ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್ಟಿಗೆ ಮಿಸ್ಬಾ, ಅಫ್ರಿದಿ ಗುಡ್ ಬೈ

By Mahesh

ಅಡಿಲೇಡ್, ಮಾ.20: ವಿಶ್ವಕಪ್ ಟೂರ್ನಿ 2015ರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ತಂಡ 6 ವಿಕೆಟ್ ಗಳ ಅಂತರದ ಸೋಲು ಕಂಡಿದೆ. ಈ ಸೋಲಿನೊಂದಿಗೆ ಅನೇಕ ಕ್ರೀಡಾಭಿಮಾನಿಗಳಿಗೆ ನಿರಾಶೆ ಮೂಡಿಸಿದ ಹೊಣೆ ಹೊತ್ತಿರುವ ನಾಯಕ ಮಿಸ್ಬಾ ಉಲ್ ಹಕ್ ಹಾಗೂ ಶಹೀದ್ ಅಫ್ರಿದಿ ಅವರು ಏಕದಿನ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.

ಶಹೀದ್ ಅಫ್ರಿದಿ ಅವರು ವಿಶ್ವಕಪ್ ಟೂರ್ನಿಯ ನಂತರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳುವ ಬಗ್ಗೆ ಮೊದಲೇ ಘೋಷಿಸಿದ್ದರು. ಅದರೆ, ನಾಯಕ ಮಿಸ್ಬಾ ಉಲ್ ಹಕ್ ಗುಡ್ ಬೈ ಹೇಳಿದ್ದು ಅವರ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಕೊನೆ ಪಂದ್ಯದಲ್ಲಿ ಮಿಸ್ಬಾ 34ರನ್ ಗಳಿಸಿ ಔಟ್ ಆದರು.

Misbah and Afridi bid adieu to ODI cricket, World Cup pakistan exit

162 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿರುವ 40 ವರ್ಷ ವಯಸ್ಸಿನ ಮಿಸ್ಬಾ ಅವರು ಒಂದೇ ಒಂದು ಶತಕ ಬಾರಿಸದೇ ವಿದಾಯ ಹೇಳಿದ್ದು ಇನ್ನೂ ಬೇಸರ ತರಿಸಿದೆ. ಒಡಿಐನಲ್ಲಿ 42 ಅರ್ಧಶತಕ ಬಾರಿಸಿರುವ ಮಿಸ್ಬಾ 5,122 ರನ್ ಗಳಿಸಿದ್ದಾರೆ.

ಶತಕ ಬಾರಿಸದೆ 5,000 ಪ್ಲಸ್ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. 2001ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯವಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಮಿಸ್ಬಾ ಪರಿಚಿತರಾದರು.

Shahid Afridi

35 ವರ್ಷ ವಯಸ್ಸಿನ ಆಲ್ ರೌಂಡರ್ ಅಫ್ರಿದಿ ಅವರು 398 ಒಡಿಐ ಆಡಿದ್ದು 8,064 ರನ್ ಗಳಿಸಿ, 395 ವಿಕೆಟ್ ಕಿತ್ತಿದ್ದಾರೆ. 2011ರ ವಿಶ್ವಕಪ್ ನಲ್ಲಿ ತಂಡವನ್ನು ಮುನ್ನಡೆಸಿದ್ದರು. ಮೋಹಾಲಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚಾಂಪಿಯನ್ ಟೀಂ ಇಂಡಿಯಾ ವಿರುದ್ಧ ಅಫ್ರಿದಿ ಪಡೆ ಸೋಲು ಕಂಡಿತ್ತು.

ಮಿಸ್ಬಾ ಉಲ್ ಹಕ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಮುಂದುವರೆಯಲಿದ್ದು, ಅಫ್ರಿದಿ ಅವರು ಟಿ20 ಕ್ರಿಕೆಟ್ ನಲ್ಲಿ ಆಡಲಿದ್ದಾರೆ. 1996ರಲ್ಲಿ ಶ್ರೀಲಂಕಾ ವಿರುದ್ಧ 37 ಎಸೆತಗಳಲ್ಲಿ ಶತಕ ಗಳಿಸಿದ 'ಬೂಮ್ ಬೂಮ್' ಖ್ಯಾತಿಯ ಜನಪ್ರಿಯ ಕ್ರಿಕೆಟರ್ ಅಫ್ರಿದಿ ಅವರ ಅನೇಕ ಒಡಿಐ ಇನ್ನಿಂಗ್ಸ್ ಗಳನ್ನು ಕ್ರೀಡಾಭಿಮಾನಿ ಮೆಚ್ಚುಗೆ ಪಡೆದಿವೆ

(ಪಿಟಿಐ)

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X