ಮಿಂಚಿದ ಮನೀಶ್, ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 'ಎ' ಗೆ ಜಯ

Posted By:
Subscribe to Oneindia Kannada

ಪ್ರಿಟೋರಿಯಾ, ಆಗಸ್ಟ್ 04 :ನಾಯಕ ಮನೀಷ್ ಪಾಂಡೆ ಅವರ ಉತ್ತಮ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ 'ಎ' ತಂಡವನ್ನು ಭಾರತ 'ಎ' ತಂಡ ಸೋಲಿಸಿದೆ.

ಗುರುವಾರದ ಪಂದ್ಯದಲ್ಲಿ ಒಂದು ವಿಕೆಟ್ ಅಂತರದಿಂದ ಭಾರತ ಎ ತಂಡ ರೋಚಕ ಜಯ ದಾಖಲಿಸಿತು. ಈ ಗೆಲುವಿನ ಮೂಲಕ ಮೂರು ರಾಷ್ಟ್ರಗಳ ಏಕದಿನ ಕ್ರಿಕೆಟ್ ಸರಣಿಯ ಫೈನಲ್ ತಲುಪುವ ಆಸೆ ಇನ್ನೂ ಜೀವಂತವಾಗಿದೆ.

Manish Pandey Helps India A Beat SA A in a Thrilling Game

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಅಫ್ರಿಕಾ ಎ ಪರ ಕ್ಲಾಸೆನ್ ಆಕರ್ಷಕ 127ರನ್ ಚೆಚ್ಚಿದರು. ಭಾರತದ ಪರ ವೇಗಿಗಳಾದ ಸಿದ್ದಾರ್ಥ್ ಕೌಲ್ (3 ವಿಕೆಟ್) ಹಾಗೂ ಶಾರ್ದೂಲ್ ಠಾಕೂರ್ (4ವಿಕೆಟ್) ಮತ್ತೊಮ್ಮೆ ಮಿಂಚಿದರು.

ಮಿಂಚಿದ ಮನೀಶ್, ಅಫ್ಘನ್ ವಿರುದ್ಧ ಭಾರತ 'ಎ' ತಂಡಕ್ಕೆ ಜಯ

267ರನ್ ಚೇಸ್ ಮಾಡಿದ ಭಾರತ ಎ ತಂಡ ನಿರಂತರವಾಗಿ ವಿಕೆಟ್ ಕಳೆದುಕೊಂಡು ಆತಂಕ ಮೂಡಿಸಿತು. ಆದರೆ, ಮನೀಶ್ 85 ಎಸೆತಗಳಲ್ಲಿ 93ರನ್ ಹಾಗೂ ಸಂಜು ಸ್ಯಾಮ್ಸನ್ 68ರನ್ ಗಳಿಸಿ ಗೆಲುವಿನತ್ತ ಮುನ್ನಡೆಸಿದರೆ, ಕೊನೆಯಲ್ಲಿ ಕೃನಾಲ್ ಪಾಂಡೆ 15 ಎಸೆತಗಳಲ್ಲಿ 25ರನ್ ಚೆಚ್ಚಿ ಗೆಲುವಿಗೆ ತಮ್ಮ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ 'ಎ': 266 (ಹೆನ್ರಿಕ್ ಕ್ಲಾಸೆನ್‌ 127, ವಿಲ್ಲೆಮ್‌ ಮಲ್ಡರ್‌ 66; ಶಾರ್ದೂಲ್ ಠಾಕೂರ್‌ 35ಕ್ಕೆ4, ಸಿದ್ಧಾರ್ಥ್‌ ಕೌಲ್‌ 41ಕ್ಕೆ3)

ಭಾರತ 'ಎ'; 49.4 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 267 (ಮನೀಶ್ ಪಾಂಡೆ 93, ಸಂಜು ಸ್ಯಾಮ್ಸನ್‌ 68, ಕೃಣಾಲ್ ಪಾಂಡ್ಯ 25). (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Manish Pandey played a captain's knock to guide India A to a one-wicket victory over South Africa A, almost clinching a place in the final of the tri- series one-day tournament on Thursday.
Please Wait while comments are loading...