ಪತ್ನಿ ಚಿತ್ರ ಹಾಕಿದ ಶಮಿ ವಿರುದ್ಧ ತಿರುಗಿ ಬಿದ್ದ ಮುಸ್ಲಿಮರು!

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 26: ಗಾಯಗೊಂಡು ಇಂಗ್ಲೆಂಡ್ ಸರಣಿಯಿಂದ ಹೊರಗುಳಿದಿರುವ ವೇಗಿ ಮೊಹಮ್ಮದ್ ಶಮಿ ಅವರ ವಿರುದ್ಧ ಮುಸ್ಲಿಮರು ತಿರುಗಿ ಬಿದ್ದಿದ್ದಾರೆ. ಪತ್ನಿ ಹಾಗೂ ಪುತ್ರಿ ಜತೆಗಿನ ಫೋಟೊವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಶಮಿ ಹಂಚಿಕೊಂಡಿದ್ದರು. ಫೋಟೊ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

26 ವರ್ಷ ವಯಸ್ಸಿನ ಶಮಿ ಅವರು ತಮ್ಮ ಪತ್ನಿ ಹಸೀನ್ ಜಹಾನ್ ಸ್ಲೀವ್ ಲೆಸ್ ಡ್ರೆಸ್ ಧರಿಸಿಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದರು, ಇದನ್ನು ಕಂಡು ಕೆಂಡಾಮಂಡಲವಾದ ಮುಸ್ಲಿಮ್ ಮೂಲಭೂತವಾದಿಗಳು, ಶಮಿ ನೀವು ನಿಜಕ್ಕೂ ಮುಸ್ಲಿಮರೇ ಎಂದು ಪ್ರಶ್ನಿಸಿದ್ದಾರೆ.

ಇಸ್ಲಾಂ ಧರ್ಮಕ್ಕೆ ವಿರೋಧವಾದ ನಡವಳಿಕೆ ಹೊಂದಿದ್ದೀರಿ, ಪತ್ನಿಯ ಫೋಟೊವನ್ನು ಹಂಚಿಕೊಂಡಿದ್ದು ತಪ್ಪು ಎಂದು ಅನೇಕರು ಶಮಿಗೆ ಬೋಧನೆ ಮಾಡಿದ್ದಾರೆ. ಆದರೆ, ಅಭಿಮಾನಿಗಳ ಹೆಸರಿನಲ್ಲಿ ಕಾಮೆಂಟ್ ಮಾಡಿರುವವರ ವಿರುದ್ಧ ಮಾಜಿ ಕ್ರಿಕೆಟರ್ ಮೊಹಮ್ಮದ್ ಕೈಫ್ ಕಿಡಿಕಾರಿದ್ದು, ಶಮಿ ಬೆಂಬಲಕ್ಕೆ ನಿಂತಿದ್ದಾರೆ.

ಮುಸ್ಲಿಮರು ತಿರುಗಿಬಿದ್ದಿದ್ದೇಕೆ?

ಮುಸ್ಲಿಮರು ತಿರುಗಿಬಿದ್ದಿದ್ದೇಕೆ?

ಪತ್ನಿ ಹಾಗೂ ಪುತ್ರಿ ಜತೆಗಿನ ಫೋಟೊವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಶಮಿ ಹಂಚಿಕೊಂಡಿದ್ದರು. ಫೋಟೊ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪತ್ನಿ ಚಿತ್ರ ಹಾಕಿದ ಶಮಿ ವಿರುದ್ಧ ಕಾಮೆಂಟ್ಸ್

ಪತ್ನಿ ಚಿತ್ರ ಹಾಕಿದ ಶಮಿ ವಿರುದ್ಧ ಕಾಮೆಂಟ್ಸ್

ಪತ್ನಿ ಚಿತ್ರ ಹಾಕಿದ ಶಮಿ ವಿರುದ್ಧ ಕೆಂಡಾಮಂಡಲವಾದ ಮುಸ್ಲಿಮ್ ಮೂಲಭೂತವಾದಿಗಳು, ಶಮಿ ನೀವು ನಿಜಕ್ಕೂ ಮುಸ್ಲಿಮರೇ ಎಂದು ಪ್ರಶ್ನಿಸಿದ್ದಾರೆ.

ಅರ್ಥವಿಲ್ಲದೆ ಪ್ರತಿಭಟನೆ ಎಂದ ಕೈಫ್

ಅಭಿಮಾನಿಗಳ ಹೆಸರಿನಲ್ಲಿ ಕಾಮೆಂಟ್ ಮಾಡಿರುವವರ ವಿರುದ್ಧ ಮಾಜಿ ಕ್ರಿಕೆಟರ್ ಮೊಹಮ್ಮದ್ ಕೈಫ್ ಕಿಡಿಕಾರಿದ್ದು, ಶಮಿ ಬೆಂಬಲಕ್ಕೆ ನಿಂತಿದ್ದಾರೆ.

ಇವರಿಬ್ಬರು ನನ್ನ ಜೀವನದ ಅರ್ಥ ಎಂದಿದ್ದ ಶಮಿ

ಇವರಿಬ್ಬರು ನನ್ನ ಜೀವನದ ಅರ್ಥ ಎಂದಿದ್ದ ಶಮಿ ಅವರು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಚಿತ್ರ ಸಮೇತ ಪೋಸ್ಟ್ ಹಾಕಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's strike bowler Mohammed Shami came under sharp criticism of Muslim fanatics for posting his wife Hasin Jahan's pictures on social media.
Please Wait while comments are loading...