ಅಜರುದ್ದೀನ್ ರಿಂದ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ

Posted By:
Subscribe to Oneindia Kannada

ಹೈದರಾಬಾದ್, ಜನವರಿ 10: ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಮಂಗಳವಾರ (ಜನವರಿ 10) ರಂದು ಹೈದರಾಬಾದ್ ಕ್ರಿಕೆಟ್ ಮಂಡಳಿ(ಎಚ್ ಸಿಎ)ಯ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ನ್ಯಾ.ಲೋಧಾ ಸಮಿತಿ ವರದಿ ಅಳವಡಿಸಲು ಎಚ್ ಸಿಎ ಮುಂದಾದ ಹಿನ್ನಲೆಯಲ್ಲಿ ಅರ್ಷದ್ ಅಯೂಬ್ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು.

ಟೀಂ ಇಂಡಿಯಾದ ಯಶಸ್ವಿ ನಾಯಕರ ಪೈಕಿ ಒಬ್ಬರಾದ ಅಜರುದ್ದೀನ್ ಅವರು 1992, 1996, 1999 ರ ವಿಶ್ವಕಪ್ ನಲ್ಲಿ ತಂಡವನ್ನು ಮುನ್ನಡೆಸಿದ್ದರು. 2000ರಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಹೊತ್ತಿದ್ದ ಅಜರುದ್ದೀನ್ ಅವರ ಮೇಲೆ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. ನಂತರ ನಿಷೇಧದಿಂದ ಪಾರಾಗಿದ್ದರು.

Mohammad Azharuddin files nomination for HCA president's post

ಅಜರುದ್ದೀನ್ ಅವರು 99 ಟೆಸ್ಟ್ ಪಂದ್ಯಗಳಿಂದ 6000ರನ್ ಸ್ಕೋರ್ ಮಾಡಿದ್ದು, 24 ಶತಕಗಳನ್ನು ಬಾರಿಸಿದ್ದಾರೆ. ಯುಪಿಎ IIರ ಅವಧಿಯಲ್ಲಿ ಅಜರುದ್ದೀನ್ ಅವರು ಮೊರಾದಾಬಾದಿನ ಸಂಸದರಾಗಿದ್ದ ಅಜರ್, 2014ರ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಈ ಹಿಂದೆ ಬಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ(ಬಿಎಐ) ಆಡಳಿತ ಮಂಡಳಿ ಸೇರಲು ಯತ್ನಿಸಿ ನಂತರ ಹಿಂದೆ ಸರಿದಿದ್ದರು. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former India captain Mohammad Azharuddin on Tuesday (Jan 10) filed his nomination papers for Hyderabad Cricket Association president's post after incumbent Arshad Ayub quit office following the Supreme Court verdict on Lodha committee reforms.
Please Wait while comments are loading...