ಎಂಸಿಎಲ್ : ಲಿಬ್ರಾ ಲೆಜೆಂಡ್ಸ್ ತಂಡಕ್ಕೆ ಗಂಗೂಲಿ ನಾಯಕ

Posted By:
Subscribe to Oneindia Kannada

ಕೋಲ್ಕತ್ತಾ, ಜ. 13: ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ ಅವರನ್ನು ಮಾಸ್ಟರ್ ಚಾಂಪಿಯನ್ಸ್ ಲೀಗ್ (ಎಂಸಿಎಲ್) ನ ಲಿಬ್ರಾ ಲೆಜೆಂಡ್ಸ್ ತಂಡದ ನಾಯಕ ಹಾಗೂ ರಾಯಭಾರಿಯಾಗಿ ನೇಮಿಸಲಾಗಿದೆ. ದುಬೈನಲ್ಲಿ ಜನವರಿ 28 ರಿಂದ ಫೆಬ್ರವರಿ 13ರ ತನಕ ಟೂರ್ನಿ ನಡೆಯಲಿದೆ.

ಗಂಗೂಲಿ ನಾಯಕತ್ವದ ಲಿಬ್ರಾ ಲೆಜೆಂಡ್ಸ್ ತಂಡದಲ್ಲಿ ದಕ್ಷಿಣ ಆಫ್ರಿಕಾದ ದಿಗ್ಗಜ ಜಾಕ್ ಕಾಲಿಸ್, ಎಡಗೈ ಸ್ಪಿನ್ನರ್ ನಿಕಿ ಬೋಯೆ, ಇಂಗ್ಲೆಂಡಿನ ಸ್ಪಿನ್ನರ್ ಗ್ರಹಾಂ ಸ್ವಾನ್, ಆಸ್ಟ್ರೇಲಿಯಾದ ವೇಗಿ ಶಾನ್ ಟೈಟ್, ಸ್ಪಿನ್ನರ್ ಬ್ರಾಡ್ ಹಾಗ್, ನೆದರ್ಲೆಂಡ್ ನ ಆಲ್ ರೌಂಡರ್ ರಿಯಾನ್ ಟೆನ್ ಡೆಶ್ಕಾಟ್ ಮುಂತಾದವರಿದ್ದಾರೆ. [ಎಂಸಿಎಲ್ : ಲಿಬ್ರಾ ತಂಡದಲ್ಲಿ ಗಂಗೂಲಿ ಹಾಗೂ ಕಾಲಿಸ್]

Masters Champions League (MCL)

ಕಾಲಿಸ್, ಸ್ವಾನ್ ಇರುವ ತಂಡವನ್ನು ಮುನ್ನಡೆಸುವುದು ನನಗೆ ಚಾಲೆಂಜಿಂಗ್ ಆಗಿರುತ್ತದೆ. ಒಳ್ಳೆ ತಂಡ ಒಳ್ಳೆ ಪ್ರದರ್ಶನದ ನಿರೀಕ್ಷೆಯಿದೆ ಎಂದು ಗಂಗೂಲಿ ಅವರು ಪ್ರತಿಕ್ರಿಸಿದ್ದಾರೆ. [ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ ಟಿ 20 ಫುಲ್ ಗೈಡ್]

ಎಂಸಿಎಲ್ ನಲ್ಲಿ ಕ್ರಿಕೆಟ್ ಜಗತ್ತಿನ ಮಾಜಿ ಆಟಗಾರರು ಟ್ವಿ20 ಮಾದರಿಯ ಆಟವಾಡಲಿದ್ದು, 250 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಎಂಸಿಎಲ್ ನಲ್ಲಿ ಆರು ಫ್ರಾಂಚೈಸಿಗಳಿವೆ. ಲಿಬ್ರಾ ಲೆಜೆಂಡ್ಸ್ ತಂಡಕ್ಕೆ ಭಾರತದ ಮಾಜಿ ವೇಗಿ ಅಬೇ ಕುರುವಿಲ್ಲಾ ಕೋಚ್ ಆಗಿದ್ದಾರೆ,

ಲಿಬ್ರಾ ಲೆಜೆಂಡ್ಸ್ ತಂಡ:
ಸೌರವ್ ಗಂಗೂಲಿ ಹಾಗೂ ಅಜಯ್ ರಾತ್ರಾ (ಇಬ್ಬರು ಭಾರತ),
ಜಾಕ್ ಕಾಲಿಸ್ ಹಾಗೂ ನಿಕಿ ಬೋಯೆ (ದಕ್ಷಿಣ ಆಫ್ರಿಕಾ)
ಗ್ರಹಾಂ ಸ್ವಾನ್, ರಿಯಾನ್ ಸೈಡ್ ಬಾಟಮ್, ಮೈಕಲ್ ಲಂಬ್ (ಇಂಗ್ಲೆಂಡ್)
ಶಾನ್ ಟೈಟ್, ಬ್ರಾಡ್ ಹಾಗ್ ಹಾಗೂ ಮಾರ್ಕಸ್ ನಾರ್ಥ್ (ಆಸ್ಟ್ರೇಲಿಯಾ)
ಇಯಾನ್ ಬಟ್ಲರ್ (ನ್ಯೂಜಿಲೆಂಡ್)
ಸೀನ್ ಇರ್ವೈನ್ (ಜಿಂಬಾಬ್ವೆ)
ತೌಫೀಕ್ ಉಮರ್ (ಪಾಕಿಸ್ತಾನ)
ರಿಅಯನ್ ಟೆನ್ ಡೊಶ್ಕೆಟ್ (ನೆದರ್ಲೆಂಡ್)
(ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former India captain Sourav Ganguly was today named captain and ambassador of Libra Legends in the upcoming Masters Champions League (MCL) to be played in Dubai and Sharjah from January 28 to February 13.
Please Wait while comments are loading...