ಮಿಥಾಲಿ ರಾಜ್ ಗೆ ಐಷಾರಾಮಿ ಕಾರು ಉಡುಗೊರೆ

Posted By:
Subscribe to Oneindia Kannada

ಹೈದರಾಬಾದ್, ಜುಲೈ 26: ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರಿಗೆ ಐಷಾರಾಮಿ ಕಾರಿನ ಉಡುಗೊರೆ ಕಾದಿದೆ. ಕ್ರೀಡಾ ಸಾಧಕರಿಗೆ ಬಿಎಂಡಬ್ಲ್ಯೂ ಕಾರು ನೀಡುತ್ತಾ ಬಂದಿರುವ ಮಾಜಿ ರಣಜಿ ಕ್ರಿಕೆಟರ್ ಚಾಮುಂಡೇಶ್ವರನಾಥ್ ಅವರು ಮಿಥಾಲಿ ಅವರಿಗೆ ಈ ಭರ್ಜರಿ ಗಿಫ್ಟ್ ನೀಡುತ್ತಿದ್ದಾರೆ.

ಕಳೆದ ವರ್ಷ ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರಾದ ಬ್ಯಾಡ್ಮಿಂಟನ್ ಸ್ಟಾರ್ ಪಿ.ವಿ. ಸಿಂಧು, ಕುಸ್ತಿಪಟು ಸಾಕ್ಷಿ ಮಲಿಕ್ ಗೆ ಚಾಮುಂಡೇಶ್ವರನಾಥ್ ಬಿಎಂಡಬ್ಲು ಕಾರನ್ನು ಗಿಫ್ಟ್ ನೀಡಿದ್ದರು.

Mithali Raj to get BMW car as gift from V Chamundeswaranath

ಆಂಧ್ರ ಪ್ರದೇಶ ರಣಜಿ ತಂಡದ ಮಾಜಿ ನಾಯಕ, ಹೈದರಾಬಾದ್ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ಉಪಾಧ್ಯಕ್ಷ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಆಪ್ತ ಗೆಳೆಯರಾಗಿರುವ ವಿ.ಚಾಮುಂಡೇಶ್ವರನಾಥ್ ಅವರು ಬಿಎಂಡಬ್ಲ್ಯೂ ಕಾರುಗಳನ್ನು ಗಿಫ್ಟ್ ನೀಡುವುದರಲ್ಲಿ ಎತ್ತಿದ ಕೈ.

ಪಿ.ವಿ. ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಹಾಗೂ ಕೋಚ್ ಪಿ.ಗೋಪಿಚಂದ್‌ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರು ಕಾರಿನ ಕೀ ಹಸ್ತಾಂತರಿಸಿದ್ದರು. ಬ್ಯಾಡ್ಮಿಂಟನ್ ಆಟಗಾರರಾದ ಸೈನಾ ನೆಹ್ವಾಲ್ ಹಾಗೂ ಪಿ. ಕಶ್ಯಪ್‌ಗೆ ಕೂಡ ಚಾಮುಂಡೇಶ್ವರನಾಥ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

Mithali Raj Creats a World Record Completing 6000 ODI Runs | Oneindia Kannada

ಈಗ ಮಿಥಾಲಿ ಅವರು ಹೈದರಾಬಾದಿಗೆ ಹಿಂತಿರುಗಿದ ನಂತರ ಅವರಿಗೆ ಈ ಭರ್ಜರಿ ಉಡುಗೊರೆಯನ್ನು ಸಚಿನ್ ತೆಂಡೂಲ್ಕರ್ ಅವರಿಂದ ಕೊಡಿಸಲು ಚಾಮುಂಡೇಶ್ವರ್ ನಾಥ್ ಮುಂದಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
V Chamundeswaranath, who had captained the Andhra Ranji team in the past,said he will present Mithali Raj with a BMW after India's performance in the ICC Women's World Cup 2017.
Please Wait while comments are loading...