲ್ಮಠದಲ್ಲಿರುವ ವೈನ್ ಗೇಟ್ ಬಾರ್ ಅಂಡ್ ರೆಸ್ಟೋರೆಂಟ್ ನ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರನ್ನು ಸಾಂಪ್ರದಾಯಿಕವಾಗಿ ಆರತಿ ಬೆಳಗಿ, ಹಣೆಗೆ ಕುಂಕುಮ ಇಟ್ಟು, ಹೂಹೂರ ಹಾಕಿ ಸ್ವಾಗತಿಸಲಾಯಿತು.

ಗೇಲ್ ಹೊಗಳಿದ ಗೇಲ್

ಗೇಲ್ ಹೊಗಳಿದ ಗೇಲ್

ಈ ವೇಳೆ ಎಳನೀರು ಸವಿದ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಕ್ರಿಸ್ ಗೇಲ್, "ಮಂಗಳೂರು ಫೆಂಟಾಸ್ಟಿಕ್" ಎಂದು ಉದ್ಗರಿಸಿದರು.

ಜನರ ನೂಕುನುಗ್ಗಲು

ಜನರ ನೂಕುನುಗ್ಗಲು

ಸ್ಫೋಟಕ ಬ್ಯಾಟ್ಸ್ ಮನ್ ಗೇಲ್ ಆಗಮನದ ಸುದ್ದಿ ಹರಡುತ್ತಿದ್ದಂತೆ ಸ್ಥಳದಲ್ಲಿ ನೂರಾರು ಕ್ರಿಕೆಟ್ ಅಭಿಮಾನಿಗಳು ನೆರೆದಿದ್ದರು. ಜನರ ನೂಕುನುಗ್ಗಲಿನ ನಡುವೆಯೇ ಕ್ರಿಸ್ ಗೇಲ್ ರೋಡ್ ಶೋ ನಡೆಸಿದರು. ಈ ವೇಳೆ ಅಭಿಮಾನಿಗಳು ಅವರ ಫೋಟೊ ಕ್ಲಿಕ್ಕಿಸಲು ಮುಗಿಬಿದ್ದರು.

ಮಂಗಳೂರು ಬಗ್ಗೆ ಗೇಲ್

ಮಂಗಳೂರು ಬಗ್ಗೆ ಗೇಲ್

ಮಂಗಳೂರು ಬಹಳ ಸುಂದರವಾಗಿದೆ, ಬೆಂಗಳೂರಿಗೂ - ಮಂಗಳೂರಿಗೂ ಬರಿ ಒಂದು ಅಕ್ಷರದ ವ್ಯತ್ಯಾಸ ಅಷ್ಟೇ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Most destructive batsmen in cricketing world, Chris Gayle received warm welcome at Rathna's Wine Gate at Balmatta in city on Sunday February 5 to a function held by Rathna's Wine Gate at Balmatta, Mangaluru.
Please Wait while comments are loading...