ಟೆಸ್ಟ್ ಕ್ರಿಕೆಟ್ಟಿಗೆ ಗುಡ್ ಬೈ ಹೇಳಲು ಸಿದ್ಧರಾದ ಟಿ20 ಸ್ಪೆಷಲಿಸ್ಟ್ !

Posted By:
Subscribe to Oneindia Kannada

ಜಮೈಕಾ, ಜುಲೈ 28: ಟೀಂ ಇಂಡಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ವೆಸ್ಟ್ ಇಂಡೀಸ್ ತಂಡ ಸಿದ್ಧತೆ ನಡೆಸಿರುವ ಸಂದರ್ಭದಲ್ಲೇ ವಿಂಡೀಸ್ ತಂಡದ ಅನುಭವಿ ಕ್ರಿಕೆಟರ್ ಮರ್ಲಾನ್ ಸ್ಯಾಮುಯೆಲ್ಸ್ ಅವರು ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳುವ ಸುದ್ದಿ ಬಂದಿದೆ. ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿ ತಮ್ಮ ನೆಚ್ಚಿನ ಟಿ20 ಮಾದರಿ ಪಂದ್ಯಗಳನ್ನಾಡಲು ಸ್ಯಾಮುಯೆಲ್ಸ್ ಬಯಸಿದ್ದಾರಂತೆ.

ವೆಸ್ಟ್ ಇಂಡೀಸ್ ಕ್ರಿಕೆಟ್‌ ಮಂಡಳಿ ಜತೆ ಆಟಗಾರರ ತಿಕ್ಕಾಟ ಮುಂದುವರೆದಿರುವುದರಿಂದ ಟೆಸ್ಟ್ ಕ್ರಿಕೆಟ್ ಆಗಿ ಸಂಪಾದನೆ ಮಾಡುವುದು ಸಾಕಾಗುತ್ತಿಲ್ಲ. ಕಡಿಮೆ ಸಂಭಾವನೆ ಪಡೆದು ಟೆಸ್ಟ್ ಆಡುವುದಕ್ಕಿಂತ ಟಿ20 ಅಂತಾರಾಷ್ಟ್ರೀಯ ಪಂದ್ಯ ಹಾಗೂ ಕೆರಿಬಿಯನ್ ಲೀಗ್ ಆಡುವುದು ಉತ್ತಮ ಎಂದು ಸ್ಯಾಮುಯೆಲ್ಸ್ ಹೇಳಿಕೊಂಡಿದ್ದಾರೆ.[12 ಸಾವಿರ ರನ್ ಕ್ಲಬ್ ಸೇರಿದ ವಿರಾಟ್ ಕೊಹ್ಲಿ]

Marlon Samuels hints quitting Test cricket

ವೆಸ್ಟ್ ಇಂಡೀಸ್ ಪರ ಸ್ಯಾಮುಯೆಲ್ಸ್ ಅವರು 65 ಟೆಸ್ಟ್ ಆಡಿ, 3.673 ರನ್‌ ಹೊಡೆದಿದ್ದಾರೆ 33 ರನ್ ಸರಾಸತ್ರಿ ಹೊಂದಿದ್ದು, ಹಾಲಿ ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅನುಭವಿ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. ಆದರೆ. ವಿಂಡೀಸ್‌ ತಂಡಕ್ಕೆ 2 ಟಿ20 ವಿಶ್ವಕಪ್‌ ಗೆಲ್ಲಿಸಿ ಕೊಟ್ಟಿರುವ ಸ್ಯಾಮುಯೆಲ್ಸ್ ಒಲವು ಟಿ20 ಕಡೆಗಿದೆ.[ಮ್ಯಾಚ್ ಇಲ್ಲದಾಗ ಟೀಂ ಇಂಡಿಯಾ ಆಟಗಾರರು ಏನ್ಮಾಡ್ತಾರೆ?]

2016ರ ಟಿ 20 ವಿಶ್ವಕಪ್‌ ಪೈನಲ್‌ನಲ್ಲಿ ಸ್ಯಾಮುಯೆಲ್ಸ್ 'ಮ್ಯಾನ್ ಆಫ್ ದಿ ಮ್ಯಾಚ್‌' ಆಗಿದ್ದರು. ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ಕ್ರಿಕೆಟ್‌ ಮಂಡಳಿ ' ಕ್ರಿಕೆಟ್ ಆಫ್‌ ದಿ ಇಯರ್‌' ಅವಾರ್ಡ್‌ ನೀಡಿ ಗೌರವಿಸಿತ್ತು.

ಸಿಪಿಎಲ್ ಅಲ್ಲದೆ ವಿವಿಧ ದೇಶಗಳು ಆಯೋಜಿಸುವ ಟಿ20 ಲೀಗ್‌ಗಳಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದು, ಹೆಚ್ಚು ಹಣ ಸಂಪಾದಿಸಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ಆಪ್ತ ವಲಯ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
35year old West Indies T20 specialist batsman Marlon Samuels hints at quitting Test cricket and prefer to play T20 Internationals and league cricket.
Please Wait while comments are loading...