ಮನೀಶ್ ಪಾಂಡೆ ಶತಕ ವ್ಯರ್ಥ, ಆಸ್ಟ್ರೇಲಿಯಾಕ್ಕೆ ಜಯ

Posted By:
Subscribe to Oneindia Kannada

ಕ್ವೀನ್ಸ್ ಲ್ಯಾಂಡ್, ಆಗಸ್ಟ್ 30 : ನಾಯಕ ಮನೀಶ್ ಪಾಂಡೆ ಅವರು ಭರ್ಜರಿ ಶತಕದ ಹೊರತಾಗಿಯೂ ಆಸ್ಟ್ರೇಲಿಯಾ 'ಎ' ವಿರುದ್ಧ ಭಾರತ 'ಎ' 1 ರನ್ ಗಳ ಅಂತರದ ಸೋಲು ಕಂಡಿದೆ. ಮಂಗಳವಾರ (ಆಗಸ್ಟ್ 30) ಚತುಷ್ಕೋನ ಸರಣಿಯಲ್ಲಿ ರೋಚಕ ಸೋಲು ಕಂಡಿದೆ.

ಪಂದ್ಯದ ಸ್ಕೋರ್ ಕಾರ್ಡ್

ಆಸ್ಟ್ರೇಲಿಯಾ 'ಎ' ಮೊದಲು ಬ್ಯಾಟಿಂಗ್ ಮಾಡಿ 50 ಓವರ್ ಗಳಲ್ಲಿ 322 ರನ್ ಸ್ಕೋರ್ ಮಾಡಿತ್ತು. ಇದನ್ನು ಚೇಸ್ ಮಾಡಿದ ಭಾರತ 'ಎ' ತಂಡ 321ರನ್ ಗಳಿಸಿ ಸೋಲು ಕಂಡಿದೆ.

Manish Pandey ton in vain as India A lose by 1 run against Australia A

ಮನೀಶ್ ಪಾಂಡೆ ಅವರು ಸರಣಿಯಲ್ಲಿ ಎರಡನೇ ಶತಕ ಬಾರಿಸಿದರು. ಸಂಜು ಸಾಮ್ಸನ್ (87) ಗಳಿಸಿ ಗೆಲುವಿನ ಹತ್ತಿರಕ್ಕೆ ತಂದರು. ಕೊನೆ ಓವರ್ ನಲ್ಲಿ 9ರನ್ ಗಳಿಸಬೇಕಿತ್ತು. ಆದರೆ, ಆಸ್ಟ್ರೇಲಿಯಾದ ಕೇನ್ ರಿಚರ್ಡ್ಸನ್ ಅವರು ಉತ್ತಮ ಬೌಲಿಂಗ್ ಮಾಡಿ 8 ರನ್ ಮಾತ್ರ ಕೊಟ್ಟರು.

ಸಂಜು ಸಾಮ್ಸನ್ ಅವರು 2 ಎಸೆತಗಳಲ್ಲಿ 3 ರನ್ ಬೇಕಿದ್ದಾಗ ಸಾಮ್ಸನ್ ವಿಕೆಟ್ ಒಪ್ಪಿಸಿದರು. ಇನ್ನೊಂದು ತುದಿಯಲ್ಲಿದ್ದ ಜಯಂತ್ ಯಾದವ್ ಅವರು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾದರು.

ಇದಕ್ಕೂ ಮುನ್ನ ಪಾಂಡೆ ಅವರು 91 ಎಸೆತಗಳಲ್ಲಿ 110 ರನ್ ಅವರು ಮನದೀಪ್ ಸಿಂಗ್ (56) ಉತ್ತಮ ಜೊತೆಯಾಟ ಭಾರತಕ್ಕೆ ಗೆಲುವಿನ ಆಸೆ ಹುಟ್ಟಿಸಿತು. ಆದರೆ, 47ನೇ ಓವರ್ ನಲ್ಲಿ ಪಾಂಡೆ ಔಟ್ ಆಗುತ್ತಿದ್ದಂತೆ ಆಸೀಸ್ ಕಡೆಗ ಪಂದ್ಯ ವಾಲಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Skipper Manish Pandey's valiant 110 went in vain as India A lost by 1 run in the last over thriller against Australia A in the Quadrangular One day series in Australia on Tuesday (Aug 30).
Please Wait while comments are loading...