ಕೊಹ್ಲಿ ಬೆಂಬಲಕ್ಕೆ ಬಂದ ಮ್ಯಾಥ್ಯೂ ಹೇಡನ್

Posted By:
Subscribe to Oneindia Kannada

ಸಿಡ್ನಿ, ಮಾರ್ಚ್ 13: ಹಾಲಿ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡದ ಆಟಗಾರರನ್ನು ಪಂದ್ಯದ ವೇಳೆ ಕಿಚಾಯಿಸುವ ಮೂಲಕ ಅವರಿಗೆ ಮಾನಸಿಕ ಕಿರುಕುಳ (ಸ್ಲೆಡ್ಜಿಂಗ್) ನೀಡುತ್ತಿದ್ದಾರೆಂಬ ಆರೋಪ ಎದುರಿಸುತ್ತಿರುವ ವಿರಾಟ್ ಕೊಹ್ಲಿ ಬೆಂಬಲಕ್ಕೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಬಂದಿದ್ದಾರೆ.

ಸ್ಲೆಡ್ಜಿಂಗ್ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಭಾರತ ಹಾಗೂ ಆಸ್ಟ್ರೇಲಿಯಾದ ಹಾಲಿ ಹಾಗೂ ಮಾಜಿ ಕ್ರಿಕೆಟಿಗರ ನಡುವೆ ವಾಗ್ಯುದ್ಧವನ್ನೇ ಹುಟ್ಟುಹಾಕಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳನ್ನೂ ಹುಟ್ಟುಹಾಕಿದೆ.

Mathew Hayden supports Virat Kohli in sledging alligations against him

ಇದೇ ಹಿನ್ನೆಲೆಯಲ್ಲಿ, ಇತ್ತೀಚೆಗೆ ಕೊಹ್ಲಿ ಕಡೆಗೆ ತಮ್ಮದೂ ಒಂದು ಕಲ್ಲು ಬೀಸಿದ್ದ ಆಸ್ಟ್ರೇಲಿಯಾದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಇಯಾನ್ ಹೀಲಿ ಅವರು, ''ನಿರಂತರ ಸ್ಲೆಡ್ಜಿಂಗ್ ನಿಂದಾಗಿ ವಿರಾಟ್ ಕೊಹ್ಲಿಯವರು ತಮ್ಮ ಗೌರವವನ್ನು ಕಳೆದುಕೊಳ್ಳುತ್ತಿದ್ದಾರೆ'' ಎಂಬ ಅನಿಸಿಕೆ ವ್ಯಕ್ತಪಡಿಸಿದ್ದರು.

ಇದಕ್ಕೆ ಉತ್ತರ ನೀಡಿದ್ದ ಕೊಹ್ಲಿ, ಹೀಲಿ ಅವರು ವೃತ್ತಿಜೀವನದಲ್ಲಿ ನಿರತರಾಗಿದ್ದಾಗ ಅವರೂ ಒಮ್ಮೆ ಸಹ ಆಟಗಾರನ ವಿರುದ್ಧ ಸಿಡಿದೆದ್ದಿದ್ದನ್ನು ಸ್ಮರಿಸಿ, ಟಾಂಗ್ ನೀಡಿದ್ದರು. ಇದು ಮತ್ತೊಂದು ಸುತ್ತಿನ ಚರ್ಚೆಗೆ ನಾಂದಿ ಹಾಡಿತು.

ಇದೀಗ, ಕೊಹ್ಲಿ ಬೆಂಬಲಕ್ಕೆ ಮ್ಯಾಥ್ಯೂ ಹೇಡನ್ ಬಂದಿದ್ದಾರೆ. ವಿರಾಟ್ ಒಬ್ಬ ಉತ್ತಮ ಆಟಗಾರ. ಯಾವುದೇ ಕಾರಣಕ್ಕೂ ಅವರು ಪಂದ್ಯಗಳಲ್ಲಿ ನಿಯಮವನ್ನು ಮೀರುವುದಿಲ್ಲ. ಆದರೆ, ಮೈದಾನದಲ್ಲಿ ಎದುರಾಳಿ ತಂಡದ ಆಟಗಾರರು ಹೇಗೆ ನಡೆದುಕೊಳ್ಳುತ್ತಾರೋ ಅದರ ಮೇಲೆ ವಿರಾಟ್ ಅವರಂಥ ಆಟಗಾರರ ವರ್ತನೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Australia's former Australian wicketkeeper-batsman Mathew Hayden supports Indian Test cricket team captain Virat Kohli, in on-going sledging by Australia players.
Please Wait while comments are loading...