ಮನೀಶ್ ಪಾಂಡೆ ಭರ್ಜರಿ ಆಟದ ನಡುವೆಯೂ ಭಾರತ 'ಎ' ಕುಸಿತ

Posted By:
Subscribe to Oneindia Kannada

ಬ್ರಿಸ್ಬೇನ್, ಸೆ. 08: ಮನೀಶ್ ಪಾಂಡೆ ಅವರು 76 ಎಸೆತಗಳಲ್ಲಿ 77 ರನ್ ಗಳಿಸಿದರೂ ಆಸ್ಟ್ರೇಲಿಯಾ 'ಎ' ವಿರುದ್ಧ ಭಾರತ 'ಎ' ಕುಸಿತ ಕಂಡಿದೆ. ಗುರುವಾರ(ಸೆಪ್ಟೆಂಬರ್ 08) ನಾಲ್ಕು ದಿನಗಳ ಪಂದ್ಯದ ಸರಣಿ ಆರಂಭವಾಗಿದೆ. ಮಿಚೆಲ್ ಸ್ವೆಪ್ಸನ್ ಅವರ ಮಾರಕ ಬೌಲಿಂಗ್ ದಾಳಿಗೆ ತುತ್ತಾಗಿದೆ.

ಮಧ್ಯಮ ಕ್ರಮಾಂಕದಲ್ಲಿ ಆಡಿದ ಮನೀಶ್ ಪಾಂಡೆ ಅವರು 13 ಬೌಂಡರಿ ಹಾಗೂ ಒಂದು ಸಿಕ್ಸ್ ಬಾರಿಸಿ ಟೀಂ ಮೊತ್ತ 200ರನ್ ಗಡಿ ದಾಟುವಂತೆ ಮಾಡಿದರು. ಕೊನೆಗೆ 4 ವಿಕೆಟ್ ಕಳೆದುಕೊಂಡು 230ರನ್ ಸ್ಕೋರ್ ಮಾಡಿದೆ. ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ಎ ತಂಡ ವಿಕೆಟ್ ನಷ್ಟವಿಲ್ಲದೆ 24ರನ್ ಗಳಿಸಿದೆ.

Manish Pandey hits 77 but India A collapse to 230 in 1st innings Vs Aus A

ಭಾರತ ಎ ನಾಯಕ ನಮನ್ ಓಜಾ ಅವರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಬ್ಯಾಟ್ಸ್ ಮನ್ ಅಖಿಲ್ ಹೆರ್ವಾಡ್ಕರ್(34) ಹಾಗೂ ಫೈನ್ ಫಜಲ್ (48) ಗಳಿಸಿ ಉತ್ತಮ ಆರಂಭ ಒದಗಿಸಿದರು. ಆದರೆ, ಇಬ್ಬರ ವಿಕೆಟ್ ಬಿದ್ದ ಬಳಿಕ ಕುಸಿತ ಆರಂಭವಾಯಿತು.

ಶ್ರೇಯಸ್ ಐಯರ್ (19) ಕೂಡಾ ಬೇಗನೇ ಔಟ್ ಆದರು. ಪಾಂಡೆ ಹಾಗೂ ಕರುಣ ನಾಯರ್ (15) 70ರನ್ ಜೊತೆಯಾಟ ಮೂಲಕ ತಂಡದ ಮೊತ್ತ ಹೆಚ್ಚಿಸಿದರು. ಆದರೆ, ಸ್ವೆಪ್ಸನ್ ದಾಳಿ ಸಿಲುಕಿ ಭಾರತ ಎ ರನ್ ಗತಿ ಕುಂಟಿತವಾಯಿತು.

ಭಾರತ ಎ ಮೊದಲ ಇನ್ನಿಂಗ್ಸ್ : 81.3 ಓವರ್ಸ್ (ಮನೀಶ್ ಪಾಂಡೆ 77, ಎಂ ಸ್ವೆಪ್ಸನ್ 4/78), vs ಆಸ್ಟ್ರೇಲಿಯಾ ಎ ಮೊದಲ ಇನ್ನಿಂಗ್ಸ್ : 6 ಓವರ್ ಗಳಲ್ಲಿ 25/0 (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Manish Pandey blasted a quick-fire 76-ball 77 before Mitchell Swepson returned with a four-wicket haul to dismiss India A for 230 in their first innings against Australia A in the opening match of the unofficial four-day Test Series here on Thursday (Sep 8).
Please Wait while comments are loading...