ಕ್ಲಾರ್ಕ್ ಆಯ್ಕೆಯ ಬೆಸ್ಟ್ XIನಲ್ಲಿ ಸಚಿನ್ ಗೆ ಮಾತ್ರ ಸ್ಥಾನ!

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 18: ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅವರು ತಮ್ಮ 'ನೆಚ್ಚಿನ ಟೆಸ್ಟ್ XI' ತಂಡ ಬಗ್ಗೆ ತಮ್ಮ ಪುಸ್ತಕ 'ಮೈ ಸ್ಟೋರಿ' ಯಲ್ಲಿ ಬರೆದುಕೊಂಡಿದ್ದಾರೆ. ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ರನ್ನು ತಂಡದ ನಾಯಕರಾಗಿ ಆಯ್ಕೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ, ಭಾರತದಿಂದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಒಬ್ಬರನ್ನು ಮಾತ್ರ ಆಯ್ಕೆ ಮಾಡಿದ್ದಾರೆ.

ಮೈಕಲ್ ಕ್ಲಾರ್ಕ್ ಅವರ ಆಯ್ಕೆ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ತನ್ನ ವೆಬ್ ಸೈಟ್ ನಲ್ಲಿ ಮಂಗಳವಾರ(ಅಕ್ಟೋಬರ್ 18) ಬರೆದುಕೊಂಡಿದೆ. 115 ಟೆಸ್ಟ್ ಪಂದ್ಯಗಳನ್ನಾಡಿದ್ದ ಕ್ಲಾರ್ಕ್ ಅವರು ಸಚಿನ್ ತೆಂಡೂಲ್ಕರ್ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಇಳಿಸಲು ಬಯಸಿದ್ದಾರೆ.

ಕ್ಲಾರ್ಕ್ ಆಯ್ಕೆಯ 12 ಮಂದಿ ಸದಸ್ಯರಲ್ಲಿ 7 ಆಸ್ಟ್ರೇಲಿಯನ್ನರಿದ್ದರೆ, ಸ್ಪಿನ್ ಮಾಂತ್ರಿಕ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರನ್ನು 12ನೇ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.

ತೆಂಡೂಲ್ಕರ್ ಅವರನ್ನು ಹಿರಿಯ ಆಟಗಾರನಾಗಿ ಪಡೆಯಲು ಅದೃಷ್ಟ ಮಾಡಿರಬೇಕು. ಅವರ ತಾಂತ್ರಿಕ ನೈಪುಣ್ಯ ಎಲ್ಲರಿಗೂ ಅನುಕರಣೀಯ ಎಂದಿದ್ದಾರೆ. ಮೈಕಲ್ ಸ್ಲಾಟರ್ ಅವರನ್ನು ತಮ್ಮ ಬಾಲ್ಯದ ಹೀರೋ ಎಂದು ಕರೆದಿದ್ದಾರೆ. ಹೇಡನ್, ಸ್ಲಾಟರ್ ಹಾಗೂ ರಿಕಿ ಪಾಂಟಿಂಗ್ ಮೊದಲು ಮೂರು ಕ್ರಮಾಂಕದಲ್ಲಿ ಇಳಿದರೆ ಎಂಥಾ ಬೌಲಿಂಗ್ ಪಡೆಯನ್ನು ಬೇಕಾದರೂ ಧೂಳಿಪಟ ಮಾಡಬಲ್ಲರು ಎಂದು ಕ್ಲಾರ್ಕ್ ಹೇಳಿಕೊಂಡಿದ್ದಾರೆ.

Michael Clarke reveals his 'Best Test 12'; Shane Warne is captain

ಕ್ಲಾರ್ಕ್ ಆಯ್ಕೆಯ ಶ್ರೇಷ್ಠ ಟೆಸ್ಟ್ 12 ತಂಡ
1. ಮೈಕಲ್ ಸ್ಲಾಟರ್ (ಆಸ್ಟ್ರೇಲಿಯಾ)
2. ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ)
3. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
4. ಸಚಿನ್ ತೆಂಡೂಲ್ಕರ್ (ಭಾರತ)
5. ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)
6. ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ)
7. ಆಡಂ ಗಿಲ್ ಕ್ರಿಸ್ಟ್ (ಆಸ್ಟ್ರೇಲಿಯಾ, ವಿಕೆಟ್ ಕೀಪರ್)
8. ಮಿಚೆಲ್ ಜಾನ್ಸನ್ (ಆಸ್ಟ್ರೇಲಿಯಾ)
9. ಶೇನ್ ವಾರ್ನ್ (ನಾಯಕ, ಆಸ್ಟ್ರೇಲಿಯಾ)
10. ಡೇಲ್ ಸ್ಟೇನ್ (ದಕ್ಷಿಣ ಆಫ್ರಿಕಾ)
11. ಗ್ಲೆನ್ ಮೆಗ್ರಾ (ಆಸ್ಟ್ರೇಲಿಯಾ)
12. ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ)

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Australian captain Michael Clarke has chosen his "Best Test 12" in his autobiography "My Story". He has picked spin legend Shane Warne as the captain while there is one Indian.
Please Wait while comments are loading...