ಮುಷ್ತಾಕ್ ಅಲಿ ಟಿ20:ಧೋನಿ ಬದಲಿಗೆ ನಾಯಕರಾದ ಮನೋಜ್ ತಿವಾರಿ

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 06: ಅಖಿಲ ಭಾರತ ವಲಯವಾರು ಟ್ವೆಂಟಿ20 ಟೂರ್ನಮೆಂಟ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪೂರ್ವ ವಲಯಕ್ಕೆ ಮನೋಜ್ ತಿವಾರಿ ಅವರನ್ನು ನಾಯಕರಾಗಿ ಸೋಮವಾರ(ಫೆಬ್ರವರಿ 06) ಆಯ್ಕೆ ಮಾಡಲಾಗಿದೆ. ಎಂಎಸ್ ಧೋನಿ ಅವರು ಟೂರ್ನಮೆಂಟ್ ನಿಂದ ಹೊರಗುಳಿದಿದ್ದರಿಂದ ಮನೋಜ್ ರನ್ನು ಆಯ್ಕೆ ಮಾಡಲಾಗಿದೆ.

15 ಮಂದಿಯಿರುವ- ತಂಡಕ್ಕೆ ನಾಯಕರಾಗಿ ಆಯ್ಕೆಯಾಗಿರುವ ಮನೋಜ್ ಅವರು ಉತ್ತಮ ಲಯದಲ್ಲಿಲ್ಲ. ಇರಾನಿ ಟ್ರೋಫಿಯಲ್ಲಿ 12 ಹಾಗೂ 7 ರನ್ ಗಳಿಸಿದ್ದರು. ಅಂತಾರಾಜ್ಯ ಟಿ20 ಲೀಗ್ ನಲ್ಲಿ ಪೂರ್ವ ವಲಯದ ಪರ ಆಡಿ ನಾಲ್ಕು, ಒಂದು ಹಾಗೂ 39ರನ್ ಮಾತ್ರ ಗಳಿಸಿದ್ದಾರೆ. ಆದರೂ, ಮನೋಜ್ ಮೇಲೆ ಜವಾಬ್ದಾರಿ ಹೊರೆಸಲಾಗಿದೆ.

Manoj Tiwary to lead 15-member East Zone squad in Mushtaq Ali T20

ಟೀಂ ಇಂಡಿಯಾದ ಮಾಜಿ ನಾಯಕ, ಬೆಂಗಾಲ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸೌರವ್ ಗಂಗೂಲಿ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿಸಭೆಯಲ್ಲಿ ಅರುಪ್ ಭಟ್ಟಾಚಾರ್ಯ(ಬೆಂಗಾಲ್), ದೆಬಶೀಸ್ ಮೊಹಾಂತಿ(ಒಡಿಶಾ), ಆಶೀಶ್ ಸಿನ್ಹಾ(ಜಾರ್ಖಂಡ್), ಮಣಿಮಾಯ್ ರಾಯ್ (ತ್ರಿಪುರ) ಹಾಗೂ ಸುಬ್ರಜಿತ್ ಸಿಕಿಯಾ(ಅಸ್ಸಾಂ) ಅವರಿದ್ದರು.

ಪೂರ್ವ ವಲಯ ತಂಡ : ಮನೋಜ್ ತಿವಾರಿ (ನಾಯಕ), ಸೌರಭ್ ತಿವಾರಿ (ಉಪ ನಾಯಕ), ಇಶಾನ್ ಕಿಶಾನ್ (ವಿಕೆಟ್ ಕೀಪರ್), ಶ್ರೀವತ್ಸ ಗೋಸ್ವಾಮಿ, ಕೆಬಿ ಅರುಣ್ ಕಾರ್ತಿಕ್, ವೃತ್ತಿಕ್ ಚಟರ್ಜಿ, ಶಬಾಜ್ ನದೀಂ, ಅಶೋಕ್ ದಿಂಡಾ, ಪ್ರೀತಂ ದಾಸ್, ಸಾಯನ್ ಘೋಶ್, ಬಿಪ್ಲವ್ ಸಮಂತ್ರಾಯ್, ಧೀರಜ್ ಸಿಂಗ್, ವಿರಾಟ್ ಸಿಂಗ್, ಅಮಿತ್ ವರ್ಮ, ಎಕೆ ಸರ್ಕಾರ್. ಬದಲಿ ಆಟಗಾರರು: ಪ್ರಗ್ನಾನ್ ಓಜಾ, ಸೂರ್ಯಕಾಂತ್ ಪ್ರಧಾನ್, ಪ್ರಮೋದ್ ಚಾಂಡಿಲ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Notwithstanding his lackluster form with the bat, Manoj Tiwary was today, February 5, named captain of the 15-member East Zone squad for the all-India Inter-Zonal Twenty20 tournament for the Syed Mushtaq Ali Trophy to be held in Mumbai from February 12.
Please Wait while comments are loading...