ಮಹಾರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಗೆಲುವು

Posted By:
Subscribe to Oneindia Kannada

ಪುಣೆ, ನವೆಂಬರ್ 04:2017ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಸತತ ಮೂರನೇ ಗೆಲುವು ದಾಖಲಿಸಿದೆ. ಮಹಾರಾಷ್ಟ್ರ ವಿರುದ್ಧದ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 136ರನ್ ಗಳಿಂದ ಗೆದ್ದು ಸಂಭ್ರಮಿಸಿದೆ.

ದ್ವಿಶತಕ ಸಿಡಿಸಿ 70 ವರ್ಷ ಹಳೆಯ ದಾಖಲೆ ಮುರಿದ ಪೂಜಾರಾ

383ರನ್ ಗಳ ಬೃಹತ್ ಮುನ್ನಡೆ ಪಡೆದುಕೊಂಡ ಕರ್ನಾಟಕ ಪಂದ್ಯವನ್ನು ಗೆಲ್ಲುವ ನಿರೀಕ್ಷೆ ಆರಂಭದಿಂದಲೇ ಇತ್ತು. ಮೂರನೇ ದಿನದ ಅಂತ್ಯಕ್ಕೆ 135/4 ಸ್ಕೋರ್ ಮಾಡಿದ್ದ ಮಹಾರಾಷ್ಟ್ರ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 247ಸ್ಕೋರ್ ಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿದೆ.

Mithun's five-for brings innings win for Karnataka

ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ ಅವರು 66ರನ್ನಿತ್ತು 5ವಿಕೆಟ್ ಪಡೆದು ಮಹಾರಾಷ್ಟ್ರದ ಬ್ಯಾಟ್ಸ್ ಮನ್ ಗಳನ್ನು ಕಾಡಿದರು. ಮಹಾರಾಷ್ಟ್ರದ ಪರ ಋತುರಾಜ್ ಗಾಯಕ್ವಾಡ್ 65ರನ್(130 ಎಸೆತಗಳು, 10 ಬೌಂಡರಿ) ಗಳಿಸಿ ಪ್ರತಿರೋಧ ವ್ಯಕ್ತಪಡಿಸಿದರು. ತ್ರಿಶತಕ ಬಾರಿಸಿದ ಮಾಯಾಂಕ್ ಅಗರವಾಲ್ ಅವರು ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka registered their third win on the trot in the Ranji Tophy when they walloped Maharashtra by an innings and 136 runs on Saturday (November 4) at Pune.
Please Wait while comments are loading...