ಎಬಿ ಡಿವಿಲಿಯರ್ಸ್ ದಾಖಲೆ ಧ್ವಂಸಗೊಳಿಸಿದ ಕೊಹ್ಲಿ

Posted By:
Subscribe to Oneindia Kannada

ಮೆಲ್ಬೋರ್ನ್, ಜ. 17: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರು ಹೊಸ ದಾಖಲೆ ಬರೆದಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿ ವಿಲಿಯರ್ಸ್ ಅವರ ದಾಖಲೆಯನ್ನು ಮುರಿದಿದ್ದಾರೆ. ತ್ವರಿತ ಗತಿಯಲ್ಲಿ 7,000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

ಮೆಲ್ಬೋರ್ನ್ ಪಂದ್ಯದ ಸ್ಕೋರ್ ಕಾರ್ಡ್ | ವೇಳಾಪಟ್ಟಿ | ಫೋಟೊ ಗ್ಯಾಲರಿ

166 ಇನ್ನಿಂಗ್ಸ್ ನಲ್ಲಿ ಡಿ ವಿಲಿಯರ್ಸ್ ಅವರು 7,000ರನ್ ಗಳಿಸಿದ್ದರು. ಸರಣಿ ಆರಂಭದ ಹೊತ್ತಿಗೆ ಕೊಹ್ಲಿ ಅವರು 158 ಇನ್ನಿಂಗ್ಸ್ (166 ಪಂದ್ಯಗಳು)ನಲ್ಲಿ 6,831 ರನ್ ಗಳಿಸಿದ್ದರು. ಎಬಿಡಿ ದಾಖಲೆ ಮುರಿಯಲು 27 ವರ್ಷ ವಯಸ್ಸಿನ ವಿರಾಟ್ ಕೊಹ್ಲಿಗೆ 169ರನ್ ಗಳ ಅಗತ್ಯವಿತ್ತು.

Virat Kohli breaks AB de Villiers' record

ವಿಶೇಷವೆಂದರೆ ದಕ್ಷಿಣ ಆಫ್ರಿಕಾದ ಬಲಗೈ ಬ್ಯಾಟ್ಸ್ ಮನ್ ಎಬಿಡಿ ಅವರು ಕೂಡಾ ಈ ದಾಖಲೆಯನ್ನು ಆಸ್ಟ್ರೇಲಿಯಾ ವಿರುದ್ಧ 2014 ರ ನವೆಂಬರ್ ನಲ್ಲಿ ಪರ್ತ್ ನಲ್ಲಿ ಸಾಧಿಸಿದ್ದರು. ಈಗ ಕೊಹ್ಲಿ ಕೂಡಾ ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾ ನೆಲ(ಎಂಸಿಜಿ)ದಲ್ಲೇ ಈ ಸಾಧನೆ ಭಾನುವಾರ (ಜನವರಿ 17) ಮಾಡಿದ್ದಾರೆ. 169ನೇ ಪಂದ್ಯ 161ನೇ ಇನ್ನಿಂಗ್ಸ್ ನಲ್ಲಿ ವೈಯಕ್ತಿಕ 7,000ರನ್ ಗಳಿಸಿ ವಿಶ್ವದಲ್ಲೇ ಅತ್ಯಂತ ತ್ವರಿತವಾಗಿ ಈ ಗುರಿ ಮುಟ್ಟಿದ ಆಟಗಾರ ಎನಿಸಿಕೊಂಡಿದ್ದಾರೆ.

ಮೆಲ್ಬೋರ್ನ್ ಪಂದ್ಯಕ್ಕೂ ಮುನ್ನ ಕೊಹ್ಲಿಗೆ ದಾಖಲೆ ಮುರಿಯಲು 19ರನ್ ಮಾತ್ರ ಬೇಕಿತ್ತು. ರೋಹಿತ್ ಶರ್ಮ ವಿಕೆಟ್ ಬಿದ್ದ ನಂತರ ಕಣಕ್ಕಿಳಿದ ಕೊಹ್ಲಿ ಉತ್ತಮ ಆಟ ಮುಂದುವರೆಸಿ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ. ಪಂದ್ಯದ 10ನೇ ಓವರ್ ನಲ್ಲಿ ಜೇಮ್ಸ್ ಫಾಲ್ಕ್ನರ್ ಬೌಲಿಂಗ್ ನಲ್ಲಿ ಬೌಂಡರಿ ಬಾರಿಸಿ ಈ ದಾಖಲೆ ಮುರಿದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's star batsman and vice-captain Virat Kohli scaled another high in his international career as he broke South African AB de Villiers' batting record during the 3rd One Day International against Australia here today.
Please Wait while comments are loading...