ವೆಸ್ಟ್ ಇಂಡೀಸ್ ನ ಈ ಕ್ರಿಕೆಟಿಗ ಪಾಕಿಸ್ತಾನ ಆರ್ಮಿ ಸೇರುತ್ತಾನಂತೆ!!

Posted By:
Subscribe to Oneindia Kannada

ಲಾಹೋರ್, ಮಾರ್ಚ್ 13: ವೆಸ್ಟ್ ಇಂಡೀಸ್ ನ ಕ್ರಿಕೆಟಿಗ ಮರ್ಲಾನ್ ಸ್ಯಾಮ್ಯುಯೆಲ್ಸ್, ಪಾಕಿಸ್ತಾನ ಸೈನ್ಯಕ್ಕೆ ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಮನದ ಬಯಕೆಯನ್ನು ಟ್ವಿಟರ್ ನಲ್ಲಿ ವೀಡಿಯೋ ಸಂದೇಶದ ಮೂಲಕ ಬಹಿರಂಗಗೊಳಿಸಿರುವ ಅವರು, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಅವರ ನಾಯಕತ್ವ ಗುಣಗಳನ್ನು ಕೊಂಡಾಡಿದ್ದಾರೆ.[ಕೊಹ್ಲಿ ಬೆಂಬಲಕ್ಕೆ ಬಂದ ಮ್ಯಾಥ್ಯೂ ಹೇಡನ್]

Marlon Samuels Eager To Join Pakistan Army

ಅಂದಹಾಗೆ, ಮರ್ಲಾನ್ ಸ್ಯಾಮ್ಯುಯೆಲ್ಸ್ ಗೆ ಪಾಕಿಸ್ತಾನ ಸೇನೆಯ ಮೇಲೆ ಇಷ್ಟೊಂದು ಪ್ರೀತಿ ಬಂದಿರೋದಿಕ್ಕೆ ಕಾರಣ, ಇತ್ತೀಚೆಗೆ ಅಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯಕ್ಕೆ ನೀಡಲಾಗಿದ್ದ ಅಭೂತಪೂರ್ವ ಭದ್ರತೆ.

ಭಯೋತ್ಪಾದಕರ ಭೀತಿ ಹಿನ್ನೆಲೆಯಲ್ಲಿ ಲಾಹೋರ್ ನ ಗಡ್ಡಾಫಿ ಕ್ರೀಡಾಂಗಣದಲ್ಲಿ ಮಾರ್ಚ್ 5ರಂದು ನಡೆದಿದ್ದ ಪಿಎಸ್ಎಲ್ ಫೈನಲ್ ಪಂದ್ಯಕ್ಕೆ ಭಾರೀ ಭದ್ರತೆ ಏರ್ಪಡಿಸಲಾಗಿತ್ತು. ಹಾಗಾಗಿ, ಪಂದ್ಯವು ನಿರಾತಂಕವಾಗಿ ನಡೆಯಲು ಸಾಧ್ಯವಾಯಿತು ಎಂಬುದು ಮರ್ಲಾನ್ ಅನಿಸಿಕೆ.[ಐಸಿಸಿ ಶ್ರೇಯಾಂಕ: ವಿರಾಟ್ ಕೊಹ್ಲಿ ಮತ್ತೊಂದು ಸ್ಥಾನ ಕುಸಿತ]

ಹಾಗಾಗಿಯೇ, ಭದ್ರತೆಯ ಬಗ್ಗೆ ಕರಾರುವಾಕ್ ಆದ ಸೂತ್ರಗಳನ್ನು ಅಳವಡಿಸಿದ್ದ ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಅವರನ್ನು ಕೊಂಡಾಡಿದ್ದಾರೆ ಅವರು. ಅದಕ್ಕಾಗಿ ತಾವೂ ಪಾಕಿಸ್ತಾನ ಮಿಲಿಟರಿ ಸೇರುವ ಬಯಕೆ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, ಪಿಎಸ್ಎಲ್ ಫೈನಲ್ ನಲ್ಲಿ ಪೆಶಾವರ್ ಜಲ್ಮಿ ಹಾಗೂ ಖ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವನ್ನು 58 ರನ್ ಗಳಿಂದ ಸೋಲಿಸಿತ್ತು. ಮರ್ಲಾನ್ ಸ್ಯಾಮ್ಯುಯೆಲ್ಸ್ ಪೆಶಾವರ್ ತಂಡದ ಆಟಗಾರರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
West Indies cricketer Marlon Samuels has expressed his desire to join the Pakistan Army and saluted its Army chief, General Qamar Javed Bajwa, for the security and top class arrangements provided for the Pakistan Super League (PSL) final that was held at the Gaddafi Stadium in Lahore on March 5.
Please Wait while comments are loading...