ದಾಖಲೆ ಪುಟ ಸೇರಿದ ಗಪ್ಟಿಲ್ ಅಬ್ಬರದ ಅರ್ಧಶತಕ

Posted By:
Subscribe to Oneindia Kannada

ಕ್ರೈಸ್ಟ್‌ಚರ್ಚ್, ಡಿ. 29: ನ್ಯೂಜಿಲೆಂಡ್ ನ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಕಿವೀಸ್ ಸುಲಭವಾಗಿ ಗೆದ್ದುಕೊಂಡಿದೆ. 30 ಎಸೆತಗಳಲ್ಲಿ 93 ರನ್ ಸಿಡಿಸುವ ಮೂಲಕ ಕಿವೀಸ್ ಪರ ತ್ವರಿತ ಗತಿಯಲ್ಲಿ ಅರ್ಧಶತಕ ಬಾರಿಸಿದ ದಾಖಲೆ ಬರೆದಿದ್ದಾರೆ.

ಸೋಮವಾರ ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ಪಂದ್ಯದಲ್ಲಿ ಗಪ್ಟಿಲ್ ಕೇವಲ 17 ಎಸೆತಗಳಲ್ಲಿ 5 ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ನೆರವಿನಿಂದ 50 ರನ್ ಪೂರೈಸಿದರು. ಆದರೆ, ಒಂದು ರನ್‌ನಿಂದ ವಿಶ್ವ ದಾಖಲೆಯಿಂದ ವಂಚಿತರಾದರು. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ 2015 ರ ಆರಂಭದಲ್ಲಿ ವೆಸ್ಟ್‌ಇಂಡೀಸ್‌ ತಂಡದ ವಿರುದ್ಧ ಕೇವಲ 16 ಎಸೆತಗಳಲ್ಲಿ ಅತ್ಯಂತ ವೇಗದ ಅರ್ಧಶತಕ ಹಾಗೂ 31 ಎಸೆತಗಳಲ್ಲಿ ವೇಗದ ಶತಕ ಸಿಡಿಸಿದ್ದ ದಾಖಲೆ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

Martin Guptill sets record for fastest ODI fifty by a New Zealand cricketer

ಕುಲಸೇಖರ ಎಸೆದ ಓವರ್‌ನಲ್ಲಿ 14 ರನ್ ಗಳಿಸಿದ ಗಪ್ಟಿಲ್ ದುಶ್ಮಂತ್ ಚಾಮೀರ್ ಎಸೆದ ಮುಂದಿನ ಓವರ್‌ನಲ್ಲಿ 26 ರನ್ ಚೆಚ್ಚಿದ ಗಪ್ಟಿಲ್ ಒಟ್ಟಾರೆ, 9 ಬೌಂಡರಿ, 8 ಸಿಕ್ಸರ್ ಹೊಡೆದರು. ಗಪ್ಟಿಲ್ ಬಿರುಸಿನ ಬ್ಯಾಟಿಂಗ್‌ನಿಂದಾಗಿ ಕಿವೀಸ್ ತಂಡ 118 ರನ್ ಗುರಿಯನ್ನು ಕೇವಲ 8.2 ಓವರ್‌ಗಳಲ್ಲಿ ತಲುಪಿತು.

ಈ ಪಂದ್ಯದಲ್ಲಿ ಸಾಧಿಸಲಾದ ದಾಖಲೆಗಳು:
* ಮಾರ್ಟಿನ್ ಗಪ್ಟಿಲ್ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ 2ನೇ ವೇಗದ ಅರ್ಧಶತಕ ಬಾರಿಸಿದರು.
* ಕಿವೀಸ್‌ನ ಪರ ವೇಗದ ಅರ್ಧಶತಕ ಸಿಡಿಸಿದ ಮೊದಲ ಬ್ಯಾಟ್ಸ್ ಮನ್ ಅದ ಗಪ್ಟಿಲ್. 2015ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಬ್ರೆಂಡನ್ ಮೆಕಲಮ್ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ದಾಖಲೆಯನ್ನು ಮುರಿದರು.
* ನ್ಯೂಜಿಲೆಂಡ್ 39 ಎಸೆತಗಳಲ್ಲಿ 100 ರನ್ ಪೂರೈಸಿತು. 2002ರ ನಂತರ ತಂಡವೊಂದು ವೇಗವಾಗಿ ಗಳಿಸಿದ ರನ್ ಇದಾಗಿದೆ.
* ನ್ಯೂಜಿಲೆಂಡ್ ಇನ್ನೂ 250 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ಏಕದಿನ ಇತಿಹಾಸದಲ್ಲಿ ಏಳನೇ ಅತ್ಯಂತ ದೊಡ್ಡ ಗೆಲುವು
* ನ್ಯೂಜಿಲೆಂಡ್ ಮೂರು ಬಾರಿ 250 ಹಾಗೂ ಅದಕ್ಕಿಂತ ಹೆಚ್ಚು ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿದೆ. ಶ್ರೀಲಂಕಾ ಎರಡು ಬಾರಿ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ತಲಾ ಒಂದು ಬಾರಿ ಈ ಸಾಧನೆ ಮಾಡಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Guptill ensured the absence of Brendon McCullum's particular brand of pyrotechnics would not reduce the chase for 118 into a fizzer at Hagley Oval as the opener went perilously close to assembling the fastest-ever half century in the 50-over format.
Please Wait while comments are loading...