ಮಿಂಚಿದ ಮನೀಶ್, ಅಫ್ಘನ್ ವಿರುದ್ಧ ಭಾರತ 'ಎ' ತಂಡಕ್ಕೆ ಜಯ

Posted By:
Subscribe to Oneindia Kannada

ಪ್ರಿಟೋರಿಯಾ, ಆಗಸ್ಟ್ 02: ನಾಯಕ ಮನೀಶ್ ಪಾಂಡೆ, ರಿಷಬ್ ಪಂತ್ ಅವರ ಅರ್ಧಶತಕಗಳ ನೆರವಿನಿಂದ ಅಫ್ಘಾನಿಸ್ತಾನ ಎ ತಂಡದ ವಿರುದ್ಧ ಭಾರತ ಎ ತಂಡ ಸುಲಭ ಜಯ ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡವು ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 322ರನ್‌ ಗಳಿಸಿತು. ಬೃಹತ್ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 209ರನ್‌ಗಳಿಗೆ ಆಟಾಗಿ ಸೋಲೊಪ್ಪಿಕೊಂಡಿತು.

Manish Pandey guides India A to a 113-run win over Afghanistan A

ಎಲ್‌ಸಿ ಡಿವಿಲಿಯರ್ಸ್ ಓವಲ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮನೀಶ್ ಪಾಂಡೆ ಔಟಾಗದೆ 86 ರನ್( 87ಎಸೆತಗಳು, 9X4, 1X6) ಗೂ ಮುನ್ನ ಶ್ರೇಯಸ್ ಆಯ್ಯರ್ ಉತ್ತಮ ಆಟ ಪ್ರದರ್ಶಿಸಿದರು.

ಶ್ರೇಯಸ್ 44 ರನ್ (55 ಎಸೆತಗಳು, 6X4) ಗಳಿಸಿ ಔಟಾದರು. ನಂತರ ರಿಷಭ್ ‍ಪಂತ್‌ 60ರನ್ (59ಎಸೆತಗಳು, 5X4, 1X6), ಕೃನಾಲ್ ಪಾಂಡ್ಯ 48(27 ಎಸೆತಗಳು, 7X4, 1X6), ದೀಪಕ್ ಹೂಡಾ 32 ರನ್ ಗಳಿಸಿ ಮೊತ್ತವನ್ನು 322ರನ್ ಸ್ಕೋರಿಗೆ ಏರಿಸಿದರು.

Kanndiga Manish Pandey, Karun Nair To Lead India A Teams | Oneindia Kannada

ಅಫ್ಘಾನಿಸ್ತಾನದ ಪರ ಜಾವೇದ್ ಅಹಮದಿ 21, ಯೂನಸ್ ಅಹಮದ್‌ಜಾಯ್‌ 28, ರಹಮಾತ್ ಷಾ 28 ರನ್ ಗಳಿಸಿದರು. ಭಾರತದ ಪರ ಸಿದ್ದಾರ್ಥ್ ಕೌಲ್ 35ಕ್ಕೆ2, ಮೊಹಮ್ಮದ್ ಸಿರಾಜ್ 49ಕ್ಕೆ3, ವಿಜಯ್‌ ಶಂಕರ್‌ 21ಕ್ಕೆ2 ಉತ್ತಮ ಬೌಲಿಂಗ್ ಪ್ರದರ್ಶಿಸಿದರು.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Skipper Manish Pandey continued his good form as India A outclassed Afghanistan A by 113 runs to record their second victory in the tri-nation one-day series on Tuesday.
Please Wait while comments are loading...