2ನೇ ಟಿ20: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಸುಲಭ ಜಯ

Posted By:
Subscribe to Oneindia Kannada

ಹರಾರೆ, ಜೂನ್ 20: ಅತಿಥೇಯ ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯವನ್ನು 2 ರನ್ ಗಳಿಂದ ಕಳೆದುಕೊಂಡ ಟೀಂ ಇಂಡಿಯಾ ಎರಡನೇ ಟಿ20ಯಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಸ್ರಾನ್ ಹಾಗೂ ಬೂಮ್ರಾ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ಜಿಂಬಾಬ್ವೆ 99ರನ್ ಗಳಿಗೆ ಕುಸಿಯಿತು. ಈ ಅಲ್ಪಮೊತ್ತವನ್ನು ಟೀಂ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ ಸುಲಭವಾಗಿ 13.1 ಓವರ್ ಗಳಲ್ಲಿ ಸಾಧಿಸಿ ಸರಣಿಯನ್ನು 1-1 ಸಮಗೊಳಿಸಿದೆ

ಪಂದ್ಯದ ಸ್ಕೋರ್ ಕಾರ್ಡ್


ಟೀಂ ಇಂಡಿಯಾ ಚೇಸ್: ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ಕೆಎಲ್ ರಾಹುಲ್ 40 ಎಸೆತಗಳಲ್ಲಿ 47 ರನ್(2x4,2x6) ಗಳಿಸಿದರೆ, ಮನ್ದೀಪ್ ಸಿಂಗ್ 40 ಎಸೆತಗಳಲ್ಲಿ 50 ರನ್ (6x4,1x6) ಗಳಿಸಿ 13.1 ಓವರ್ ಗಳಲ್ಲಿ 103 ರನ್ ಗಳಿಸಿ ಜಯ ತಂದಿತ್ತರು.

ಚೊಚ್ಚಲ ಟಿ20 ಪಂದ್ಯವಾಡಿದ ಎಡಗೈ ವೇಗಿ ಬರಿಂದರ್ ಸ್ರಾನ್ (10 ಕ್ಕೆ 4) ಮತ್ತು ಜಸ್ಪ್ರೀತ್ ಬೂಮ್ರಾ (11 ಕ್ಕೆ 3) ಬೌಲಿಂಗ್ ದಾಳಿಯ ನೆರವಿನಿಂದ ಜಿಂಬಾಬ್ವೆ ತಂದ 20 ಓವರ್ ಗಳಲ್ಲಿ ವಿಕೆಟ್ ಕಳೆದುಕೊಂಡು 99 ರನ್ ಮಾತ್ರ ಗಳಿಸಿದೆ.[ಟೀಂ ಇಂಡಿಯಾ ಸದಸ್ಯರೊಬ್ಬರಿಂದ ಅತ್ಯಾಚಾರ ಆರೋಪ]

2nd T20I: Zimbabwe win toss, opt to bat first against India

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ, 28 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಪೀಟರ್ ಮೂರ್ (31) ಮತ್ತು ಮಾಲ್ಕಮ್ ವಾಲರ್ (14) ಉತ್ತಮ ಪ್ರದರ್ಶನದ ನಡುವೆಯೂ ಬ್ಯಾಟಿಂಗ್ ವೈಫಲ್ಯ ಕಂಡಿತು. ಬೂಮ್ರಾ ತ್ವರಿತಗತಿಯಲ್ಲಿ 3 ವಿಕೆಟ್ ಪಡೆದು ಜಿಂಬಾಬ್ವೆ ನಿಯಂತ್ರಿಸಿದರು.

ಮೊದಲ ಪಂದ್ಯದಲ್ಲಿ 171ರನ್ ಚೇಸ್ ಮಾಡಿದ ಟೀಂ ಇಂಡಿಯಾ 168ರನ್ ಮಾತ್ರ ಗಳಿಸಿ ಸೊಲೊಪ್ಪಿಕೊಂಡಿತ್ತು. ಮನೀಶ್ ಪಾಂಡೆ 48 ಹಾಗೂ ಮನ್ದೀಪ್ ಸಿಂಗ್ 31ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ವೇಗಿಗಳಾದ ಬರೀಂದರ್ ಸ್ರಾನ್ ಹಾಗೂ ಧವಳ್ ಕುಲಕರ್ಣಿ ಗೆ ಚೊಚ್ಚಲ ಪಂದ್ಯವಾಡುವ ಅವಕಾಶ ಲಭಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Zimbabwe skipper Greame Cremer won the toss in the second T20 International match at the Harare Sports Club here on Monday (June 20), and decided to bat first.Sran, Bumrah fire as India come back strongly; Zimbabwe post 99/9
Please Wait while comments are loading...