ಏಷ್ಯಾ ಕಪ್ ಟಿ-20 ಟೂರ್ನಿಯಿಂದ ಶಮಿ ಔಟ್

By: ರಮೇಶ್ ಬಿ
Subscribe to Oneindia Kannada

ನವದೆಹಲಿ, ಫೆಬ್ರವರಿ 20 : ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮಹಮ್ಮದ್ ಶಮಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಬಾಂಗ್ಲಾದೇಶದಲ್ಲಿ ನಡೆಯುವ ಏಷ್ಯಾಕಪ್ ಟಿ-20 ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಎಡಗಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿರುವ ಮಹಮ್ಮದ್ ಶಮಿ ಅವರು, ಏಷ್ಯಾಕಪ್ ಮತ್ತು ಟಿ-20 ವಿಶ್ವ ಕಪ್ ವೇಳೆಗೆ ಚೇತರಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದ್ದರಿಂದ ಅವರನ್ನು ಎರಡೂ ಸರಣಿಗಳಿಗೆ ಆಯ್ಕೆ ಮಾಡಲಾಗಿತ್ತು. [ಫೆ.21ರಂದು ಬಾಂಗ್ಲಾದೇಶಕ್ಕೆ ಟೀಮ್ ಇಂಡಿಯಾ ಪಯಣ]

mohammed shami

ಆದರೆ, ಅವರು ಚೇತರಿಸಿಕೊಳ್ಳದಕ ಕಾರಣ ಏಷ್ಯಾಕಪ್ ಟಿ-20 ಟೂರ್ನಿಯಿಂದ ಕೈಬಿಡಲಾಗಿದೆ. ಶಮಿ ಅವರ ಬದಲು ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಗಾಯದ ಸಮಸ್ಯೆಯಿಂದಾಗಿ ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಟೂರ್ನಿಯಲ್ಲಿಯೂ ಆಡುವ ಅವಕಾಶವನ್ನು ಶಮಿ ಕಳೆದುಕೊಂಡಿದ್ದರು. [ಕ್ರಿಕೆಟರ್ ರಾಬಿನ್, ಟೆನಿಸ್ ಆಟಗಾರ್ತಿ ಶೀತಲ್ ಮದುವೆ]

ಫೆಬ್ರವರಿ ಫೆ.24 ಏಷ್ಯಾಕಪ್ ಟಿ-20 ಸರಣಿ ಬಾಂಗ್ಲಾದೇಶದಲ್ಲಿ ನಡೆಯಲಿದೆ. ಫೆ.21ರ ಭಾನುವಾರ ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ಬಾಂಗ್ಲಾಕ್ಕೆ ಪ್ರಯಾಣ ಬೆಳೆಸಲಿದೆ. [ಏಷ್ಯಾಕಪ್ 2016 ಸೆಣಸಾಟಕ್ಕೆ ಸಿದ್ಧವಾದ ತಂಡಗಳು]

ಭಾರತ ತಂಡದಲ್ಲಿ ಯಾರಿದ್ದಾರೆ? : ಮಹೇಂದ್ರ ಸಿಂಗ್ ಧೋನಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಅಜಿಂಕ್ಯಾ ರಹನೆ, ರವೀಂದ್ರ ಜಡೇಜಾ, ಹರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಆಶೀಶ್ ನೆಹ್ರಾ, ಭುವನೇಶ್ವರ್ ಕುಮಾರ್, ಪವನ್ ನೇಗಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mohammed Shami has been ruled out of the Asia Cup T20 after failing to fully recover from a hamstring injury. The Asia Cup to be played in Bangladesh from February 24, 2016.
Please Wait while comments are loading...