ಮಾತು ಉಳಿಸಿಕೊಂಡ ಬಿಗ್ ಬಿ, ಆಫರ್ ರಿಜೆಕ್ಟ್ ಮಾಡಿದ ಗೇಲ್!

Posted By:
Subscribe to Oneindia Kannada

ಮುಂಬೈ, ಮಾರ್ಚ್ 29: ಬಾಲಿವುಡ್ ನ ದಿಗ್ಗಜ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಆತಿಥ್ಯವನ್ನು ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ಸೋಮವಾರ ಪಡೆದುಕೊಂಡಿದ್ದಾರೆ. ಈ ಮೂಲಕ ಗೇಲ್ ಗೆ ನೀಡಿದ್ದ ಮಾತನ್ನು ಬಿಗ್ ಬಿ ಉಳಿಸಿಕೊಂಡಿದ್ದಾರೆ. ಆದರೆ, ವಿಶ್ವ ಟಿ20 ಸೆಮೀಸ್ ಗೂ ಮುನ್ನ ಅಮಿತಾಬ್ ನೀಡಿದ ಆಫರ್ ಅನ್ನು ಗೇಲ್ ರಿಜೆಕ್ಟ್ ಮಾಡಿದ್ದಾರೆ.

ಟೀಂ ಇಂಡಿಯಾ ವಿರುದ್ಧ ಗುರುವಾರ ವಾಂಖೆಡೆ ಸ್ಟೇಡಿಯಂನಲ್ಲಿ ಸೆಮಿಫೈನಲ್ ಪಂದ್ಯವಾಡಲಿರುವ ವೆಸ್ಟ್ ಇಂಡೀಸ್ ತಂಡದ ಆಟಗಾರರು ಮುಂಬೈಗೆ ಬಂದಿಳಿದ್ದಾರೆ.

Mega Star Amitabh Bachchan as Host West Indies opener Chris Gayle as Guest

ಜಮೈಕಾದ ಕ್ರಿಸ್ ಗೇಲ್ ಅವರು ಮನೆಗೆ ಬಂದು ಆತಿಥ್ಯ ಸ್ವೀಕರಿಸಿದ ನಂತರ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಬಿಗ್ ಬಿ ಸಂತಸ ವ್ಯಕ್ತಪಡಿಸಿದ್ದಾರೆ. ಆತಿಥ್ಯ ಸ್ವೀಕರಿಸಿದ ಗೇಲ್ ಅವರು ಬೇಕಾದರೆ ಸೆಂಚುರಿ ಬಾರಿಸಲಿ ಆದರೆ, ಭಾರತ ಮಾತ್ರ ಗೆಲ್ಲಲಿ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಗೇಲ್, ನಿಮ್ಮ ಆತಿಥ್ಯಕ್ಕೆ ನಾನು ಋಣಿಯಾಗಿದ್ದೇನೆ. ನೀವು ಉಡುಗೊರೆ ರೂಪದಲ್ಲಿ ನೀಡಿರುವ ಪುಸ್ತಕಗಳು ಇಷ್ಟವಾಗಿದೆ. ನಾನು ಶತಕ ಬಾರಿಸುವುದಕ್ಕಿಂತ ಗೆಲುವು ಸಾಧಿಸಲು ಬಯಸಿದ್ದೇನೆ ಎಂದಿದ್ದಾರೆ.


ನೀವು ನೀಡಿದ ವೈನ್, ಆಹಾರ, ನಿಮ್ಮ ಆತಿಥ್ಯ ಸಂತೋಷವಾಗಿದೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mega Star Amitabh Bachchan on Monday(March 28) played host to West Indies opener Chris Gayle at his residence in Mumbai.
Please Wait while comments are loading...