ಮತ್ತೆ ಪತ್ನಿಯೊಂದಿಗಿನ ಚಿತ್ರ ಹಾಕಿ ವಿರೋಧಿಗಳಿಗೆ ಶಮಿ ತಿರುಗೇಟು

Posted By: Ramesh
Subscribe to Oneindia Kannada

ನವದೆಹಲಿ, ಜನವರಿ. 02 : ಇತ್ತೀಚೆಗೆ ತಮ್ಮ ಪತ್ನಿ ಹಸೀನ್ ಜಹಾನ್ ಸ್ಲೀವ್ ಲೆಸ್ ಡ್ರೆಸ್ ಧರಿಸಿಕೊಂಡಿರುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿದ್ದ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಅವರು ಹೊಸ ವರ್ಷದಂದು ಮತ್ತೆ ತಮ್ಮ ಪತ್ನಿಯೊಂದಿಗಿರುವ ಚಿತ್ರವನ್ನು ಫೇಸ್‌ಬುಕ್‌ ಮತ್ತು ಟ್ವಿಟರ್ ನಲ್ಲಿ ಪೋಸ್ಟ್‌ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

26 ವರ್ಷ ವಯಸ್ಸಿನ ಕ್ರಿಕೆಟಿಗ ಮೊಹಮ್ಮದ್ ಶಮಿ ಹೊಸ ವರ್ಷದಂದು ತಮ್ಮ ಪತ್ನಿಯೊಂದಿಗಿರುವ ಚಿತ್ರವನ್ನು ಫೇಸ್‌ಬುಕ್‌ ಮತ್ತು ಟ್ವಿಟರ್ ನಲ್ಲಿ ಪೋಸ್ಟ್‌ ಮಾಡಿದ್ದಾರೆ.[ಪತ್ನಿ ಚಿತ್ರ ಹಾಕಿದ ಶಮಿ ವಿರುದ್ಧ ತಿರುಗಿ ಬಿದ್ದ ಮುಸ್ಲಿಮರು!]

Mohammed Shami posts picture with wife Hasin Jahan, wishes everyone a Happy New Year

ಈ ಬಾರಿಯೂ ಫೇಸ್‌ಬುಕ್‌ನಲ್ಲಿ ಶಮಿ ಅವರ ಪೋಸ್ಟ್‌ ವಿರೋಧಿಸಿ ಹಲವರು ಕಮೆಂಟ್ ಮಾಡಿದ್ದಾರೆ. ಹಾಗೆಯೇ ಹಲವರು ಶಮಿ ಅವರನ್ನು ಬೆಂಬಲಿಸಿದ್ದಾರೆ.

'ನನಗೆ ಯಾರೂ ಗೆಳೆಯರಿಲ್ಲ. ಯಾರೂ ನನ್ನವರಲ್ಲ, ನಾನೂ ಯಾರಿಗೂ ಸೇರಿದವನಲ್ಲ. ಆದರೆ, ನಿನ್ನನ್ನು ನೋಡಿದ ಮೇಲೆ ನನಗನ್ನಿಸುತ್ತದೆ ಸುಂದರ ಸಂಗಾತಿಯೊಂದು ನನ್ನೊಂದಿಗೆ ಇದೆಯೆಂದು. ಹೊಸ ವರ್ಷದ ಶುಭಾಶಯ' ಎಂಬ ಬರಹದೊಂದಿಗೆ ಶಮಿ ತಮ್ಮ ಪತ್ನಿಯೊಂದಿಗಿರುವ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಈ ಚಿತ್ರವನ್ನು 70 ಸಾವಿರಕ್ಕೂ ಹೆಚ್ಚು ಮಂದಿ ಲೈಕ್‌ ಮಾಡಿದ್ದಾರೆ. 4300ಕ್ಕೂ ಹೆಚ್ಚು ಕಾಮೆಂಟ್ಸ್ ಗಳನ್ನು ಮಾಡಿದ್ದಾರೆ. ಟ್ವಿಟರ್ ನಲ್ಲಿ 6500 ಹೆಚ್ಚು ಮಂದಿ ಈ ಚಿತ್ರವನ್ನು ಲೈಕ್‌ ಮಾಡಿದ್ದು, ಎರಡು ಸಾವಿರಕ್ಕೂ ಹೆಚ್ಚು ರಿಟ್ವೀಟ್ ಆಗಿದೆ.

ಈ ಹಿಂದೆ ಶಮಿ ತಮ್ಮ ಪತ್ನಿ ಹಾಗೂ ಪುತ್ರಿ ಜತೆಗಿನ ಫೋಟೊವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಶಮಿ ಹಂಚಿಕೊಂಡಿದ್ದರು. ಫೋಟೊ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
While Mohammed Shami was recently targeted for sharing a picture with his wife Hasin Jahan, the Indian pacer clearly is in no mood to let the trolls slow him down as he posted another picture of the two on the first day of the New Year and wished his followers.
Please Wait while comments are loading...