ನೇಪಾಳದ ಲೆಗ್ ಸ್ಪಿನ್ನರ್ ಗೆ ನೆರವಾದ ಮೈಕಲ್ ಕ್ಲಾರ್ಕ್

Posted By:
Subscribe to Oneindia Kannada

ಬೆಂಗಳೂರು, ಸೆ. 06: ನೇಪಾಳದ ಯುವ ಲೆಗ್ ಸ್ಪಿನ್ನರ್ ಸಂದೀಪ್ ಲಮಿಚ್ಚಾನೆ ಅವರಿಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ನೆರವಾಗಿದ್ದಾರೆ.

ಹುಬ್ಲೋ ಜತೆ ಕೈಜೋಡಿಸಿದ ಕ್ಲಾರ್ಕ್, 16 ವರ್ಷದ ಸಂದೀಪ್ ಅವರನ್ನು ಮೈಕಲ್ ಕ್ಲಾರ್ಕ್ ಕ್ರಿಕೆಟ್ ಅಕಾಡೆಮಿಗೆ ಕರೆಸಿಕೊಂಡಿದ್ದಾರೆ. 2016-17ನೇ ಸೀಸನ್ ನಲ್ಲಿ ಅಸ್ಟ್ರೇಲಿಯಾದಲ್ಲಿ ಸಂದೀಪ್ ಗೆ ತರಬೇತಿ ಸಿಗಲಿದೆ ಎಂದು ಆಸ್ಟ್ರೇಲಿಯಾದ ಪ್ರಮುಖ ಕ್ರಿಕೆಟ್ ಕ್ಲಬ್ ಪ್ರಕಟಿಸಿದೆ.

Michael Clarke sponsors Nepal teenage cricketer to play in Australia

ವೆಸ್ಟರ್ನ್ ಸಬರ್ಬ್ ಡಿಸ್ಟ್ರಿಕ್ ಕ್ರಿಕೆಟ್ ಕ್ಲಬ್ ಫೇಸ್ ಬುಕ್ ನಲ್ಲಿ ಪ್ರಕಟಣೆಯಲ್ಲಿ ಸಂದೀಪ್ ಬಗ್ಗೆ ಹಾಡಿ ಹೊಗಳಲಾಗಿದೆ. ಸೆಪ್ಟೆಂಬರ್ 26ರಿಂದ ಕ್ಯಾಂಪ್ ಶುರುವಾಗಲಿದೆ. ಕ್ಲಾರ್ಕ್ ಅವರು ಸಂದೀಪ್ ಜತೆ ತರಬೇತಿಯಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ.

ಆಸ್ಟ್ರೇಲಿಯಾದ ದಿಗ್ಗಜ ಶೇನ್ ವಾರ್ನ್ ಅವರನ್ನು ಮಾನಸ ಗುರುವಾಗಿ ಸ್ವೀಕರಿಸಿರುವ ಸಂದೀಪ್ ಅವರು ಈ ವರ್ಷ ಅಂಡರ್ 19 ವಿಶ್ವಕಪ್ ನಲ್ಲಿ ಆಡಿದ್ದರು.


ನೇಪಾಳ ಪರ ಈ ಟೂರ್ನಿಯಲ್ಲಿ ಐರ್ಲೆಂಡ್ ವಿರುದ್ಧ ಹ್ಯಾಟ್ರಿಕ್ ಪಡೆದು ಪಂದ್ಯದಲ್ಲಿ 5/27, 10 ಓವರ್ ನಲ್ಲಿ ಪಡೆದಿದ್ದರು. ಲಿಸ್ಟ್ ಎ ಪಂದ್ಯಗಳನ್ನಾಡಿ 4 ವಿಕೆಟ್ ಗಳನ್ನು ಪಡೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Nepal's teenage leg-spinner Sandeep Lamichhane will travel to Australia after being sponsored by former captain Michael Clarke.
Please Wait while comments are loading...