ಹರಾರೆ: ಟೀ ಇಂಡಿಯಾ ಸದಸ್ಯರೊಬ್ಬರಿಂದ ಅತ್ಯಾಚಾರ ಆರೋಪ

Posted By:
Subscribe to Oneindia Kannada

ಹರಾರೆ, ಜೂನ್ 19: ಜಿಂಬಾಬ್ವೆ ಪ್ತವಾಸದಲ್ಲಿರುವ ಟೀಂ ಇಂಡಿಯಾದ ಸದಸ್ಯರೊಬ್ಬರ ಮೇಲೆ ಅತ್ಯಾಚಾರ ಎಸೆಗಿದ ಆರೋಪ ಕೇಳಿ ಬಂದಿದ್ದು, ಆರೋಪಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ ಘಟನೆ ತಡವಾಗಿ ವರದಿಯಾಗಿದೆ. ಆದರೆ, ಬಂಧಿತ ವ್ಯಕ್ತಿ ಕ್ರಿಕೆಟ್ ಆಟಗಾರನಲ್ಲ ಎಂದು ಭಾನುವಾರ ಸ್ಪಷ್ಟನೆ ಸಿಕ್ಕಿದೆ.

ಇದಕ್ಕೂ ಮುನ್ನ ಏಕದಿನ ಸರಣಿ ಗೆದ್ದ ಬಳಿಕ ಭಾರತೀಯ ತಂಡ ಆಟಗಾರನೊಬ್ಬ ಜಿಂಬಾಬ್ವೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಬಂಧಿತ ವ್ಯಕ್ತಿ ಆಟಗಾರನಲ್ಲ, ಪ್ರಾಯೋಜಕತ್ವ ಪಡೆದಿರುವ ಸಂಸ್ಥೆಯ ಸದಸ್ಯ ಎಂದು ತಿಳಿದು ಬಂದಿದೆ.

Member of Indian cricket contingent in Zimbabwe arrested on alleged rape charges: Reports

ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಬಳಿಕ ಟೀಂ ಇಂಡಿಯಾದ ಸದಸ್ಯರು, ಸಹಾಯಕ ಸಿಬ್ಬಂದಿಗಳು ಎಲ್ಲರೂ ಒಟ್ಟಿಗೆ ರಾತ್ರಿವೇಳೆ ಪಾರ್ಟಿ ಮಾಡಿದ್ದಾರೆ.

ಈ ವೇಳೆ ಆರೋಪಿಯು ಯುವತಿಯೊಬ್ಬಳನ್ನು ಡ್ರಿಂಕ್ಸ್ ಮಾಡುವಂತೆ ಬಲವಂತ ಮಾಡಿದ್ದಲ್ಲದೆ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಹಾಯಕ ಆಯುಕ್ತೆ ಚೆರಿಟಿ ಚರಂಬಾ, ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಆದರೆ, ಈ ಪ್ರಕರಣ ಎರಡು ದೇಶಗಳ ನಡುವಿನ ಸಂಬಂಧದ ಮೇಲೆ ತೀವ್ರ ಪರಿಣಾಮ ಬೀರುವ ಉದ್ದೇಶದಿಂದ ಆರೋಪಿಯ ಹೆಸರನ್ನು ಈವರೆಗೂ ಗೌಪ್ಯವಾಗಿ ಇಡಲಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ಪ್ರಕರಣದ ಕುರಿತು ಆತನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು ತೀರ್ಪಿಗಾಗಿ ಕಾಯಲಾಗಿದೆ. ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A massive controversy hits Indian cricket team on Zimbabwe tour after a member of the team's contingent was arrested on Friday for allegedly harrassing a local woman, a local news website reported.
Please Wait while comments are loading...