ಮಿಸ್ಬಾ ದಾಖಲೆ ಶತಕ, 10 ಪುಶ್ ಅಪ್ಸ್ ವಿಡಿಯೋ

Posted By:
Subscribe to Oneindia Kannada

ಲಂಡನ್, ಜುಲೈ 15: ಪಾಕ್ ಟೆಸ್ಟ್ ತಂಡದ ನಾಯಕ ಮಿಸ್ಬಾ ಉಲ್ ಹಕ್ ಅವರು ಲಾರ್ಡ್ಸ್ ಮೈದಾನದಲ್ಲಿಗುರುವಾರ ಹೊಸ ದಾಖಲೆ ಬರೆದಿದ್ದಾರೆ. 42 ವರ್ಷ ವಯಸ್ಸಿನ ಮಿಸ್ಬಾ ಅವರು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಅತಿ ಹಿರಿಯ ಆಟಗಾರನೊಬ್ಬ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ.

ಒಟ್ಟಾರೆ, ಶತಕ ಸಿಡಿಸಿದ ಹಿರಿಯ ಆಟಗಾರರ ಪಟ್ಟಿಯಲ್ಲಿ ಮಿಸ್ಬಾ ಈಗ 6ನೇ ಸ್ಥಾನದಲ್ಲಿದ್ದಾರೆ. 82 ವರ್ಷಗಳ ಬಳಿಕ ಹೀಗೊಂದು ದಾಖಲೆಗೆ ಲಾರ್ಡ್ಸ್ ಅಂಗಳ ಸಾಕ್ಷಿಯಾಗಿದೆ. [ಭಾರತಕ್ಕೆ ಇಂಗ್ಲೆಂಡ್ ಪ್ರವಾಸ, ಬೆಂಗ್ಳೂರಲ್ಲಿ 1 ಟಿ20 ಪಂದ್ಯ]

42 ವರ್ಷ 47ದಿನ, ವಯಸ್ಸಿನ ಮಿಸ್ಬಾ ಅವರ ಶತಕ (ಅಜೇಯ 110) ದ ನೆರವಿನಿಂದ ಪಾಕಿಸ್ತಾನ ತಂಡ ಮೊದಲ ದಿನದ ಅಂತ್ಯಕ್ಕೆ 282/6 ಸ್ಕೋರ್ ಮಾಡಲು ಸಾಧ್ಯವಾಯಿತು.

ಇಂಗ್ಲೆಂಡ್ ಕ್ರಿಕೆಟಿಗ ಜಾಕ್ ಹೋಬ್ಸ್ ಅವರು 46 ವರ್ಷ 82 ದಿನ ವಯಸ್ಸಿನಲ್ಲಿ ಶತಕ ಬಾರಿಸಿ, ಈ ಸಾಧನೆ ಮಾಡಿದ ಅತಿ ಹಿರಿಯ ಕ್ರಿಕೆಟಿಗ ಎಂದೆನಿಸಿದ್ದರು. ಲಾರ್ಡ್ಸ್ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲೇ ಮಿಸ್ಬಾ ಅವರು ಶತಕ ದಾಖಲಿಸಿದ್ದಾರೆ.

ಶತಕ ಗಳಿಸಿದ ಮೇಲೆ ಮಿಸ್ಬಾ ಅವರು ಸೆಲ್ಯೂಟ್ ಮಾಡಿದರು. ನಂತರ 10 ಪುಶ್ ಅಪ್ ಮಾಡಿ, ಸಂಭ್ರಮವನ್ನು ಆಚರಿಸಿದ್ದು ವಿಶೇಷ. ಈ ಬಗ್ಗೆ ಪ್ರತಿಕ್ರಿಯಿಸಿ, ಪಾಕಿಸ್ತಾನ ಆರ್ಮಿಗೆ ನಾನು ಶತಕ ಗಳಿಸಿದ ಮೇಲೆ ಪುಶ್ ಅಪ್ಸ್ ಮಾಡಿ ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದಿದ್ದೆ. ಅದರಂತೆ ಸಂಭ್ರಮಾಚರಣೆ ಮಾಡಿದೆ ಎಂದಿದ್ದಾರೆ.

ಮೊದಲ ದಿನದ ಅಂತ್ಯಕ್ಕೆ ಪಾಕಿಸ್ತಾನ 6/282

ಮೊದಲ ದಿನದ ಅಂತ್ಯಕ್ಕೆ ಪಾಕಿಸ್ತಾನ 6/282

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯಕ್ಕೆ ಪಾಕಿಸ್ತಾನ ಆರು ವಿಕೆಟ್ ಕಳೆದುಕೊಂಡು 282 ರನ್ ​ಗಳಿಸಿತ್ತು. ಎರಡನೇ ದಿನದಂದು ಮಿಸ್ಬಾ ಉಲ್ ಹಕ್ 110 ರನ್ನಿಗೆ 4 ರನ್ ಸೇರಿಸಿ ಔಟಾದರು.

ಪಾಕಿಸ್ತಾನ 339ಸ್ಕೋರಿಗೆ ಆಲೌಟ್

ಅಂತಿಮವಾಗಿ ಪಾಕಿಸ್ತಾನ 99.2 ಓವರ್ ಗಳಲ್ಲಿ 339ಸ್ಕೋರಿಗೆ ಆಲೌಟ್ ಆಯಿತು. ಇಂಗ್ಲೆಂಡ್ ತಂಡ ಆರಂಭದಲ್ಲೇ ಹೇಲ್ಸ್ ವಿಕೆಟ್ ಕಳೆದುಕೊಂಡು 11 ಓವರ್ ಗಳಲ್ಲಿ 66/1 ಸ್ಕೋರ್ ಮಾಡಿದೆ.

10 ಪುಶ್ ಅಪ್ಸ್ ವಿಡಿಯೋ

ನಾನು ಶತಕ ಗಳಿಸಿದ ಮೇಲೆ ಪುಶ್ ಅಪ್ಸ್ ಮಾಡಿ ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದಿದ್ದೆ. ಅದರಂತೆ ಸಂಭ್ರಮಾಚರಣೆ ಮಾಡಿದೆ ಎಂದಿದ್ದಾರೆ.

ಪಿಸಿಬಿಯಿಂದ ನಾಯಕನಿಗೆ ಸೆಲ್ಯೂಟ್

ಕಳೆದ ಹತ್ತು ವರ್ಷಗಳಲ್ಲಿ ಇಂಥ ಪ್ರದರ್ಶನ ಕಂಡಿಲ್ಲ ಎಂದು ಪಿಸಿಬಿಯಿಂದ ನಾಯಕ ಮಿಸ್ಬಾಗೆ ಸೆಲ್ಯೂಟ್.

ನಾಯಕನಾಗಿ ಮಿಸ್ಬಾ ಅಂಕಿ ಆಂಶ

ನಾಯಕನಾಗಿ ಮಿಸ್ಬಾ ಅಂಕಿ ಆಂಶ, 4,458ರನ್ ಗಳ ಪೈಕಿ 3,450 ರನ್ ಅಥವಾ ಶೇ 77 ರಷ್ಟು ನಾಯಕನಾಗಿ ಗಳಿಸಿದ್ದಾರೆ.

40 ವರ್ಷಗಳ ನಂತದ ಜೀವನ

ಲಿಯಾಂಡರ್ ಪೇಸ್ ಹಾಗೂ ಮಿಸ್ಬಾಗೆ ವಯಸ್ಸಾಗುವುದೇ ಇಲ್ಲವೇ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Pakistan skipper Misbah-ul-Haq slammed an impressive Test century against England at Lord's on Thursday (July 14) during the first Test match here.
Please Wait while comments are loading...