ಎಂಸಿಎಲ್ ಆರಂಭ: ಪಂದ್ಯಗಳನ್ನು ಎಲ್ಲಿ ನೋಡ್ಬಹುದು?

Posted By:
Subscribe to Oneindia Kannada

ದುಬೈ, ಜ.27: ಕ್ರಿಕೆಟ್ ಲೋಕದ ಮಾಜಿ ಆಟಗಾರರ ಟ್ವೆಂಟಿ 20 ಟೂರ್ನಮೆಂಟ್ ಮಾಸ್ಟರ್ ಚಾಂಪಿಯನ್ಸ್ ಲೀಗ್ (ಎಂಸಿಎಲ್) ದುಬೈನಲ್ಲಿ ಜನವರಿ 28 ರಿಂದ ಫೆಬ್ರವರಿ 13, 2016ರ ತನಕ ನಡೆಯಲಿದೆ.ಈ ಪಂದ್ಯಗಳನ್ನು ಎಲ್ಲೆಲ್ಲಿ ನೋಡಬಹುದು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಭಾರತ, ಶ್ರೀಲಂಕಾ, ನೇಪಾಳ, ಭೂತನ್, ಅಫ್ಘಾನಿಸ್ತಾನ ಹಾಗೂ ಮಾಲ್ಡೀವ್ಸ್ ದೇಶಗಳ ಅಭಿಮಾನಿಗಳು ಎಲ್ಲಾ ಪಂದ್ಯಗಳನ್ನು ಸೋನಿ ಸಿಕ್ಸ್ ನಲ್ಲಿ ನೋಡಬಹುದು. ಮೊದಲ ಪಂದ್ಯದಲ್ಲಿ ಲಿಬ್ರಾ ಲೆಜೆಂಡ್ಸ್ ನಾಯಕ ಸೌರವ್ ಗಂಗೂಲಿ ಆಡುತ್ತಿಲ್ಲ ಎಂಬ ಸುದ್ದಿ ಇದೀಗ ಬಂದಿದೆ. [ಎಂಸಿಎಲ್ 2016ರ ಸಂಪೂರ್ಣ ವೇಳಾಪಟ್ಟಿ]

Full list of broadcasters and commentators

ಬ್ರಿಯಾನ್ ಲಾರಾ, ಸೌರವ್ ಗಂಗೂಲ್, ವೀರೇಂದ್ರ ಸೆಹ್ವಾಗ್, ಜಾಕ್ ಕಾಲಿಸ್, ಆಡಂ ಗಿಲ್ ಕ್ರಿಸ್ಟ್, ಬ್ರೆಟ್ ಲೀ ಸೇರಿದಂತೆ ಅನೇಕ ದಿಗ್ಗಜರು ಮತ್ತೊಮ್ಮೆ ತಮ್ಮ ಪ್ರತಿಭೆ ತೋರಿಸಲಿದ್ದಾರೆ.

ಮಾಜಿ ಆಟಗಾರರ ಈ ಟೂರ್ನಿಗೆ ಟೀಂ ಇಂಡಿಯಾದ ಏಕದಿನ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಅವರು ರಾಯಭಾರಿಯಾಗಿರುವುದು ವಿಶೇಷ. ದುಬೈ ಹಾಗೂ ಶಾರ್ಜಾದಲ್ಲಿ ಪಂದ್ಯಗಳು ನಡೆಯಲಿದ್ದು, ಫೆಬ್ರವರಿ 13ರಂದು ಫೈನಲ್ ನಡೆಯಲಿದೆ.

* ಪಾಕಿಸ್ತಾನದಲ್ಲಿ ಪಿಟಿವಿ ಹಾಗೂ ಜಿಯೋ ಸೂಪರ್
* ಆಫ್ರಿಕಾದಲ್ಲಿ ಸೂಪರ್ ಸ್ಫೋರ್ಟ್ಸ್
* ಮಧ್ಯಪ್ರಾಚ್ಯದಲ್ಲಿ ಟೆನ್
* ಕೆರಿಬಿಯನ್ ರಾಷ್ಟ್ರಗಳಲ್ಲಿ ಸ್ಫೋರ್ಟ್ಸ್ ಮ್ಯಾಕ್ಸ್ ನಲ್ಲಿ ಪಂದ್ಯಗಳ ನೇರ ಪ್ರಸಾರವಿರುತ್ತದೆ.

ಕಾಮೆಂಟೆಂಟರ್ಸ್:
ಅಮೀರ್ ಸೊಹೈಲ್, ಡ್ಯಾನಿ ಮ್ಯಾರಿಸನ್, ಮಾರ್ಕ್ ಬುಚ್ಚರ್, ಮಾರ್ಕ್ ಹೋವರ್ಡ್, ಇಶಾ ಗುಹಾ,

ಅಧಿಕೃತ ಹ್ಯಾಶ್ ಟ್ಯಾಗ್ : #MCL2020 #TheMastersAreBack

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Some of the legends of the game will be back in action in the Masters Champions League (MCL) Twenty20 tournament starting from tomorrow (January 28) in the United Arab Emirates (UAE).
Please Wait while comments are loading...