ಭಾರತಕ್ಕೆ ರೋಚಕ ಜಯ, ಟಿ-20 ಸರಣಿ ಗೆದ್ದ ಟೀಂ ಇಂಡಿಯಾ

Posted By:
Subscribe to Oneindia Kannada

ಹರಾರೆ, ಜೂನ್ 22: ಅತಿಥೇಯ ಜಿಂಬಾಬ್ವೆ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಿಂದ ಗೆದ್ದುಕೊಂಡಿದೆ. ಸರಣಿಯ ಅಂತಿಮ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 3 ರನ್ ಗಳ ಅಂತರದ ಜಯ ದಾಖಲಿಸಿದೆ.

ಗೆಲ್ಲಲು ಬೇಕಾದ 139 ರನ್ ಬೆನ್ನು ಹತ್ತಿದ ಜಿಂಬಾಬ್ವೆ ಉತ್ತಮ ಆಟವನ್ನೆ ಪ್ರದರ್ಶನ ಮಾಡಿತ್ತು. ಕೊನೆ ಓವರ್ ನಲ್ಲಿ ಜಿಂಬಾಬ್ವೆಗೆ ಗೆಲ್ಲಲು 21 ರನ್ ಬೇಕಿತ್ತು.

ಚಿಗುಂಬುರಾ 3 ಎಸೆತಗಳಲ್ಲಿ 9 ರನ್ ತನಕ ತಂದರು. ಆದರೆ ಯಾರ್ಕ್ ಗಳ ಮೂಲಕ ಬರೀಂದರ್ ನಿಯಂತ್ರಿಸಿದರು. ಕೊನೆ ಎಸೆತದಲ್ಲಿ 4 ರನ್ ಬೇಕಿತ್ತು. ಆದರೆ, ಯಜುವೇಂದರ್ ಗೆ ಕ್ಯಾಚಿತ್ತು ಚಿಗುಂಬುರಾ ಔಟಾಗುವ ಮೂಲಕ ಜಿಂಬಾಬ್ವೆ ಸೋಲಿಗೆ ಕಾರಣರಾದರು.

ಮೂರನೇ ಹಾಗೂ ಅಂತಿಮ ಟ್ವೆಂಟಿ20 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 138/6 ಸ್ಕೋರ್ ಮಾಡಿತ್ತು.

ಪಂದ್ಯದ ಸ್ಕೋರ್ ಕಾರ್ಡ್

ಇದೇ ಮೊದಲ ಬಾರಿಗೆ ಸರಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕರೂ ಹೆಚ್ಚಿನ ಮೊತ್ತ ಕಲೆ ಹಾಕಲು ಸಾಧ್ಯವಾಗಲಿಲ್ಲ. ಕೆಎಲ್ ರಾಹುಲ್ 22, ಅಂಬಟಿ ರಾಯುಡು 20, ಕೇದಾರ್ ಜಾಧವ್ 58ರನ್ ಗಳಿಸಿದರು. ಅಕ್ಷರ್ ಪಟೇಲ್ 11ಎಸೆತಗಳಲ್ಲಿ 20ರನ್ ಗಳಿಸಿ ರನ್ ಗತಿ ಹೆಚ್ಚಿಸಿದ್ದರು. ತಿರಿಪಾನೋ 20 ರನ್ನಿತ್ತು 3 ವಿಕೆಟ್ ಪಡೆದರೆ, ಮಡ್ಜಿವಾ, ನಾಯಕ ಕ್ರೆಮರ್ ತಲಾ 1 ವಿಕೆಟ್ ಗಳಿಸಿದರು.

 3rd T20I: India lose 3 wickets in quick succession, Zimbabwe on top

ಮೊದಲ ಪಂದ್ಯವನ್ನು ಎರಡು ರನ್ ಗಳಿಂದ ಕಳೆದುಕೊಂಡ ಟೀಂ ಇಂಡಿಯಾ, ಎರಡನೇ ಪಂದ್ಯವನ್ನು 10 ವಿಕೆಟ್ ಗಳಿಂದ ಸುಲಭವಾಗಿ ಗೆದ್ದುಕೊಂಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Zimbabwe skipper Greame Cremer won the toss and invited India to bat first in the 3rd and final T20 match here at Harare Sports Club on Wednesday (June 22).
Please Wait while comments are loading...