ಕೋಲ್ಕತಾ ಐಪಿಎಲ್ ಪಂದ್ಯದಲ್ಲಿ ಕಪಿಚೇಷ್ಟೆ, ಡಬಲ್ ಮನರಂಜನೆ

Written By:
Subscribe to Oneindia Kannada

ಕೋಲ್ಕತಾ, ಏಪ್ರಿಲ್, 14: ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಮಧ್ಯೆ ಬುಧವಾರ ರಾತ್ರಿ ನಡೆದ ಐಪಿಎಲ್ ಪಂದ್ಯಕ್ಕೆ ಟಿಕೆಟ್ ತೆಗೆದುಕೊಳ್ಳದೆ ಅತಿಥಿಯೊಬ್ಬರು ಬಂದಿದ್ದರು. ಬಂದು ಕುರ್ಚಿಯ ಮೇಲೆ ಕುಳಿತು ಪಂದ್ಯವನ್ನು ಆಸ್ವಾದಿಸಿದರು. ಆದರೆ ಎದುರಿಗೆ ಕುಳಿತುಕೊಂಡಿದ್ದರೂ ಪೊಲೀಸರ ಬಳಿ ಅವರ ಬಂಧನ ಮಾಡಲು ಸಾಧ್ಯವಾಗಲಿಲ್ಲ. ಇಷ್ಟಕ್ಕೂ ಮೈದಾನದ ಗ್ಯಾಲರಿಗೆ ಲಗ್ಗೆ ಇಟ್ಟು ಪಂದ್ಯ ವೀಕ್ಷಣೆ ಮಾಡಿದ್ದು ಒಬ್ಬ ಕಪಿರಾಯ!

ಮನುಷ್ಯರೇ ಕಪಿ ಚೇಷ್ಟೆ ಮಾಡುತ್ತಿರುವಾಗ ಮಂಗಗಳು ಮತ್ತಷ್ಟು ಚೇಷ್ಟೆ ಮಾಡುವುದರಲ್ಲಿ ತಪ್ಪೇನಿಲ್ಲ ಬಿಡಿ. ಅಷ್ಟಕ್ಕೂ ಈ ಕಪಿರಾಯ ಬಂದಿದ್ದು ರೋಹಿತ್ ಶರ್ಮಾ ಬ್ಯಾಟಿಂಗ್ ನೋಡಲಿಕ್ಕಂತೆ! ಕೋಲ್ಕತಾ ಮೈದಾನವೆಂದರೆ ರೋಹಿತ್ ಶರ್ಮಾಗೆ ಅಚ್ಚು ಮೆಚ್ಚು. ಅವರು ರನ್ ಹೊಳೆ ಹರಿಸುತ್ತಾರೆ ಎಂಬ ನಂಬಿಕೆಯಿಂದಲೇ ಬಂದ ಕಪಿರಾಯನಿಗೆ ನಿರಾಸೆಯಾಗಲಿಲ್ಲ. [ರೋಹಿತ್ ಅಬ್ಬರ, ಮುಂಬೈಗೆ ಮೊದಲ ಬಾರಿಗೆ ಗೆಲುವಿನ ರುಚಿ]

ipl 9

ಪಂದ್ಯದ ದ್ವಿತೀಯಾರ್ಧದ ವೇಳೆ ಕಾಣಿಸಿಕೊಂಡ ಕಪಿರಾಯ ಬೌಂಡರಿ, ಸಿಕ್ಸರ್ ಬಾರಿಸಿದಾಗ ಚಪ್ಪಾಳೆ ಹೊಡೆದು ಸಂಭ್ರಮಿಸಿದ. ಪೊಲೀಸರು ಅವನನ್ನು ಹೊರಕ್ಕೆ ಅಟ್ಟಲು ಪ್ರಯತ್ನ ಪಟ್ಟರೂ ಕುಳಿತ ಸೀಟಿಂದ ಸುಲಭವಾಗಿ ಎದ್ದೇಳಲಿಲ್ಲ. ಮಂಗನ ಸಮೀಪ ಆಸೀನರಾದವರಿಗೆ ಡಬಲ್ ಮನರಂಜನೆ ಸಿಕ್ಕಿದ್ದು ಸುಳ್ಳಲ್ಲ. ನೀವು ಒಂದೂ ಚೂರು ಕಪಿ ಚೇಷ್ಟೆ ನೋಡಿಕೊಂಡು ಬನ್ನಿ...[ಐಪಿಎಲ್ ವೈಯಕ್ತಿಕ ದಾಖಲೆಗಳು 2008-2015]

-
-
-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A monkey was spotted in the stand where an IPL match between Mumbai Indians and Kolkata Knight Riders was taking place at Eden gardens Kolkalta. you can see the monkey watching excitedly towards the stadium as if enjoying the Rohit Sharma's batting.
Please Wait while comments are loading...