ಅಜರುದ್ದೀನ್ ಹೆಸರಿನಲ್ಲಿ ಮೊಬೈಲ್ ಗೇಮ್

Posted By:
Subscribe to Oneindia Kannada

ಹೈದರಾಬಾದ್, ಆಗಸ್ಟ್ 09: ಕ್ರಿಕೆಟರ್ ಮೊಹಮ್ಮದ್ ಅಜರುದ್ದೀನ್ ಅವರ ಮ್ಯಾಚ್ ಫಿಕ್ಸಿಂಗ್ ಕೇಸಿನ ಭವಿಷ್ಯ ಏನಾಗುವುದೋ ಗೊತ್ತಿಲ್ಲ. ಆದರೆ, ಸದ್ಯಕ್ಕಂತೂ ಅವರ ಹೆಸರಿನಲ್ಲಿ ಕ್ರಿಕೆಟ್ ಗೇಮ್ ಹೊರ ತರಲಾಗಿದೆ.

ಹೈದರಾಬಾದ್ ಮೂಲದ ಆಟಗಾರ 99 ಟೆಸ್ಟ್ ಪಂದ್ಯಗಳಲ್ಲಿ 6216 ರನ್ ಗಳಿಸಿದ್ದು, 22 ಶತಕ ಹಾಗೂ 21 ಅರ್ಧಶತಕಗಳನ್ನು ಗಳಿಸಿದ್ದಾರೆ. ಈಗ ಮುಂದಿನ ಪೀಳಿಗೆಯ ಹೊಸ ಮೊಬೈಲ್ ಆಟವೊಂದನ್ನು ಪರಿಚಯಿಸಲು ಮುಂದಾಗಿದ್ದಾರೆ.

Mohammad Azharuddin to launch new mobile game in his game

ಇದಲ್ಲದೆ ಏಕದಿನ ಕ್ರಿಕೆಟ್ ನಲ್ಲಿ ಅಜರ್ ಅವರು 334 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಂದ 9378 ರನ್ ಗಳನ್ನು ಗಳಿಸಿದ್ದು, ಏಳು ಶತಕ ಹಾಗೂ 58 ಅರ್ಧಶತಕಗಳನ್ನು ಗಳಿಸಿದ್ದಾರೆ.

ಅಜರುದ್ದೀನ್ ಎಂದರೆ ಅವರು ಹೊಡೆಯುತ್ತಿದ್ದ ಫ್ಲಿಕ್ಸ್, ಡ್ರೈವ್ ಗಳು ನೆನಪಿಗೆ ಬರುತ್ತದೆ. ಅಜರ್ ನಂತರ ವಿವಿಎಸ್ ಲಕ್ಷ್ಮಣ್ ಅವರು ಸ್ವಲ್ಪಮಟ್ಟಿಗೆ ಅಜರ್ ಶೈಲಿಯ ಬ್ಯಾಟಿಂಗ್ ಹೋಲುವಂತೆ ಬ್ಯಾಟ್ ಬೀಸುತ್ತಿದ್ದರು. ಆದರೆ, ಅಜರ್ ರಂತೆ ಮಣಿಕಟ್ಟನ್ನು ತಿರುಗಿಸಿ, ಯಾರ್ಕ್ ಎಸೆತವನ್ನೂ ಬೌಂಡರಿಗೆ ಅಟ್ಟಬಲ್ಲ ಜಾಣ್ಮೆ ಪಡೆದ ಮತ್ತೊಬ್ಬ ಆಟಗಾರನನ್ನು ಕ್ರಿಕೆಟ್ ಲೋಕ ಕಂಡಿಲ್ಲ.

ಹೀಗೆ ವಿಶಿಷ್ಟ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಮಾಜಿ ನಾಯಕ ಅಜರ್ ಅವರ ಬ್ಯಾಟಿಂಗ್ ಶೈಲಿಯಲ್ಲಿ ಅಭಿಮಾನಿಗಳು ಆಡಬಹುದು. ಕ್ರಿಕೆಟ್ ಮೊಬೈಲ್ ಗೇಮ್ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಹೊರ ಬರಲಿದೆ.

ಈ ನಡುವೆ ಕ್ರಿಕೆಟ್ ಆಡಳಿತ ಅಧಿಕಾರಿಗಳ ಸಮಿತಿ (ಸಿಒಎ) ಗೆ ಪತ್ರ ಬರೆದಿರುವ ಅಜರುದ್ದೀನ್ ಅವರು, ತಮ್ಮಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಬಿಸಿಸಿಐಗೆ ಸೂಚಿಸುವಂತೆ ಕೋರಿದ್ದಾರೆ.

ಆಂಧ್ರಪ್ರದೇಶದ ಹೈಕೋರ್ಟಿನಿಂದ ಅಜೀವ ನಿಷೇಧ ತೆರವುಗೊಳಿಸಿಕೊಂಡಿರುವ ಅಜರ್ ಅವರಿಗೆ ಐದು ವರ್ಷವಾದರೂ ಬಿಸಿಸಿಐ ಕೃಪೆ ಸಿಕ್ಕಿಲ್ಲ. ಹೀಗಾಗಿ, ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಾಧ್ಯವಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English:
English summary
For those who saw, it will be tough to forget the visual of Mohammad Azharuddin batting. Flicks executed standing tall, drives that saw his wrists uncoiling like a spring, it was a sight for Gods.
Please Wait while comments are loading...