ಪಾಕಿಸ್ತಾನ ಕೋಚ್ ಆಗಿ ಮಿಕ್ಕಿ ಆಯ್ಕೆ, ಫುಲ್ ಟ್ರೆಂಡಿಂಗ್!

Posted By:
Subscribe to Oneindia Kannada

ಕರಾಚಿ, ಮೇ 06: 'ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗುವುದೆಂದರೆ ಅದು ವೃತ್ತಿಯನ್ನೇ ಪಣಕ್ಕಿಟ್ಟಂತೆ' ಎಂಬ ಅಘೋಷಿತ ವಾಕ್ಯ ಕ್ರಿಕೆಟ್ ಲೋಕದಲ್ಲಿ ಹರಿದಾಡುತ್ತಿರುವಾಗ ದಕ್ಷಿಣ ಆಫ್ರಿಕಾದ ಮಿಕ್ಕಿ ಆರ್ಥರ್ ಅವರನ್ನು ಮುಖ್ಯ ಕೋಚ್ ಆಗಿ ಶುಕ್ರವಾರ (ಮೇ 06) ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ನೇಮಿಸಿದೆ.

ವಿಶ್ವ ಟ್ವೆಂಟಿ20 ಟೂರ್ನಿ ನಂತರ ಮುಖ್ಯ ಕೋಚ್ ಸ್ಥಾನಕ್ಕೆ ವಖಾರ್ ಯೂನಿಸ್ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಸಾಕಷ್ಟು ಹುಡುಕಾಟ ನಡೆಸಿದ ಪಿಸಿಬಿ ಈಗ ಮಿಕ್ಕಿ ಅವರನ್ನು ಕರೆ ತಂದಿದೆ. ಮಿಕ್ಕಿ ಅವರು ಪಾಕ್ ತಂಡದ ಕೋಚ್ ಆಗಿ ನೇಮಕವಾಗುವ ಸುದ್ದಿ ಹೊರ ಬರುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗುತ್ತಿದ್ದಾರೆ.[ಪಾಕ್‌ ಕೋಚ್‌ ಬಾಬ್‌ ವೂಲ್ಮರ್‌ ದುರಂತ ಸಾವು]

ವಾಸೀಂ ಅಕ್ರಮ್, ರಮೀಜ್ ರಾಜಾ ಹಾಗೂ ಫೈಜಲ್ ಮಿರ್ಜಾ ಅವರನ್ನೊಳಗೊಂಡ ಸಮಿತಿ ನೀಡಿದ ಶಿಫಾರಸು ಆನ್ವಯ ಮಿಕ್ಕಿ ಆರ್ಥರ್ ಅವರನ್ನು ಪಿಸಿಬಿ ಆಯ್ಕೆ ಮಾಡಿದೆ.

47ವರ್ಷ ವಯಸ್ಸಿನ ಮಿಕ್ಕಿ ಆರ್ಥರ್ ಅವರು ದಕ್ಷಿಣ ಆಫ್ರಿಕಾ ಪರ 110 ಪಂದ್ಯಗಳನ್ನಾಡಿದ್ದು, ಪಾಕಿಸ್ತಾನಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡದ ಕೋಚ್ ಆಗಿದ್ದರು.

ದಕ್ಷಿಣ ಆಫ್ರಿಕಾದ ಕೋಚ್ ಆಗಿದ್ದ ಕಾಲದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎಲ್ಲಾ ಮಾದರಿಯಲ್ಲಿ ಆಗ್ರ ಶ್ರೇಯಾಂಕದಲ್ಲಿ ತಂದಿದ್ದರು. ಸತತವಾಗಿ 13 ಏಕದಿನ ಪಂದ್ಯಗಳ ಗೆಲುವು ಸಾಧಿಸಿ ಆಸ್ಟ್ರೇಲಿಯಾ ತಂಡದ ಸಾಧನೆ ಸಮಗೊಳಿಸಿದ್ದರು. ಮಿಕ್ಕಿ ಅವರ ಸಾಧನೆ, ಈ ಹಿಂದೆ ಪಾಕಿಸ್ತಾನದ ಕೋಚ್ ಆಗಿದ್ದ ಸಮಯದಲ್ಲೇ ವಿಧಿವಶರಾದ ದಕ್ಷಿಣ ಆಫ್ರಿಕಾದ ಬಾಬ್ ವೋಲ್ಹರ್ ಬಗ್ಗೆ ಹಾಗೂ ಪಾಕಿಸ್ತಾನದ ಕ್ರಿಕೆಟ್ ಮಂಡಳಿ ಬಗ್ಗೆ ಥರಾವರಿ ಟ್ವೀಟ್ಸ್ ಬಂದಿವೆ...

ಸಕತ್ ಟಫ್ ಕೋಚಿಂಗ್ ನೀಡುವ ಮಿಕ್ಕಿ

ಸಕತ್ ಟಫ್ ಕೋಚಿಂಗ್ ನೀಡುವ ಮಿಕ್ಕಿ

ಐಸಿಸಿ ಕ್ರಿಕೆಟ್ ಸಮಿತಿಯಲ್ಲಿ 2008ರಿಂದ 2010ರ ತನಕ ಕಾರ್ಯನಿರ್ವಹಿಸಿರುವ ಮಿಕ್ಕಿ ಅವರು 2011-2013ರ ತನಕ ಆಸ್ಟ್ರೇಲಿಯಾ ತಂಡ, 2005-2010ರ ತನಕ ದಕ್ಷಿಣ ಆಫ್ರಿಕಾ ತಂಡ ಕೋಚ್ ಆಗಿದ್ದರಲ್ಲದೆ, ಜಮೈಕಾ ತಲ್ಲಾವಾಸ್, ಢಾಕಾ ಗ್ಲಾಡಿಯೇಟರ್ಸ್, ಕರಾಚಿ ಕಿಂಗ್ಸ್ ತಂಡಗಳ ಕೋಚ್ ಆಗಿ ಕೂಡಾ ಸಮರ್ಥವಾಗಿ ತಂಡವನ್ನು ಮುನ್ನಡೆಸಿದ್ದರು.

ಬಾಬ್ ವೋಲ್ಮರ್ ರಂತೆ ಆಗುವುದು ಬೇಡ

ಬಾಬ್ ವೂಲ್ಮರ್‌ ರಂತೆ ಆಗುವುದು ಬೇಡ, ಮಿಕ್ಕಿ ಅವರನ್ನು ದೇವರು ಕಾಪಾಡಲಿ

ಆಸ್ಟ್ರೇಲಿಯಾದಂತೆ ಪಾಕಿಸ್ತಾನ 13 ಪಂದ್ಯ ಗೆದ್ದರೆ

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಂತೆ ಪಾಕಿಸ್ತಾನ 13 ಪಂದ್ಯ ಗೆದ್ದರೆ ಹೇಗಿರುತ್ತೆ ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ

ಕೋಚಿಂಗ್ ಕೆಲ್ಸ ಮುಗಿದ ಮೇಲೆ ಮಿಕ್ಕಿ

ಕೋಚಿಂಗ್ ಕೆಲ್ಸ ಮುಗಿದ ಮೇಲೆ ಮಿಕ್ಕಿ ಏನು ಹೇಳಬಹುದು, ನಾನು ಬಲಿಪಶುವಾದೆ ಎನ್ನಬಹುದು.

ಇನ್ಜಿ ಆಯ್ಕೆದಾರ, ಮಿಕ್ಕಿ ಕೋಚ್ ಸೂಪರ್

ಇನ್ಜಿ ಆಯ್ಕೆದಾರ, ಮಿಕ್ಕಿ ಕೋಚ್ ಸೂಪರ್ ಎಂದ ಅಭಿಮಾನಿಗಳು

ಆಸೀಸ್ ತಂಡಕ್ಕೆ ಶಿಸ್ತು ಕಲಿಸಲು ಆಗಲಿಲ್ಲ

ಮಿಕ್ಕಿ ಅವರಿಂದ ಆಸೀಸ್ ತಂಡಕ್ಕೆ ಶಿಸ್ತು ಕಲಿಸಲು ಆಗಲಿಲ್ಲ ಇನ್ನು ಪಾಕಿಸ್ತಾನದ ಕಥೆ ಅಷ್ಟೆ

ಬೆಸ್ಟ್ ಅಫ್ ಲಕ್ ಸಂದೇಶಗಳು ಬರುತ್ತಿವೆ

ಮಿಕ್ಕಿ ಆರ್ಥರ್ ಅವರಿಗೆ ಬೆಸ್ಟ್ ಅಫ್ ಲಕ್ ಸಂದೇಶಗಳು ಬರುತ್ತಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
South Africa's Mickey Arthur was today (May 6) appointed as the Head Coach of Pakistan's national cricket team, the Pakistan Cricket Board (PCB) announced.
Please Wait while comments are loading...